
ವಾಷಿಂಗ್ಟನ್ (ಏಪ್ರಿಲ್ 23, 2023): ಅಮೆರಿಕವು 2023ನೇ ಸಾಲಿನಲ್ಲಿ ಭಾರತೀಯರಿಗೆ 10 ಲಕ್ಷಕ್ಕಿಂತಲೂ ಅಧಿಕ ವೀಸಾಗಳನ್ನು ನೀಡುವ ಯೋಜನೆ ಹಾಕಿಕೊಂಡಿದೆ. ಅಲ್ಲದೆ ಶೈಕ್ಷಣಿಕ ಆರಂಭದ ಈ ಸಂದರ್ಭದಲ್ಲಿ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಬರಲಿರುವ ಭಾರತ ಮೂಲದ ವಿದ್ಯಾರ್ಥಿಗಳಿಗೆ ವೀಸಾವನ್ನು ಖಚಿತಪಡಿಸಲಾಗುವುದು ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಭರವಸೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಭಾರತದಿಂದ ಅಮೆರಿಕಕ್ಕೆ ಉದ್ಯೋಗಕ್ಕಾಗಿ ಬರುವ ಜನರ ವೀಸಾಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಎಚ್-1ಬಿ ಮತ್ತು ಎಲ್ ವೀಸಾಗಳು ಭಾರತೀಯ ಐಟಿ ಉದ್ಯೋಗಿಗಳಿಂದ ಹೆಚ್ಚು ಬೇಡಿಕೆಯಲ್ಲಿವೆ’ ಎಂದಿದ್ದಾರೆ.
ಇನ್ನು ಎಚ್-1ಬಿ ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು ಅಮೆರಿಕದ ಕಂಪನಿಗಳಿಗೆ ತಾಂತ್ರಿಕ ಮತ್ತು ಸೈದ್ಧಾಂತಿಕವಾಗಿ ಅಗತ್ಯವಿರುವ ಉದ್ಯೋಗಗಳಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಸಹಾಯ ಮಾಡುತ್ತದೆ. ಭಾರತ ಮತ್ತು ಚೀನಾಗಳಿಂದ ಪ್ರತಿ ವರ್ಷ 10,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅಲ್ಲಿನ ತಾಂತ್ರಿಕ ಕಂಪನಿಗಳು ಇದನ್ನು ಬಳಸಿಕೊಳ್ಳುತ್ತವೆ.
ಇದನ್ನು ಓದಿ: ಮತ್ತೆ ಚೀನಾ ಕಿರಿಕ್: ಇಬ್ಬರು ಭಾರತೀಯ ಪತ್ರಕರ್ತರ ವೀಸಾ ಫ್ರೀಜ್ ಮಾಡಿದ ಜಿನ್‌ಪಿಂಗ್ ಸರ್ಕಾರ..!
ನಾವು ಈ ವರ್ಷ 10 ಲಕ್ಷಕ್ಕಿಂತ ಅಧಿಕ ವೀಸಾಗಳನ್ನು ವಿತರಿಸುವ ಹಾದಿಯಲ್ಲಿದ್ದೇವೆ. ಇದು ಹೆಚ್ಚು ವಿದ್ಯಾರ್ಥಿ ಮತ್ತು ವಲಸೆ ವೀಸಾಗಳ ದಾಖಲೆಯಾಗಲಿದೆ. ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ಖಚಿತಪಡಿಸಲಾಗುವುದು. ಅದರಲ್ಲೂ ಬಿ1 (ವ್ಯಾಪಾರ) ಮತ್ತು ಬಿ2 (ಪ್ರವಾಸಿ) ವಿಭಾಗದಡಿಯಲ್ಲಿ ವೀಸಾಗೆ ಮೊದಲ ಬಾರಿ ಅರ್ಜಿ ಸಲ್ಲಿಸುವ ಅರ್ಜಿದಾರ ಕಾಯುವಿಕೆ ಅವಧಿ ದೀರ್ಘವಾಗುತ್ತಿದೆ ಹಾಗೂ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು. ಅಮೆರಿಕಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. ನಾವು ಉದ್ಯೋಗಿಗಳ ವೀಸಾಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಇದು ಅಮೆರಿಕ ಮತ್ತು ಭಾರತೀಯ ಆರ್ಥಿಕತೆಗಳೆರಡಕ್ಕೂ ಅನುಕೂಲಕರವಾಗಿರಲಿದೆ ಎಂದಿದ್ದಾರೆ.
ಇದನ್ನೂ ಓದಿ: ಎಚ್-1ಬಿ, ಎಲ್-1 ವೀಸಾದಾರರಿಗೆ ಸಂತಸದ ಸುದ್ದಿ; ಇನ್ಮುಂದೆ ಅಮೆರಿಕದಲ್ಲೇ ವೀಸಾ ನವೀಕರಣ..!H
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ