ಪೋರ್ನ್ ಕೋರ್ಸ್ ಆರಂಭಿಸಿದ ಕಾಲೇಜು, ವಿವಾದದ ಬಳಿಕ ನೀಲಿಚಿತ್ರದ ಕೋರ್ಸ್ ಗೆ ಗೇಟ್ ಪಾಸ್!

By Suvarna News  |  First Published Apr 24, 2022, 11:02 PM IST

ಫಿಲ್ಮ್ 3000 ಶೀರ್ಷಿಕೆಯ ಪೋರ್ನ್ ಕೋರ್ಸ್, ವಿದ್ಯಾರ್ಥಿಗಳು ಒಟ್ಟಿಗೆ ಅಶ್ಲೀಲ ಚಲನಚಿತ್ರಗಳನ್ನು ವೀಕ್ಷಿಸಲು ಮತ್ತು "ಜನಾಂಗ, ವರ್ಗ ಮತ್ತು ಲಿಂಗದ ಲೈಂಗಿಕತೆ" ಕುರಿತು ಚರ್ಚಿಸಲು ಅಗತ್ಯವಾದ ವಾತಾವರಣವನ್ನು ನಿರ್ಮಿಸುತ್ತದೆ ಎಂದು ಕಾಲೇಜು ಹೇಳಿದೆ.


ನವದೆಹಲಿ (ಏ.24): ಲೈಂಗಿಕತೆಯ (Sex) ಬಗ್ಗೆ ಜ್ಞಾನ ನೀಡುವ ಸಲುವಾಗಿ ಶಿಕ್ಷಣ ಸಂಸ್ಥೆಗಳು ತನ್ನ ಮಿತಿಯಲ್ಲಿಯೇ ಭಿನ್ನ ವಿಭಿನ್ನವಾಗಿ ಯೋಚಿಸಿ ಅದರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡುತ್ತಿದೆ. ಗುಡ್ ಟಚ್, ಬ್ಯಾಡ್ ಟಚ್ ತಿಳಿವಳಿಕೆ ಕಾರ್ಯಕ್ರಮಗಳು ಅಂಥದ್ದಕ್ಕೆ ಉದಾಹರಣೆ. ಆದರೆ, ಅಮೆರಿಕದ ಕಾಲೇಜು, ನೀಲಿ ಚಿತ್ರವನ್ನು ಬದುಕುವ ಕಲೆ ಎಂದು ಹೇಳಿದ್ದು, ಕಾಲೇಜಿನಲ್ಲಿ ಅದಕ್ಕಾಗಿಯೇ ವಿಶೇಷವಾದ ಕೋರ್ಸ್ ಅನ್ನು ಪರಿಚಯಿಸುವ ಮೂಲಕ ಅಚ್ಚರಿ ನೀಡಿದೆ.

ಅಮೆರಿಕದ ಖಾಸಗಿ ಕಾಲೇಜೊಂದು ತನ್ನ ವಿದ್ಯಾರ್ಥಿಗಳಿಗೆ ಪೋರ್ನ್ ಕ್ಲಾಸ್ ಕೋರ್ಸ್( Porn Class ) ಅನ್ನು ಆರಂಭಿಸಿದೆ. ಈ ತರಗತಿಯಲ್ಲಿ "ಒಟ್ಟಿಗೆ ಅಶ್ಲೀಲ ಚಲನಚಿತ್ರಗಳನ್ನು ವೀಕ್ಷಿಸುವುದು' ಅಗತ್ಯವಾಗಿರುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಟೀಕೆಯ ಹೊರತಾಗಿಯೂ ಮುಂಬರುವ ಮೇ ಅವಧಿಯಲ್ಲಿ ಅಶ್ಲೀಲತೆಯ ಆಯ್ದ ತರಗತಿಯನ್ನು ನೀಡುವುದಾಗಿ ಉತಾಹ್‌ನ ವೆಸ್ಟ್‌ಮಿನಿಸ್ಟರ್ ಕಾಲೇಜು ಹೇಳಿತ್ತು. ಕೊನೆಗೆ ವಿಪರೀತ ಟೀಕೆಯಿಂದ ಈ ಯೋಜನೆಯನ್ನು ಕೈಬಿಟ್ಟಿರುವುದಾಗಿ ಹೇಳಿದೆ.

ಸಾಲ್ಟ್ ಲೇಕ್ ಸಿಟಿಯಲ್ಲಿರುವ ಲಿಬರಲ್ ಆರ್ಟ್ಸ್ ಕಾಲೇಜು ಪೋರ್ನ್ ಕ್ಲಾಸ್ ಕುರಿತಾದ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ವಿವಾದವನ್ನು ಹುಟ್ಟುಹಾಕಿದೆ. ಫಿಲ್ಮ್ 300O: ಪೋರ್ನ್ ಎಂಬ ಶೀರ್ಷಿಕೆಯ ಕೋರ್ಸ್, ವಿದ್ಯಾರ್ಥಿಗಳು ಒಟ್ಟಿಗೆ ಅಶ್ಲೀಲ ಚಲನಚಿತ್ರಗಳನ್ನು ವೀಕ್ಷಿಸಲು ಮತ್ತು "ಜನಾಂಗ, ವರ್ಗ ಮತ್ತು ಲಿಂಗದ ಲೈಂಗಿಕತೆ" ಕುರಿತು ಚರ್ಚಿಸಲು ಅಗತ್ಯವಾದ ವಾತಾವರಣವನ್ನು ನೀಡುತ್ತದೆ' ಎಂದು ಹೇಳಲಾಗಿತ್ತು.

ಆದರೆ, ಸಾಮಾಜಿಕ ಮಾಧ್ಯಮದ ಟೀಕೆಯ ನಡುವೆ ಕಾಲೇಜು ವೆಬ್‌ಸೈಟ್‌ನಿಂದ ಪಟ್ಟಿಯನ್ನು ತೆಗೆದುಹಾಕಿದೆ. ಇನ್ನೂ ಕೆಲವು ವರದಿಗಳ ಪ್ರಕಾರ, ಟೀಕೆಗಳ ಹೊರತಾಗಿಯೂ ವೆಬ್ ಸೈಟ್ ನಿಂದ ಮಾತ್ರವೇ ಈ ಕೋರ್ಸ್ ಅನ್ನು ತೆಗೆಯಲಾಗಿದೆ. ವೆಸ್ಟ್‌ಮಿನಿಸ್ಟರ್ ಕಾಲೇಜ್  ( West Minister College ) ತನ್ನ ಮುಂಬರುವ ಅವಧಿಯಲ್ಲಿ ತರಗತಿಯನ್ನು ಯೋಜಿಸಿದಂತೆ ನಡೆಸಲಿದೆ ಎಂದು ಹೇಳಿದೆ.

Tap to resize

Latest Videos

"ಹಾರ್ಡ್‌ಕೋರ್ ಅಶ್ಲೀಲತೆಯು ಅಮೇರಿಕನ್ ಆಪಲ್ ಪೈನಂತೆ ಮತ್ತು ಸಂಡೇ ನೈಟ್ ಫುಟ್‌ಬಾಲ್‌ಗಿಂತ ಹೆಚ್ಚು ಜನಪ್ರಿಯವಾಗಿದೆ. ಈ ಬಿಲಿಯನ್-ಡಾಲರ್ ಉದ್ಯಮಕ್ಕೆ ನಮ್ಮ ವಿಧಾನವು ಸಾಂಸ್ಕೃತಿಕ ವಿದ್ಯಮಾನವಾಗಿದ್ದು ಅದು ಲೈಂಗಿಕ ಅಸಮಾನತೆಗಳನ್ನು ಪ್ರತಿಬಿಂಬಿಸುತ್ತದೆ. ಇದು ಗಂಭೀರ ಚಿಂತನೆಯ ಅಗತ್ಯವಿರುವ ಕಲಾ ಪ್ರಕಾರವಾಗಿದೆ" ಎಂದು ಕೋರ್ಸ್ ವಿವರಣೆ ಹೇಳುತ್ತದೆ. "ನಾವು ಒಟ್ಟಿಗೆ ಅಶ್ಲೀಲ ಚಲನಚಿತ್ರಗಳನ್ನು ವೀಕ್ಷಿಸುತ್ತೇವೆ ಮತ್ತು ಜನಾಂಗ, ವರ್ಗ ಮತ್ತು ಲಿಂಗದ ಲೈಂಗಿಕತೆಯ ಬಗ್ಗೆ ಮತ್ತು ಪ್ರಾಯೋಗಿಕ, ಮೂಲಭೂತ ಕಲಾ ಪ್ರಕಾರವಾಗಿ ಚರ್ಚಿಸುತ್ತೇವೆ" ಎಂದು ವಿವರಣೆಯು ಹೇಳುತ್ತದೆ.

ಗರ್ಭಿಣಿ ಮನುಷ್ಯನ ಎಮೋಜಿ ಬಳಸಿ ಬಿಲ್ ಗೇಟ್ಸ್ ಅಪಹಾಸ್ಯ ಮಾಡಿದ ಎಲಾನ್ ಮಸ್ಕ್

ಕಾಲೇಜು ಈ ಕೋರ್ಸ್ ಅನ್ನು ಘೋಷಿಸಿದಾಗಿನಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಅನೇಕ ಮಾಧ್ಯಮ ವರದಿಗಳ ಪ್ರಕಾರ ಕಾಲೇಜಿನ ಅಧಿಕಾರಿಗಳಿಗೆ ಈ ಕುರಿತಾಗಿ ಸಾಕಷ್ಟು ದೂರವಾಣಿ ಕರೆಗಳು ಹಾಗೂ ಪತ್ರ ಮುಖೇನ ಅಭಿಪ್ರಾಯಗಳು ಬಂದಿವೆ ಎಂದು ತಿಳಿಸಿದೆ. ಭಾರಿ ವಿರೋಧ ಮತ್ತು ವಿವಾದದ ಬಳಿಕ ಕಾಲೇಜು ತನ್ನ ಕೋರ್ಸ್‌ಗಳ ಪಟ್ಟಿಯಿಂದ ಪೋರ್ನೋಗ್ರಫಿ ಸಿನಿಮಾ ತರಗತಿಯನ್ನು ತೆಗೆದುಹಾಕಿದೆ ಎಂದೂ ಮೊದಲು ವರದಿಯಾಗಿದ್ದವು. ಈ ಕಾಲೇಜು ಹಾಸ್ಯ, ಹಾರರ್, ಆಕ್ಷನ್ ಸೇರಿದಂತೆ ವಿಭಿನ್ನ ಬಗೆಯ ಸಿನಿಮಾಗಳ ಕುರಿತಾದ ಕೋರ್ಸ್‌ಗಳನ್ನು ಕಲಿಸುತ್ತದೆ.

Viral Video: ಗುಜರಾತಿಯಲ್ಲಿ ಫುಡ್ ಆರ್ಡರ್ ಮಾಡಿದ ಅಮೇರಿಕನ್ ಯೂಟ್ಯೂಬರ್ !

ಈ ಪೋರ್ನ್ ಕೋರ್ಸ್ ವಿದ್ಯಾರ್ಥಿಗಳು ವಿವಾದಾತ್ಮಕ ವಿಷಯಗಳ ಗಂಭೀರ ಚರ್ಚೆಯಲ್ಲಿ ತೊಡಗಿಸಿಕೊಳ್ಳಲಯ ಬಯಸುತ್ತಾರೆಯೇ ಎಂದು ನಿರ್ಧಾರ ಮಾಡಲು ಸಹಾಯ ಮಾಡುತ್ತದೆ ಎನ್ನುವುದು ಕಾಲೇಜಿನ ಅಭಿಪ್ರಾಯವಾಗಿದೆ. ಇದಕ್ಕೆ ಟೀಕೆ ವ್ಯಕ್ತಪಡಿಸಿರುವ ಮಡಿವಂತ ಅಮೇರಿಕನ್ನರು, "ಶಿಕ್ಷಕರ ಜೊತೆಯ ವಿದ್ಯಾರ್ಥಿಗಳು ಅಶ್ಲೀಲ ಚಿತ್ರ ನೋಡುವ ಯೋಚನೆಯೇ ಅಸಹ್ಯಕರ' ಎಂದು ಹೇಳಿದ್ದಾರೆ.

click me!