ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ವಿಮಾನದಲ್ಲಿ ಕಿಟಕಿ ಪಕ್ಕದ ಸೀಟಿನ ಬಳಿ ಹೋಗಲು ಕುಳಿತಿದ್ದ ಸಹ ಪ್ರಯಾಣಿಕರ ಸೀಟಿನ ಹ್ಯಾಂಡಲ್ ಮೇಲೆ ಹತ್ತಿ ಮುಂದೆ ಹೋಗಿ ಕುಳಿತ ಘಟನೆ ನಡೆದಿತ್ತು. ಮಹಿಳೆಯ ಈ ವರ್ತನೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಈಗ ಮತ್ತೊಬ್ಬ ಮಹಿಳೆಯ ಅಸಭ್ಯ ನಡತೆಯ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವವರ ಬಗ್ಗೆ ಜನ ಸಾಮಾನ್ಯರು ಊಹಿಸುವುದು ಸುಶಿಕ್ಷಿತರು, ಸಂಸ್ಕಾರವಂತರು, ಘನತೆಯ ಬದುಕನ್ನು ಬದುಕುತ್ತಿರುವವರು ಎಂದು. ಆದರೆ ಅವರ ಕೆಲ ವರ್ತನೆಗಳು (behaviour) ಇವರು ಸುಶಿಕ್ಷಿತರೇ ಎಂದು ಪ್ರಶ್ನೆ ಮಾಡುವಂತೆ ಮಾಡುತ್ತದೆ. ವಿಮಾನದಲ್ಲಿ ಪ್ರಯಾಣಿಸುವಾಗ ಸಹ ಪ್ರಯಾಣಿಕರಿಗೆ ಕಿರಿಕಿರಿಯಾಗದಂತೆ ವರ್ತಿಸಬೇಕು. ಅವರೂ ನಮ್ಮಂತೆ ಹಣ ನೀಡಿಯೇ ವಿಮಾನ ಏರಿರುತ್ತಾರೆ ಎಂಬ ಸಣ್ಣ ಸಾಮಾನ್ಯ ಜ್ಞಾನ (common sense) ವನ್ನು ಕೆಲವರು ಹೊಂದಿರುವುದೇ ಇಲ್ಲ.
ವಿಂಡೋ ಪಕ್ಕಾ ಹೋಗಲು ಸೀಟ್ ಮೇಲೆ ಹತ್ತೋದಾ ಈ ನಾರಿ? ಥೋ ಇದೆಂಥಾ ವರ್ತನೆ?
ವಿನಾಕಾರಣ ಸಹ ಪ್ರಯಾಣಿಕರಿಗೆ ಕಿರುಕುಳ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಇಲ್ಲೊಬ್ಬಳು ಮಹಿಳೆ (woman) ವಿಮಾನದಲ್ಲಿ ಪ್ರಯಾಣಿಸುತ್ತಿರುವ ವೇಳೆ ತನ್ನ ಕಾಲನ್ನು ಮುಂಭಾಗದ ಸೀಟಿನ ಮೇಲೆ ಇರಿಸಿದ್ದಾಳೆ. ಈಕೆ ಹೀಗೆ ಬೇರೆಯವರ ಸೀಟಿನ ಮೇಲೆ ಕಾಲಿರಿಸುವಾಗ ತನ್ನ ಪಾದರಕ್ಷೆಯನ್ನು ಕೂಡ ಕಳಚಿಲ್ಲ. ಇದು ಮುಂಬದಿ ಪ್ರಯಾಣಿಕನ ತಲೆ ಮೇಲೆ ಈಕೆ ಕಾಲು ಇರಿಸಿದಂತೆ ಕಾಣುತ್ತಿದೆ. ಕಾಲನ್ನು ಮುಂಭಾಗದ ಸೀಟಿನ ಮೇಲಿರಿಸಿ ತನ್ನ ಸೀಟಿಗೆ ಒರಗಿಕೊಂಡು ಈಕೆ ಆರಾಮವಾಗಿ ನಿದ್ದೆ ಮಾಡುತ್ತಿದ್ದಾಳೆ.
ಪಾಲ್ ಸ್ಟೋಥಾರ್ಡ್ ಎಂಬುವವರು ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಈ ಘಟನೆ ನಡೆದಿದ್ದು, ಸಹ ಪ್ರಯಾಣಿಕಳ ವರ್ತನೆಯ ಫೋಟೋ ತೆಗೆದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ವಿಮಾನದಲ್ಲಿ ನನ್ನ ಪಕ್ಕದಲ್ಲಿರುವ ಮಹಿಳೆ ಎಂದು ಬರೆದು ಟ್ವಿಟ್ಟರ್‌ನಲ್ಲಿ ಅವರು ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಆಗಸದಲ್ಲಿ ಸ್ಥಗಿತಗೊಂಡ ವಿಮಾನದ ಎಸಿ : ತಲೆ ತಿರುಗಿ ಬಿದ್ದ 3 ಪಯಣಿಗರು
ಮಹಿಳಾ ಪ್ರಯಾಣಿಕಳು ಕಾಲಿಗೆ ಗಮ್ ಬೂಟ್ ಧರಿಸಿ ತನ್ನ ಕಾಲುಗಳನ್ನು ಮುಂಭಾಗದ ಸೀಟಿನ ಹೆಡ್‌ರೆಸ್ಟ್‌ನಲ್ಲಿ ಇರಿಸಿದ್ದಾಳೆ. ಮುಂಭಾಗದಲ್ಲಿ ಕುಳಿತಿರುವ ಪ್ರಯಾಣಿಕನ ತಲೆಯಿಂದ ಕೇವಲ ಇಂಚುಗಳಷ್ಟು ದೂರದಲ್ಲಿ ಇವಳ ಕಾಲಿದೆ. ಜೂನ್ 27 ಪಾಲ್ ಸ್ಟೋಥಾರ್ಡ್ ಈ ಫೋಟೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಈಕೆಯ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅಸಹ್ಯಕರ ವರ್ತನೆ ಎಂದು ನೆಟ್ಟಿಗರು ಕೆಂಡಕಾರಿದ್ದಾರೆ.
ನ್ಯಾಯವಾಗಿ ಹೇಳಬೇಕೆಂದರೆ ಇದು ನನಗೆ ತುಂಬಾ ಕೋಪವನ್ನುಂಟು ಮಾಡುತ್ತಿದೆ. ಪುಣ್ಯ ಅವಳ ಪಕ್ಕದಲ್ಲಿ ನಾನು ಕುಳಿತಿಲ್ಲ. ಒಂದು ವೇಳೆ ನಾನು ಅವಳ ಮುಂದೆ ಕುಳಿತಿದ್ದರೆ ನನ್ನ ಆಸನವನ್ನು ಇನ್ನಷ್ಟು ಕೆಳಭಾಗಕ್ಕೆ ಬಾಗಿಸುತ್ತಿದ್ದೆ ಎಂದು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕೆಯ ಎದುರು ಕುಳಿತ ವ್ಯಕ್ತಿ ದೂರು ನೀಡಲಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಪಾಲ್ ಸ್ಟೋಥಾರ್ಡ್ ಅವರು ವಿಮಾನ ಪ್ರಯಾಣದುದ್ದಕ್ಕೂ ನಿದ್ದೆ ಮಾಡುತ್ತಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಇಂತಹ ಕೆಲ ಘಟನೆಗಳು ಉನ್ನತ ಶಿಕ್ಷಣ ಪಡೆದು ಐಷಾರಾಮಿ ಜೀವನ ನಡೆಸುವ ಕೆಲವರಿಗೆ ಸಣ್ಣ ಕಾಮನ್‌ಸೆನ್ಸ್ ಎಂಬುದೇ ಇರುವುದಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ