ನಿಯಂತ್ರಣ ಕಳೆದುಕೊಂಡ ಚೀನಾದ ರಾಕೆಟ್, ಮಾಲ್ಡೀವ್ಸ್‌ ಬಳಿ ಪತನ!

By Suvarna News  |  First Published May 9, 2021, 3:10 PM IST

* ನಿಯಂತ್ರಣ ಕಳೆದುಕೊಂಡಿದ್ದ ಚೀನಾ ರಾಕೆಟ್ ಭಗ್ನಾವಶೇಷ ಪತ್ತೆ

* ಭಾರೀ ವಿನಾಶ ಸೃಷ್ಟಿಸಬಹುದಾಗಿದ್ದ ನಿಯಂತ್ರಣ ಕಳೆದುಕೊಂಡಿದ್ದ ರಾಕೆಟ್‌ ಭಾಗ

* ಮಾಲ್ಡೀವ್ಸ್‌ ಬಳಿ ಹಿಂದೂ ಮಹಾಸಾಗರದಲ್ಲಿ ಪತ್ತೆಯಾದ ಅವಶೇಷ


ಬೀಜಿಂಗ್(ಮೇ.09): ಬಾಹ್ಯಾಕಾಶ ಮಾರ್ಗದಲ್ಲಿ ನಿಯಂತ್ರಣ ಕಳೆದುಕೊಂಡು ಭೂಮಂಡಲದ ವಾತಾವರಣಕ್ಕೆ ಮರಳಿ ಬಂದಿದ್ದ ಚೀನಾದ ಲಾಂಗ್ ಮಾರ್ಚ್-5B ರಾಕೆಟ್‌ನ ಬೃಹತ್ ಭಾಗ ಭಾನುವಾರ ಮಾಲ್ಡೀವ್ಸ್ ಬಳಿ ಹಿಂದೂ ಮಹಾಸಾಗರದಲ್ಲಿ ಪತನಗೊಂಡಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಬರೋಬ್ಬರಿ 18 ಟನ್ ತೂಕದ ರಾಕೆಟ್ ಭಾಗ ಭೂಮಿಯ ಯಾವ ಭಾಗದಲ್ಲಿ ಬೀಳಲಿದೆ ಎಂಬ ಅಂದಾಜು ಸಿಗದೆ ತೀವ್ರ ಆತಂಕ ಸೃಷ್ಟಿಸಿತ್ತು. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ರಾಕೆಟ್ ಪತನಗೊಳ್ಳುವ ಭೀತಿ ಎದುರಾಗಿತ್ತು.

ಕೊರೋನಾ ಬಳಸಿ ಜೈವಿಕ ಯುದ್ಧಕ್ಕೆ ಚೀನಾ ಸಂಚು: ಬಯಲಾಯ್ತು ಸ್ಫೋಟಕ ಮಾಹಿತಿ!

Latest Videos

undefined

ಚೀನಾದ ನೂತನ ಬಾಹ್ಯಾಕಾಶ ನಿಲ್ದಾಣದಿಂದ ಏಪ್ರಿಲ್ 29ರಂದು ಭೂಮಿಯ ಕಕ್ಷೆಗೆ ಲಾಂಗ್ ಮಾರ್ಚ್-5B ರಾಕೆಟ್‌ನ ಮೊದಲ ಮಾದರಿ ಉಡಾವಣೆಗೊಂಡಿತ್ತು. ಈ ರಾಕೆಟ್‌ನ ಬೃಹತ್ ಭಾಗವೊಂದರ ಪತನ ಬಹಳ ಅಪಾಯಕಾರಿಯಾಗಿತ್ತು ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರಾಕೆಟ್‌ನ ಈ ತುಣುಕನ್ನು ಅದು ಭೂಮಂಡಲಕ್ಕೆ ಸೇರುವ ಮುನ್ನವೇ ನಾಶಪಡಿಸಲಾಗಿತ್ತು. ಆದರೆ ಕೆಲ ಭಾಗದ ಅವಶೇಷಗಳು ಮಾಲ್ಡೀವ್ಸ್‌ ಬಳಿ ಹಿಂದೂ ಮಹಾಸಾಗರದಲ್ಲಿ ಪತ್ತೆಯಾಗಿವೆ ಎಂದೂ ತಿಳಿಸಿದ್ದಾರೆ.

ಕೊರೋನಾ ಬಳಸಿ ಜೈವಿಕ ಯುದ್ಧಕ್ಕೆ ಚೀನಾ ಸಂಚು: ಬಯಲಾಯ್ತು ಸ್ಫೋಟಕ ಮಾಹಿತಿ!

ಪರಿಶೀಲಿಸಿ ವಿಶ್ಲೇಷಣೆ ನಡೆಸಿದ ಬಳಿಕ ಮೇ 9ರ 10.24ಕ್ಕೆ ಲಾಂಗ್ ಮಾರ್ಚ್-5B ರಾಕೆಟ್‌ನ ಅವಶೇಷವು ವಾತಾವರಣಕ್ಕೆ ಮರಳಿ ಪ್ರವೇಶಿಸಿತ್ತು ಎಂದು ಚೀನಾ ಮಾನವಸಹಿತ ಬಾಹ್ಯಾಕಾಶ ಎಂಜಿನಿಯರಿಂಗ್ ಕಚೇರಿಯ ಹೇಳಿಕೆ ತಿಳಿಸಿದೆ. ಜೊತೆಗೆ ರಾಕೆಟ್‌ನ ಈ ಭಾಗ ಬಹುತೇಕ ಛಿದ್ರಗೊಳಿಸಿ ನಾಶಪಡಿಸಲಾಗಿತ್ತು ಎಂದು ಹೇಳಿದೆ.

click me!