ಈ ವೃದ್ಧಾಶ್ರಮದಲ್ಲಿ ಮಹಿಳಾ ಸಿಬ್ಬಂದಿ ವೃದ್ಧರ ಮುಂದೆ ಅಶ್ಲೀಲ ನೃತ್ಯ ಮಾಡ್ತಾರೆ, ಕಾರಣವೇನು?

Published : Oct 12, 2025, 02:25 PM IST
elderly care China

ಸಾರಾಂಶ

Elderly Care China: ವಿಡಿಯೋ(video)ದಲ್ಲಿ, ಮಹಿಳೆ ಶಾಲಾ ಸಮವಸ್ತ್ರ ಮತ್ತು ಕಪ್ಪು ಸಾಕ್ಸ್‌ನಂತಹ ಸಣ್ಣ ಬಟ್ಟೆ ಧರಿಸಿ ವೃದ್ಧ ವ್ಯಕ್ತಿಯ ಮುಂದೆ ಅಶ್ಲೀಲವಾಗಿ ನೃತ್ಯ (dancing) ಮಾಡುತ್ತಿರುವುದು ಕಂಡುಬರುತ್ತದೆ.

ಉತ್ತರ ಚೀನಾದ ನರ್ಸಿಂಗ್ ಹೋಂ ಅಥವಾ ವೃದ್ಧಾಶ್ರಮ (A nursing home in northern China) ಒಂದರ ವಿಡಿಯೋವೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಮಹಿಳಾ ಉದ್ಯೋಗಿಯೊಬ್ಬರು ವೃದ್ಧರ ಮುಂದೆ ಪ್ರಚೋದನಕಾರಿಯಾಗಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (South China Morning Post) ಪ್ರಕಾರ, ಈ ವಿಡಿಯೋವನ್ನು ಸೆಪ್ಟೆಂಬರ್ 24 ರಂದು ಹೆನಾನ್ ಪ್ರಾಂತ್ಯದ ಅನ್ಯಾಂಗ್‌ನಲ್ಲಿರುವ ವೃದ್ಧಾಶ್ರಮದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಿಂದ ಹಂಚಿಕೊಳ್ಳಲಾಗಿದೆ. ವಿಡಿಯೋ(video)ದಲ್ಲಿ, ಮಹಿಳೆ ಶಾಲಾ ಸಮವಸ್ತ್ರ ಮತ್ತು ಕಪ್ಪು ಸಾಕ್ಸ್‌ನಂತಹ ಸಣ್ಣ ಬಟ್ಟೆ ಧರಿಸಿ ವೃದ್ಧ ವ್ಯಕ್ತಿಯ ಮುಂದೆ ಅಶ್ಲೀಲವಾಗಿ ನೃತ್ಯ (dancing) ಮಾಡುತ್ತಿರುವುದು ಕಂಡುಬರುತ್ತದೆ. ವೃದ್ಧರು ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳುವಂತೆ ಪ್ರೇರೇಪಿಸಲು ಈ ನೃತ್ಯವು "ಹೊಸ ಮಾರ್ಗ" ಎಂದು ಹೇಳಲಾಗಿದೆ.

ವಿಡಿಯೋದಲ್ಲಿ ಏನಿತ್ತು?
 

SCMP ಪ್ರಕಾರ, "ನಮ್ಮ ಡೈರೆಕ್ಟರ್ (director) ವೃದ್ಧ (elderly) ರೋಗಿಗಳು ಔಷಧಿ (medicine) ಸೇವಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ" ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿತ್ತು. ಕ್ಲಿಪ್‌ನಲ್ಲಿ ಮತ್ತೊಬ್ಬ ಉದ್ಯೋಗಿ ವೃದ್ಧ ರೋಗಿಗೆ ಔಷಧಿ ನೀಡುತ್ತಿರುವುದನ್ನು ಸಹ ಕಾಣಬಹುದು. ನರ್ಸಿಂಗ್ ಹೋಂನ ಪ್ರೊಫೈಲ್ "90 ರ ದಶಕದಲ್ಲಿ ಡೈರೆಕ್ಟರ್ ನಡೆಸುತ್ತಿರುವ ಸಂತೋಷದ ವೃದ್ಧಾಶ್ರಮ" ಎಂದು ವಿವರಿಸಿತ್ತು. ಇದು ವೃದ್ಧಾಪ್ಯದಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಜನರು ಈ ಕ್ರಮವನ್ನು ವೃದ್ಧರ ಘನತೆಗೆ ಅವಮಾನ ಎಂದು ಟೀಕಿಸಿದರು. ಅನೇಕ ಬಳಕೆದಾರರು (netizen remarked), "ವೃದ್ಧಾಶ್ರಮಗಳಲ್ಲಿಯೂ ಈ ರೀತಿಯ ಮನರಂಜನೆ ನಡೆಯುತ್ತದೆಯೇ?" ಎಂದು ಕೇಳಿದರು. ಇತರರು ಇದನ್ನು ನಾಚಿಕೆಗೇಡು ಮತ್ತು ಸ್ವಲ್ಪವೂ ಸೂಕ್ಷ್ಮತೆ ಇಲ್ಲ ಎಂದು ಕರೆದರು.

ಇಲ್ಲಿದೆ ನೋಡಿ ಫೋಟೋಗಳು

ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಡೈರೆಕ್ಟರ್
 

ಸೆಪ್ಟೆಂಬರ್ 25 ರಂದು ನರ್ಸಿಂಗ್ ಹೋಂನ ಡೈರೆಕ್ಟರ್, ಸ್ಥಳೀಯ ಮಾಧ್ಯಮಗಳೊಂದಿಗೆ (Nanguo Metropolis Daily) ಮಾತನಾಡುತ್ತಾ ವಿಡಿಯೋದಲ್ಲಿರುವ ಮಹಿಳೆ ವೃತ್ತಿಪರ ನರ್ತಕಿ (professional dancer) ಅಲ್ಲ, ಉದ್ಯೋಗಿ. ವೃದ್ಧರನ್ನು ಕಾರ್ಯನಿರತವಾಗಿಡಲು ನರ್ಸಿಂಗ್ ಹೋಂಗಳು ಸಾಮಾನ್ಯವಾಗಿ ಕಾರ್ಡ್‌ ಆಡಿಸುವುದು (card games), ಹಾಡುವುದು (singing) ಅಥವಾ ಲಘು ವ್ಯಾಯಾಮದಂತಹ ಚಟುವಟಿಕೆಗಳನ್ನು ನೀಡುತ್ತವೆ ಎಂದು ಅವರು ಹೇಳಿದರು. ನೃತ್ಯವು ವಾತಾವರಣವನ್ನು ಸಂತೋಷವಾಗಿಡಲು ಮತ್ತು ವೃದ್ಧರು ತಮ್ಮ ಔಷಧಿಗಳನ್ನು ನಿರಾಕರಿಸುವುದನ್ನು ತಡೆಯಲು ಮಾತ್ರ ಉದ್ದೇಶಿಸಲಾಗಿದೆ. ಈ ವಿಧಾನವು ವಿವಾದಾತ್ಮಕವಾಗಿದೆ (inappropriate) ಎಂದು ಅವರು ಒಪ್ಪಿಕೊಂಡರು, ಆದರೆ ಇದು ದುರುದ್ದೇಶ ಹೊಂದಿರಲಿಲ್ಲ ಎಂದೂ ಸ್ಪಷ್ಟಪಡಿಸಿದರು.

ವಿಡಿಯೋ ತೆಗೆದುಹಾಕಿದ ನಂತ್ರವೂ ಮುಂದುವರೆದ ಚರ್ಚೆ
ವಿವಾದದ ನಂತರ, ನರ್ಸಿಂಗ್ ಹೋಂ ತನ್ನ ವಿಡಿಯೋ ಡಿಲೀಟ್ ಮಾಡಿದೆ. ಸಂಸ್ಥೆಯು ಸಾಮಾಜಿಕ ಮಾಧ್ಯಮದಿಂದ ಅಂತಹ 100 ಕ್ಕೂ ಹೆಚ್ಚು ವಿಡಿಯೋ ತೆಗೆದುಹಾಕಿದೆ ಎಂದು ವರದಿಯಾಗಿದೆ. ಆದರೆ ವಿಡಿಯೋವನ್ನು ತೆಗೆದುಹಾಕಿದ ನಂತರವೂ, ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ (Chinese social media) ಚರ್ಚೆ ಮುಂದುವರೆದಿದೆ. ಕೆಲವರು ಇದನ್ನು ತಪ್ಪು ಮನರಂಜನೆ ಎಂದು ಕರೆಯುತ್ತಿದ್ದರೆ, ಇತರರು ವೃದ್ಧರನ್ನು ಮೆಚ್ಚಿಸಲು ನವೀನ ಪ್ರಯೋಗಗಳು ಕೆಟ್ಟದ್ದಲ್ಲ, ಆದರೆ ಆ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಈ ಘಟನೆಯು ನರ್ಸಿಂಗ್ ಹೋಂನ ಖ್ಯಾತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಜೊತೆಗೆ "ಆರೈಕೆ"ಯ ಹೆಸರಿನಲ್ಲಿ ಮನರಂಜನೆ ಮತ್ತು ಅಸಭ್ಯತೆಯ ನಡುವಿನ ಗೆರೆ ಎಷ್ಟು ತೆಳುವಾಗಿರಬಹುದು ಎಂಬುದನ್ನು ತೋರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!