ಭಾರತದಲ್ಲಿ 2ನೇ ಅಲೆ ಮೊದಲಿಗಿಂತ 4 ಪಟ್ಟು ದೊಡ್ಡದು: ಯುನಿಸೆಫ್‌

By Suvarna NewsFirst Published May 9, 2021, 9:48 AM IST
Highlights

ಭಾರತದಲ್ಲಿ ಕೊರೋನಾ ವೈರಸ್‌ ಪ್ರಕರಣಗಳ ಹೆಚ್ಚಳಕ್ಕೆ ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್‌) ತೀವ್ರ ಕಳವಳ| ಭಾರತದಲ್ಲಿ 2ನೇ ಅಲೆ ಮೊದಲಿಗಿಂತ 4 ಪಟ್ಟು ದೊಡ್ಡದು: ಯುನಿಸೆಫ್‌

ನವದೆಹಲಿ(ಮೇ.09): ಭಾರತದಲ್ಲಿ ಕೊರೋನಾ ವೈರಸ್‌ ಪ್ರಕರಣಗಳ ಹೆಚ್ಚಳಕ್ಕೆ ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್‌) ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾರತದಲ್ಲಿ ಕೊರೋನಾ 2ನೇ ಅಲೆ ಮೊದಲ ಅಲೆಗಿಂತ 4 ಪಟ್ಟು ದೊಡ್ಡದಾಗಿದೆ. ಶಿಶುಗಳು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರನ್ನೂ ಕೊರೊನಾ ಸೋಂಕು ಬಾಧಿಸುತ್ತಿದೆ ಎಂದು ಯುನಿಸೆಫ್‌ ಪ್ರತಿನಿಧಿ ಡಾ. ಯಾಸ್ಮಿನ್‌ ಅಲಿ ಹಕ್‌ ಹೇಳಿದ್ದಾರೆ.

ಭಾರತದಲ್ಲಿನ ಪರಿಸ್ಥಿತಿ ನಮಗೆ ಎಚ್ಚರಿಕೆಯ ಗಂಟೆಯಾಗಿದೆ. ಕೊರೋನಾ ಸಾಂಕ್ರಾಮಿಕ ಕೊನೆಗೊಳ್ಳುವುದು ಇನ್ನೂ ದೂರವಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಭಾರತ, ಶ್ರೀಲಂಕಾ ಮತ್ತು ನೇಪಾಳದಲ್ಲಿ ಶೇ.10ಕ್ಕಿಂತ ಕಡಿಮೆ ಪ್ರಮಾಣದ ಲಸಿಕೆ ನೀಡಲಾಗಿದೆ. ಒಂದು ವೇಳೆ ಸೋಂಕು ಏರಿಕೆ ಇದೇ ಗತಿಯಲ್ಲಿ ಮುಂದುವರಿದರೆ ಸಂಪೂರ್ಣ ಆರೋಗ್ಯ ವ್ಯವಸ್ಥೆಯೇ ಕುಸಿಯುವ ಅಪಾಯವಿದೆ.

ದಕ್ಷಿಣ ಏಷ್ಯಾ ಮಾತ್ರವಲ್ಲದೇ ವಿಶ್ವದ ಇತರ ದೇಶಗಳಲ್ಲೂ ಸೋಂಕು ಅಪಾಯಕಾರಿ ಮಟ್ಟದಲ್ಲಿ ಏರಿಕೆ ಆಗುತ್ತಿದೆ. ಕೊರೊನಾ ಸಾಂಕ್ರಾಮಿಕ ಮಕ್ಕಳ ಆರೋಗ್ಯ, ಸಾಮಾಜಿಕ ರಕ್ಷಣೆ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ನಿರಂತರ ಲಾಕ್‌ಡೌನ್‌ನಿಂದಾಗಿ ಮಕ್ಕಳು ಮಾನಸಿಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಹಕ್‌ ಹೇಳಿದ್ದಾರೆ.

click me!