ಮಿಲಿಟರಿ ಲ್ಯಾಬ್‌ನಲ್ಲಿ ಕೊರೋನಾ ತಯಾರಿಸಿದ್ದ ಡ್ರ್ಯಾಗನ್: ಚೀನಾ ಬಂಡವಾಳ ಬಯಲು!

By Suvarna News  |  First Published Aug 3, 2020, 3:51 PM IST

ಕೊರೋನಾ ಹರಡಿದ್ದು ಹೇಗೆ?| ಇದು ಚೀನಾ ವಿಜ್ಞಾನಿಯೇ ಬಹಿರಂಗಪಡಿಸಿದ ಸತ್ಯ| ದಾಖಲೆ ಸಮೇತ ಚೀನಾ ಬಂಡವಾಳ ಬಯಲು ಮಾಡಿದ ವೈರಲಾಜಿಸ್ಟ್


ಬೀಜಿಂಗ್(ಆ.03): ಚೀನಾ ಆಡಳಿತದಲ್ಲಿರುವ ಹಾಂಗ್‌ಕಾಂಗ್‌ನಿಂದ ಓಡಿಹೋಗಿ ಅಮೆರಿಕಾ ತಲುಪಿರುವ ಹಾಂಗ್‌ಕಾಂಗ್ ಸ್ಕೂಲ್ ಆಫ್ ಹೆಲ್ತ್‌ನ ಹಿರಿಯ ವೈರಾಲಾಜಿಸ್ಟ್ ಡಾ. ಲೀ ಮೆಂಗ್ ಯಾನ್ ಚೀನಾ ಮಾರಕ ಕೊರೋನಾ ವೈರಸ್‌ನ್ನು ಇಲ್ಲಿನ ಮಿಲಿಟರಿ ಲ್ಯಾಬ್‌ನಲ್ಲಿ ತಯಾರಿಸಿದೆ ಎಂದು ಹೇಳಿದೆ. ಅಲ್ಲದೇ ಇದು ವೆಟ್‌ ಮಾರ್ಕೆಟ್‌ನಿಂದ ಹರಡಿತು ಎಂದಿರುವ ಚೀನಾ ಮಾತನ್ನೂ ತಳ್ಳಿ ಹಾಕಿದ್ದಾರೆ. ಈ ವಿಚಾರ ಬಯಲಾಗುತ್ತಿದ್ದಂತೆಯೇ ಚೀನಾ ಈ ವಿಜ್ಞಾನಿ ಆರೋಪ ಸತ್ಯಕ್ಕೆ ದೂರವಾಗಿದ್ದು ಎಂದಿದ್ದಾರೆ.

ಈ ಬಾರಿ ಸ್ವದೇಶಿ ರಾಖಿ: ಚೀನಾಕ್ಕೆ 4000 ಕೋಟಿ ರೂ. ನಷ್ಟ!

Latest Videos

undefined

ಚೀನಾ ಕಮ್ಯೂನಿಸ್ಟ್‌ ಪಾರ್ಟಿಯ ಲ್ಯಾಬ್‌ನಿಂದ ಕೊರೋನಾ ಹರಡಿದೆ

ತೈವಾನ್‌ನ ಸಮಾಚಾರ ಏಜೆನ್ಸಿ ಲ್ಯೂಡ್ ಪ್ರೆಸ್ ಜೊತೆ ಲೈವ್ ಸಂದರ್ಶನದಲ್ಲಿ ಡಾ. ಲೀ  ಮೆಂಗ್ ಯಾನ್ ಮಾತನಾಡುತ್ತಾ ಈ ಮಹಾಮಾರಿ ಹಬ್ಬಿಕೊಳ್ಳಲು ಆರಂಭಿಸಿದಾಗ, ಇದು ಚೀನಾ ಕಮ್ಯೂನಿಸ್ಟ್ ಪಾರ್ಟಿಯ ಸೈನ್ಯ ಪ್ರಯೋಗಶಾಲೆಯಿಂದ ಹಬ್ಬಿದೆ ಎಂದು ನಾನು ಸ್ಪಷ್ಟವಾಗಿ ಹೆಳಿದ್ದೆ. ಆದರೆ ಇದನ್ನು ಮರೆಮಾಚಲು ಚೀನಾ ವುಹಾನ್ ಮಾಂಸದ ಮಾರುಕಟ್ಟೆಯ ಕಟ್ಟುಕತೆ ಹೇಳಿತ್ತು ಎಂದಿದ್ದಾರೆ.

ವರದಿ ಒಪ್ಪಲು ಹಿಂದೇಟು ಹಾಕಿದ ಅಧಿಕಾರಿಗಳು

ಈ ಬಗ್ಗೆ ವಿಜ್ಞಾನಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದಾಗ ಅವರಿದನ್ನು ಗಂಭೀರವಾಗಿ ಪರಿಗಣಿಸದೆ ಕಡೆಗಣಿಸಿದರು. ಆದರೆ ತನ್ನ ವರದಿ ತಳ್ಳಿ ಹಾಕುವುದು ಅಷ್ಟು ಸುಲಭವಲ್ಲ ಎಂಬುವುದು ಡಾ. ಲೀ  ಮೆಂಗ್ ಯಾನ್ ವಾದವಾಗಿದೆ.

ಚೀನಾದ 26,000ಕ್ಕೂ ಹೆಚ್ಚು ಗೇಮಿಂಗ್‌ ಆ್ಯಪ್‌ ನಿಷೇಧಿಸಿದ ಆ್ಯಪಲ್‌

ತಾನೂ ಇತರರಂತೆ ನಿಗೂಢ ನಾಪತ್ತೆಯಾಗುತ್ತೇನೆಂಬ ಭಯ

ಇನ್ನು ಚೀನಾದಲ್ಲಿ ಕಮ್ಯೂನಿಸ್ಟ್ ಪಾರ್ಟಿ ವಿರುದ್ಧ ಮಾತನಾಡಿದವರು ನಿಗುಢವಾಗಿ ನಾಪತ್ತೆಯಾಗುತ್ತಿದ್ದರು. ಈ ಭಯ ನನ್ನನ್ನೂ ಕಾಡಿತ್ತು. ಹೀಗಾಗಿ ನಾನು ಸೂಕ್ತ ದಾಖಲೆ ಒಗ್ಗೂಡಿಸಲಾರಂಭಿಸಿದ್ದೆ ಎಂದಿದ್ದಾರೆ.

ಚೀನಾ ಆ್ಯಪ್‌ ಆಯ್ತು, ಈಗ ಚೀನೀ ಭಾಷೆಗೂ ಕೇಂದ್ರ ಕೊಕ್‌

ಏಪ್ರಿಲ್‌ನಲ್ಲಿ ಚೀನಾದಿಂದ ಅಮೆರಿಕಗೆ ಬಂದ ವಿಜ್ಞಾನಿ

ಡಾ. ಲೀ  ಮೆಂಗ್ ಯಾನ್ ಏಪ್ರಿಲ್‌ನಲ್ಲಿ ಅಮೆರಿಕಗೆ ಬಂದರು. ಆದರೀಗ ಚೀನಾ ರಾಷ್ಟ್ರೀಯ ಭದ್ರತಾ ಕಾನೂನಿನಡಿಯಲ್ಲಿ ತಾನು ಬಂಧಿತಳಾಗುತ್ತೇನೆಂಬ ಭಯ ಅವರನ್ನು ಆವರಿಸಿದೆ. ಆದರೆ ಚೀನಾ ಸರ್ಕಾರವನ್ನು ಕಿತ್ತೆಸೆಯಲು ತಾನು ಎಲ್ಲಾ ರೀತಿಯ ಸಹಾಯ ಅಲ್ಲಿರುವವರಿಗೆ ಮಾಡುತ್ತೇನೆ ಎಂದಿದ್ದಾರೆ.

click me!