
ಕೀನ್ಯಾ(ಏ.24): ಹೆಚ್ಚಿನ ಮೂಲಸೌಕರ್ಯವಿಲ್ಲದ ಪುಟ್ಟ ಗ್ರಾಮ. ಹೊರಜಗತ್ತಿಗೆ ಸಂಪರ್ಕವೂ ಕಡಿಮೆ. ಕೃಷಿ, ದುಡಿಮೆ ಮೂಲಕ ಬದುಕು ಕಟ್ಟಿಕೊಂಡ ಶ್ರಮಜೀವಿಗಳು. ಆದರೆ ಇದೇ ಮುಗ್ದರನ್ನು ಪಾದ್ರಿಯೊಬ್ಬ ನೀವು ಉಪವಾಸದ ಮೂಲಕ ಸಾಪು ಪಡೆದರೆ ಜೀಸಸನ್ ಭೇಟಿಯಾಗಬಹುದು. ಮತ್ತೆ ಸಾವಿಲ್ಲ.ಜೀವನ ಪರ್ಯಾಂತ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿ ನಂಬಿಸಿದ್ದಾನೆ. ಪಾದ್ರಿ ಮಾತು ಕೇಳಿ ಉಪವಾಸ ಕುಳಿತ ಮುಗ್ದ ಜೀವಗಳು ಪ್ರಾಣ ತ್ಯಜಿಸಿದ್ದಾರೆ. ಮಕ್ಕಳು ಸೇರಿದಂತೆ ಬರೋಬ್ಬರಿ 47 ಮಂದಿ ಪಾದ್ರಿಯ ಮಾತು ಕೇಳಿ ಬಲಿಯಾಗಿದ್ದಾರೆ. ಈ ಘಟನೆ ನದಿರುವುದು ಕೀನ್ಯಾದ ಮಲಿಂದಿ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣ ತನಿಖೆ ನಡೆಸುತ್ತಿರುವ ಕೀನ್ಯಾ ಪೊಲೀಸರು 47 ಮೃತದೇಹ ಪತ್ತೆ ಹಚ್ಚಿ ಹೊರಕ್ಕೆ ತೆಗೆದಿದ್ದಾರೆ. ಇತ್ತ ಪಾದಿಯನ್ನು ಬಂಧಿಸಿದ್ದಾರೆ.
ಕರಾವಳಿ ಪ್ರದೇಶವಾಗಿರುವ ಮಲಿಂದಿ ಗ್ರಾಮದಲ್ಲಿ ಸಾಕಷ್ಟು ಅರಣ್ಯ ಪ್ರದೇಶಗಳಿವೆ. ಇಲ್ಲಿನ ಸಮಾಧಿ ಬಳಿ 47 ಮೃತದೇಹ ಪತ್ತೆಯಾಗಿದೆ. ಈ ಮೃತದೇಹಗಳನ್ನು ಹೊರಕ್ಕೆ ತೆಗೆದ ಪೊಲೀಸರು ಪರೀಕ್ಷೆಗೆ ಕಳುಹಿಸಿದ್ದಾರೆ. ಮಲಿಂದಿ ಗ್ರಾಮದ ಗುಡ್ ನ್ಯೂಸ್ ಅಂತಾರಾಷ್ಟ್ರೀಯ ಚರ್ಚ್ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿದೆ ಅನ್ನೋ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಉಪವಾಸದಲ್ಲಿದ್ದ 15 ಮಂದಿಯನ್ನು ರಕ್ಷಿಸಿದ್ದರು. ಇವರು ನೀಡಿದ ಮಾಹಿತಿ ಆಧರಿಸಿ ಚರ್ಚ್ ಪಾದ್ರಿ ಹಾಗೂ ಮುಖ್ಯಸ್ಥ ಪೌಲ್ ಮೆಕಂಢಿ ಎನ್‌ಥೆಂಗೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
Kenya Drought: ಕೀನ್ಯಾದಲ್ಲಿ ಕುಡಿಯಲು ನೀರಿಲ್ಲ ತಿನ್ನಲು ಊಟವಿಲ್ಲ, ಪ್ರಾಣಿಗಳ ಮರಣ ಮೃದಂಗ!
ಈ ವೇಳೆ ಅತೀ ದೊಡ್ಡ ಷಡ್ಯಂತ್ರ ನಡೆಯುತ್ತಿರುವುದು ಬಹಿರಂಗವಾಗಿದೆ. ಕ್ರಿಶ್ಚಿಯನ್ ಧರ್ಮ ಬೋಧನೆ ಮಾಡುತ್ತಾ, ಉಪವಾಸದ ಮೂಲಕ ಸಾವು ಪಡೆಯಲು ಸೂಚಿದ್ದಾನೆ. ಇಷ್ಟೇ ಅಲ್ಲ ಹಲವರನ್ನು ಬಲವಂತವಾಗಿ ಉಪವಾಸ ಕೂರಿಸಿದ್ದಾನೆ. ತನಿಖೆ ತೀವ್ರಗೊಳಿಸಿದ ಪೊಲೀಸರು ಪಾದ್ರಿಯನ್ನು ಕರೆದು ಶಾಕಹೊಲಾ ಅರಣ್ಯಕ್ಕೆ ಆಗಮಿಸಿದ್ದಾರೆ. ಈ ವೇಳೆ ಹಲವು ಸಮಾಧಿಗಳನ್ನು ಪಾದ್ರಿ ತೋರಿಸಿದ್ದಾನೆ. ಉಪವಾಸದಲ್ಲಿ ಅಂತ್ಯಕಂಡ ಜನರನ್ನು ಇದೇ ಅರಣ್ಯದಲ್ಲಿ ಪಾದ್ರಿ ಸಮಾದಿ ಮಾಡಿದ್ದಾನೆ. ಒಂದು ಸಮಾದಿಯಲ್ಲಿ ಮೂವರು ಮಕ್ಕಳು ಹಾಗೂ ಪೋಷಕರ ಮೃತದೇಹ ಪತ್ತೆಯಾಗಿದೆ.
ಇದುವರೆಗೆ 47 ಮೃತದೇಹ ಪತ್ತೆಯಾಗಿದೆ. ಇದೀಗ ಶಾಕಹೊಲಾ ಅರಣ್ಯದಲ್ಲಿ ಮತ್ತಷ್ಟು ಶೋಧ ಕಾರ್ಯ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇತ್ತ ಗುಡ್ ನ್ಯೂಸ್ ಅಂತಾರಾಷ್ಟ್ರೀಯ ಚರ್ಚ್‌ಗೆ ಬೀಗ ಜಡಿಯಲಾಗಿದೆ. 2018ರಲ್ಲಿ ಈ ಚರ್ಚ್ ಹಾಗೂ ಪಾದ್ರಿ ಮೆಕೆಂಜಿ ವಿರುದ್ಧ ಹಲವು ಆರೋಪಗಳು ಕೇಳಿಬಂದಿತ್ತು. ಶಾಂತವಾಗಿದ್ದ ಗ್ರಾಮದಲ್ಲಿ ಚರ್ಚ್ ಆರಂಭಿಸಿ, ಮತಾಂತರ, ಅತ್ಯಾಚಾರ ನಡೆಸುತ್ತಿರುವ ಆರೋಪ ಕೇಳಿಬಂದಿತ್ತು. ಇದೀಗ ವಿಚಾರಣೆ ವೇಳೆ 2019ರಲ್ಲಿ ಚರ್ಚ್ ಮುಚ್ಚಿರುವುದಾಗಿ ಪೊಲೀಸರ ಬಳಿ ಹೇಳಿದ್ದಾನೆ. ಆದರೆ ದಾಳಿ ವೇಳೆ ಉಪವಾಸ ಮಾಡುತ್ತಿದ್ದ 15 ಮಂದಿಯನ್ನು ಪೊಲೀಸರು ರಕ್ಷಿಸಿದ್ದರು. ಹೀಗಾಗಿ ಪಾದ್ರಿ ಮೇಲೆ ಅನುಮಾನ ಹೆಚ್ಚಾಗಿದೆ.
Weird News: ಇಲ್ಲಿ ಮದುವೆಯ ನಂತರ ವಧುವನ್ನು ಆಶೀರ್ವದಿಸಲು ತಲೆ ಮೇಲೆ ಉಗುಳ್ತಾರೆ
ಧರ್ಮದ ಹೆಸರಿನಲ್ಲಿ ಹಲವು ಮುಗ್ದರನ್ನು ಬಲಿಪಡೆದಿರುವ ಶಂಕೆ ವ್ಯಕ್ತವಾಗಿದೆ. ಇದೀಗ ಮಲಿಂದಿ ಗ್ರಾಮದಲ್ಲಿನ ನಿವಾಸಿಗಳ ಜನಗಣತಿ ಮಾಡಲು ಪೊಲೀಸರು ಮುಂದಾಗಿದ್ದಾರೆ. ಕಾಣೆಯಾಗಿರುವ, ಕಳೆದೆರಡು ವರ್ಷದಲ್ಲಿ ಮೃತಪಟ್ಟವರ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ