ಯುವತಿ ಅಪಹರಿಸಿ ನಿರಂತರ ಅತ್ಯಾಚಾರ, ಮನುಷ್ಯರ ಮಾಂಸ ತಿನ್ನಿಸಿದ ಕೀಚಕರು

By Sharath Sharma  |  First Published Jul 1, 2022, 12:42 PM IST

ಮಹಿಳೆಯನ್ನು ಅಪಹರಿಸಿ ನಿರಂತರ ಅತ್ಯಾಚಾರ ಮಾಡಿದ ಉಗ್ರಗಾಮಿ ಸಂಘಟನೆ, ಆಕೆಗೆ ಮನುಷ್ಯರ ಮಾಂಸವನ್ನು ತಿನ್ನಿಸಿ ಕ್ರೌರ್ಯ ಮೆರೆದಿದ್ದಾರೆ. ಒಂದು ಕೀಚಕರ ಪಡೆಯಿಂದ ಬಿಡುಗಡೆಯಾಗಿ ಮನೆಗೆ ಹೋಗುತ್ತಿದ್ದ ವೇಳೆ ಮತ್ತೊಂದು ಸಂಘಟನೆ ಆಕೆಯನ್ನು ಅಪಹರಿಸಿ ಮತ್ತೆ ಅತ್ಯಾಚಾರ ಮಾಡಿದೆ. ಅಲ್ಲೂ ಕೂಡ ಬಲವಂತದಿಂದ ಮನುಷ್ಯರ ಮಾಂಸ ತಿನ್ನಿಸಿದ್ದಾರೆ.


ಕಾಂಗೋಲಿಸ್‌ (Congolese) ಯುವತಿಯೊಬ್ಬಳನ್ನು ಎರಡು ಬಾರಿ ಅಪಹರಿಸಿ ನಿರಂತರ ಅತ್ಯಾಚಾರ ಮಾಡಿದ ಘಟನೆ ರಿಪಬ್ಲಿಕ್‌ ಆಫ್‌ ಕಾಂಗೋದಲ್ಲಿ (Republic of Congo) ನಡೆದಿದೆ. ಯುವತಿ ಕಾಂಗೋಲಿಸ್‌ ಮಾನವ ಹಕ್ಕುಗಳ ಆಯೋಗಕ್ಕೆ (Congolese Human Rights Group) ಈ ಬಗ್ಗೆ ಮಾಹಿತಿ ನೀಡಿದ್ದು, ನಿರಂತರ ಅತ್ಯಾಚಾರ ಮಾಡುವುದಲ್ಲದೇ, ಮನುಷ್ಯರ ಮಾಂಸವನ್ನು ಒತ್ತಾಯಪೂರ್ವಕವಾಗಿ ಅಡುಗೆ ಮಾಡಿ ತಿನ್ನಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಈ ಸಂಬಂಧ ಯುನೈಟೆಡ್‌ ನೇಷನ್ಸ್‌ ಸೆಕ್ಯುರಿಟಿ ಕೌನ್ಸಿಲ್‌ಗೆ (United Nations Security Council) ಕಾಂಗೋ ಮಾನವ ಹಕ್ಕುಗಳ ಆಯೋಗ ಬುಧವಾರ ವರದಿ ಸಲ್ಲಿಸಿದೆ. 

ಜುಲಿಯೆನ್‌ ಲುಸೆಂಜ್‌, ಮಹಿಳಾ ಹಕ್ಕುಗಳ ಸಮಗ್ರ ಶಾಂತಿ ಮತ್ತು ಅಭಿವೃದ್ಧಿಗಾಗಿ ಒಗ್ಗಟ್ಟು ಸಂಸ್ಥೆಯ ಮುಖ್ಯಸ್ಥೆ, ಸಂತ್ರಸ್ಥೆ ಅನುಭವಿಸಿದ ನೋವನ್ನು ಕೌನ್ಸಿಲ್‌ ಮುಂದೆ ವಿವರಿಸಿದ್ದಾರೆ. ಕಾಂಗೋದಲ್ಲಿ ಸರ್ಕಾರ ಮತ್ತು ಬಂಡುಕೋರರ ನಡುವೆ ಮೇ ತಿಂಗಳಿಂದ ಯುದ್ಧ ಆರಂಭವಾಗಿದೆ. ಪ್ರತಿನಿತ್ಯ ಸೇನಾಪಡೆ ಮತ್ತು ಬಂಡುಕೋರರ ನಡುವೆ ಹೊಡೆದಾಟ ನಡೆಯುತ್ತಲೇ ಇದೆ. ಹಲವಾರು ಬಂಡುಕೋರರು ಮತ್ತು ಸೇನಾಪಡೆಯ ಸೈನಿಕರು ಪ್ರಾಣ ಬಿಟ್ಟಿದ್ದಾರೆ. ಯುನೈಟೆಡ್‌ ನೇಷನ್ಸ್‌ ಸೆಕ್ಯುರಿಟಿ ಕೌನ್ಸಿಲ್‌ ಕಾಂಗೋದಲ್ಲೇ ಬೀಡು ಬಿಟ್ಟಿದ್ದು, ಪರಿಸ್ಥಿತಿಯ ಅವಲೋಕನ ಮಾಡುತ್ತಿದೆ. 

Tap to resize

Latest Videos

ಮಹಿಳಾ ಹಕ್ಕುಗಳ ಆಯೋಗದ ಜುಲಿಯೆನ್‌ ನೀಡಿರುವ ಮಾಹಿತಿಯ ಪ್ರಕಾರ ಮಹಿಳೆಯೊಬ್ಬರು ಅಪಹರಣಕ್ಕೊಳಗಾದ ಇನ್ನೊಬ್ಬ ಮಹಿಳೆಯನ್ನು ಬಿಡಿಸಿಕೊಂಡು ಬರಲು ಹಣ ತೆಗೆದುಕೊಂಡು ಹೋದಾಗ ಅಪಹರಿಸಲಾಗಿದೆ. ಕೊಡೆಕೊ ಉಗ್ರಗಾಮಿಗಳು ಮಹಿಳೆಯನ್ನು ಅಪಹರಿಸಿದ್ದಾರೆ. ಅದಕ್ಕೂ ಮುನ್ನ ಸಂತ್ರಸ್ಥೆಯ ಸಂಬಂಧಿಯೊಬ್ಬಳನ್ನು ಕೊಡೆಕೊ ಉಗ್ರಗಾಮಿಗಳು ಅಪಹರಿಸಿ ಬಿಡುಗಡೆಗೆ ಹಣ ಕೇಳಿದ್ದರು. ಹಣ ತೆಗೆದುಕೊಂಡು ಹೋದಾಗ, ಆಕೆಯನ್ನೂ ಅಪಹರಿಸಿದ್ದಾರೆ. ಸಂತ್ರಸ್ಥೆಯ ಪ್ರಕಾರ, ಆಕೆಯ ಮೇಲೆ ನಿರಂತರ ಅತ್ಯಾಚಾರ ಮಾಡಲಾಗಿದೆ ಮತ್ತು ದೈಹಿಕವಾಗಿ ಹಿಂಸೆ ನೀಡಲಾಗಿದೆ. ನಂತರ ಯುವತಿಯ ಕಣ್ಣ ಮುಂದೆಯೇ ವ್ಯಕ್ತಿಯೊಬ್ಬನ ಕತ್ತು ಕತ್ತರಿಸಲಾಗಿದೆ. 

"ವ್ಯಕ್ತಿಯನ್ನು ನನ್ನ ಕಣ್ಣ ಮುಂದೆ ಕತ್ತು ಕತ್ತರಿಸಿ ಸಾಯಿಸಿದರು. ನಂತರ ಆತನ ಕರುಳನ್ನು ಬಗೆದು ತೆಗೆದರು. ಅದನ್ನು ಅಡುಗೆ ಮಾಡುವಂತೆ ನನಗೆ ಹಿಂಸೆ ನೀಡಿ ಮಾಡಿಸಿದರು. ಎರಡು ಪಾತ್ರಯಲ್ಲಿ ನೀರು ಕೊಟ್ಟು, ಮಾಂಸ ಬೇಯಿಸುವಂತೆ ಹೇಳಿದರು. ನಂತರ ಅದನ್ನು ನನಗೇ ತಿನ್ನಿಸಿದರು," ಎಂದು ಸಂತ್ರಸ್ಥೆ ನೋವು ತೋಡಿಕೊಂಡಿದ್ದಾಳೆ. 

ಇದನ್ನೂ ಓದಿ: 61 ವರ್ಷದ ಶಂಶದ್‌ನನ್ನು ಪ್ರೀತಿಸಿ ಮದುವೆಯಾದ 18 ವರ್ಷದ ಆಲಿಯಾ, ವೈರಲ್ ಅದ ಲವ್‌ ಸ್ಟೋರಿ!

ಕೆಲ ದಿನಗಳ ನಂತರ ಕೊಡೆಕೊ ಉಗ್ರಗಾಮಿ ಸಂಘಟನೆ ಬಿಡುಗಡೆ ಮಾಡಿದೆ. ಅಲ್ಲಿಂದ ಮನೆಗೆ ವಾಪಸಾಗುತ್ತಿರುವಾಗ ಮತ್ತೊಂದು ಉಗ್ರಗಾಮಿ ಸಂಘಟನೆ ಆಕೆಯನ್ನು ಅಪಹರಿಸಿದೆ ಎಂದು ಜುಲಿಯೆನ್‌ ಹೇಳಿದ್ದಾರೆ. ಅಪಹರಿಸಿದ ನಂತರ ಮತ್ತೆ ಸಂತ್ರಸ್ಥೆಯ ಮೇಲೆ ಎರಡನೇ ಉಗ್ರಗಾಮಿ ತಂಡ ಕೂಡ ನಿರಂತರ ಅತ್ಯಾಚಾರ ಮಾಡಿದೆ ಎಂದು ಜುಲಿಯೆನ್‌ ಮಾಹಿತಿ ನೀಡಿದ್ದಾರೆ. "ನಂತರ ಮತ್ತೆ ಮನುಷ್ಯರ ಮಾಂಸ ಬೇಯಿಸಿ ತಿನ್ನುವಂತೆ ಅವರೂ ನನಗೆ ಹಿಂಸೆ ಕೊಟ್ಟರು," ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ. 

ಜುಲಿಯೆನ್‌ ಕೇವಲ ಕೊಡೆಕೊ ಮಿಲಿಟಂಟ್‌ ಗ್ರೂಪ್‌ ಹೆಸರನ್ನು ಮಾತ್ರ ಕೌನ್ಸಿಲ್‌ಗೆ ಹೇಳಿದ್ದಾರೆ. ಎರಡನೇ ಮಿಲಿಟಂಟ್‌ ಗ್ರೂಪಿನ ಹೆಸರನ್ನು ಪ್ರಸ್ತಾಪಿಸಿಲ್ಲ. ಕೊಡೆಕೊ ಸಂಘಟನೆಯಿಂದ ಪ್ರತಿಕ್ರಿಯೆಗೆ ಕಾಂಗೋ ಮಾಧ್ಯಮಗಳು ಪ್ರಯತ್ನಿಸಿವೆಯಾದರೂ ಸಂಪರ್ಕ ಲಭ್ಯವಾಗಿಲ್ಲ. 

ಇದನ್ನೂ ಓದಿ: ಹೊಟ್ಟೆ ನೋವೆಂದು ಟಾಯ್ಲೆಟ್‌ಗೆ ಹೋದಾಗ ಹುಟ್ಟಿತ್ತು ಮಗು!

ಕೊಡೆಕೊ ಸಂಘಟನೆ ದಶಕದಿಂದ ಸರ್ಕಾರದ ವಿರುದ್ಧ ಭೂಮಿಗಾಗಿ, ನೈಸರ್ಗಿಕ ಸಂಪನ್ಮೂಲಕ್ಕಾಗಿ ಸಂಘರ್ಷ ನಡೆಸುತ್ತಲೇ ಇದೆ. ಈ ಹೋರಾಟದಲ್ಲಿ ಸಾವಿರಾರು ಜನ ಪ್ರಾಣ ಬಿಟ್ಟಿದ್ದರೆ, ಲಕ್ಷಾಂತರ ಜನ ಸೂರು ಕಳೆದುಕೊಂಡಿದ್ದಾರೆ. ಕಾಂಗೋ ಬಡದೇಶವಾದರೂ ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿದೆ. ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆ ಕಳೆದ ಎರಡು ದಶಕಗಳಿಂದ ಕಾಂಗೋದಲ್ಲೇ ಬೀಡುಬಿಟ್ಟಿದೆ. ಕಾಂಗೋ ದೇಶದ ಸೈನ್ಯ ಉಗ್ರಗಾಮಿ ಸಂಘಟನೆಗಳ ಜೊತೆ ನಿರಂತರ ಹೋರಾಟ ಮಾಡುತ್ತಿದೆ. 

click me!