ಬೆಂಗಳೂರು(ಜ.4): ಚುನಾವಣೆ, ಕೆಲವು ಹಬ್ಬಗಳ ಹೊರತಾಗಿ ಮದ್ಯ ಮಾರಾಟವಿರುವ ರಾಜ್ಯಗಳಲ್ಲಿ ಬಹುತೇಕ ಎಲ್ಲ ದಿನವೂ ಮದ್ಯ ಲಭ್ಯವಿರುತ್ತದೆ. 2022 ಇಡೀ ವರ್ಷ ಯಾವ ದಿನಗಳಲ್ಲಿ ದೇಶದಲ್ಲಿ ಮದ್ಯ ನಿಷೇಧವಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸರ್ಕಾರ ಬಾರ್, ಕ್ಲಬ್, ಮದ್ಯದ ಅಂಗಡಿಗಳಲ್ಲಿ ಮದ್ಯ ಮಾರಾಟ ನಿಷೇಧಿಸಿದ ದಿನ ಡ್ರೈ ಡೇ ಅಂದ್ರೆ ಮದ್ಯ ಲಭ್ಯವಿಲ್ಲದ ದಿನವಾಗಿದೆ. ಆ ದಿನದಂದು ಹಬ್ಬಗಳು ಅಥವಾ ಚುನಾವಣೆ ನಡೆಯುವಂತಹ ದಿನಗಳಾಗಿರುತ್ತವೆ. ಆದರೆ ಮದ್ಯ ಮಾರಾಟ ನಿಷೇಧ ದಿನವನ್ನು ಎಲ್ಲರೂ ಇಷ್ಟ ಪಡುವುದಿಲ್ಲ. ದಿನವೂ ಮದ್ಯ ಕುಡಿಯಲು ಬಯಸುವ ಕೆಲವರಂತು ಅಂದು ಮದ್ಯವಿಲ್ಲದೇ ಚಡಪಡಿಸುತ್ತಾರೆ. ಅಲ್ಲದೇ ಎಣ್ಣೆ ಪಾರ್ಟಿ ಗುಂಡು ಪಾರ್ಟಿ ಆಯೋಜಿಸಿದವರು ಈ ಮದ್ಯವಿಲ್ಲದೇ ಶತಪಥ ಹಾಕುತ್ತಿರುತ್ತಾರೆ.
ಜನವರಿ 26, ಆಗಸ್ಟ್ 15, ಅಕ್ಟೋಬರ್ 2, ಮತ್ತು ಚುನಾವಣಾ ದಿನಗಳನ್ನು ಹೊರತುಪಡಿಸಿಯೂ ಕೆಲವು, ಚಿಲ್ಲರೆ ಅಂಗಡಿಗಳು, ಬಾರ್‌ಗಳು ಮತ್ತು ಹೋಟೆಲ್‌ಗಳ ಮೂಲಕ ಮದ್ಯ ಮಾರಾಟವನ್ನು ನಿಷೇಧಿಸುವ ಒಣ ದಿನಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಏಕೆಂದರೆ ಕೆಲವು ರಾಜ್ಯಗಳು ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಮತ್ತೆ ಕೆಲವು ರಾಜ್ಯಗಳಲ್ಲಿ ಅಲ್ಲಿನ ನಿರ್ದಿಷ್ಠ ಪ್ರಾದೇಶಿಕ ಹಬ್ಬಗಳಂದು ಕೂಡ ಹೆಚ್ಚಿನ ಅವಘಡ ಸಂಭವಿಸದಂತೆ ಅಥವಾ ಹಬ್ಬಗಳ ಗೌರವಾರ್ಥವಾಗಿ ಮದ್ಯ ನಿಷೇಧ ಹೇರಲಾಗುತ್ತಿದೆ. ಅಂತಹ ದಿನಗಳ ಸಂಪೂರ್ಣ ವಿವರ ಇಲ್ಲಿದೆ.
liquor Sale : ಚಿಕ್ಕಬಳ್ಳಾಪುರದಲ್ಲಿ 2 ದಿನದಲ್ಲಿ ಹರಿದ ಮದ್ಯದ ಹೊಳೆ -ಕೋಟಿ ವಹಿವಾಟು
2022 ರ ಮದ್ಯ ನಿಷೇಧ ದಿನಗಳು
ಜನವರಿ 14 , ಶನಿವಾರ, ಮಕರ ಸಂಕ್ರಾಂತಿ
ಜನವರಿ 26 , ಬುಧವಾರ,ಗಣರಾಜ್ಯೋತ್ಸವ
ಜನವರಿ 30 , ಭಾನುವಾರ: ಮಹಾತ್ಮ ಗಾಂಧಿಯವರ ಪುಣ್ಯತಿಥಿ (ಶಹೀದ್ ದಿವಸ್)
ಫೆಬ್ರವರಿ 19 , ಶನಿವಾರ: ಛತ್ರಪತಿ ಶಿವಾಜಿ, ಮಹಾವೀರ ಜಯಂತಿ
ಫೆಬ್ರವರಿ 26 , ಶನಿವಾರ: ಸ್ವಾಮಿ ದಯಾನಂದ ಸರಸ್ವತಿ ಜಯಂತಿ
ಮಾರ್ಚ್ 01 , ಮಂಗಳವಾರ: ಮಹಾ ಶಿವರಾತ್ರಿ
ಮಾರ್ಚ್ 18 , ಶುಕ್ರವಾರ: ಹೋಳಿ
ಏಪ್ರಿಲ್ 10, ಭಾನುವಾರ: ರಾಮ ನವಮಿ
ಏಪ್ರಿಲ್ 14, ಗುರುವಾರ: ಮಹಾವೀರ ಜಯಂತಿ ಮತ್ತು ಅಂಬೇಡ್ಕರ್ ಜಯಂತಿ
ಏಪ್ರಿಲ್ 15 , ಶುಕ್ರವಾರ: ಶುಭ ಶುಕ್ರವಾರ
ಮೇ 01 , ಶನಿವಾರ: ಮಹಾರಾಷ್ಟ್ರ ದಿನ (ಮಹಾರಾಷ್ಟ್ರ)
ಮೇ 03 , ಮಂಗಳವಾರ: ಈದ್ ಉಲ್-ಫಿತರ್
ಜುಲೈ 10, ಭಾನುವಾರ: ಆಷಾಢ ಏಕಾದಶಿ
ಜುಲೈ 13 , ಬುಧವಾರ: ಗುರು ಪೂರ್ಣಿಮೆ
ಆಗಸ್ಟ್ 08, ಸೋಮವಾರ: ಮೊಹರಂ
ಆಗಸ್ಟ್ 15 , ಸೋಮವಾರ: ಸ್ವಾತಂತ್ರ್ಯ ದಿನ
ಆಗಸ್ಟ್ 19, ಶುಕ್ರವಾರ: ಜನ್ಮಾಷ್ಠಮಿ
ಆಗಸ್ಟ್ 31, ಬುಧವಾರ: ಗಣೇಶ ಚತುರ್ಥಿ
ಸೆಪ್ಟೆಂಬರ್ 09, ಶುಕ್ರವಾರ: ಅನಂತ ಚತುರ್ದಶಿ
ಅಕ್ಟೋಬರ್ 02 , ಭಾನುವಾರ: ಗಾಂಧಿ ಜಯಂತಿ
ಅಕ್ಟೋಬರ್ 05 , ಬುಧವಾರ: ದಸರಾ
ಅಕ್ಟೋಬರ್ 09 , ಭಾನುವಾರ: ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 24 , ಸೋಮವಾರ: ದೀಪಾವಳಿ ಸೋಮವಾರ
ನವೆಂಬರ್ 04 , ಶುಕ್ರವಾರ: ಕಾರ್ತಿಕಿ ಏಕಾದಶಿ
ನವೆಂಬರ್ 08 , ಮಂಗಳವಾರ: ಗುರುನಾನಕ್ ಜಯಂತಿ
ಡಿಸೆಂಬರ್ 25 , ಭಾನುವಾರ: ಕ್ರಿಸ್ಮಸ್
ಇವು ಮದ್ಯ ನಿಷೇಧಿತ ದಿನಗಳಾಗಿದ್ದು, ಮದ್ಯ ಮಾರಾಟ ಹಾಗೂ ಸೇವನೆಯನ್ನು ನಾವು ಪ್ರೋತ್ಸಾಹಿಸುತ್ತಿಲ್ಲ.
Drink and Drive: ನೈಟ್ ಕರ್ಪ್ಯೂಗೆ ಡೋಂಟ್ ಕೇರ್, ಸಿಕ್ಕಾಕಿಕೊಂಡ 443 ಮದ್ಯಪ್ರಿಯರು!