ಕದ್ದು ಮುಚ್ಚಿ ಮಾಲ್‌ವೊಂದರಲ್ಲಿ ಆರು ತಿಂಗ್ಳಿಂದ ಇದಾನೆ ಈ ಭೂಪ! ಈಗ ಸಿಕ್ಕಿ ಬಿದ್ನಾ?

Published : Nov 15, 2023, 11:58 AM IST
ಕದ್ದು ಮುಚ್ಚಿ ಮಾಲ್‌ವೊಂದರಲ್ಲಿ ಆರು ತಿಂಗ್ಳಿಂದ ಇದಾನೆ ಈ ಭೂಪ! ಈಗ ಸಿಕ್ಕಿ ಬಿದ್ನಾ?

ಸಾರಾಂಶ

ಮನೆ ಬಾಡಿಗೆ ಕಟ್ಟೋದನ್ನು ತಪ್ಪಿಸಿಕೊಳ್ಳಲು ಜನರು ನಾನಾ ಪ್ಲಾನ್ ಮಾಡ್ತಾರೆ. ಹಣ ಇಲ್ದಿರೋದು ಬೀದಿ ಬದಿಯಲ್ಲಿ ಟೆಂಟ್ ಕಟ್ಟಿ ವಾಸವಾಗೋದನ್ನು ನೀವು ನೋಡ್ಬಹುದು. ಆದ್ರೆ ಈತ ವಿಚಿತ್ರವಾಗಿದ್ದಾನೆ. ಮಾಲನ್ನೇ ಮನೆ ಮಾಡ್ಕೊಂಡಿದ್ದಾನೆ.   

ಈಗ ಹಳ್ಳಿಗಳಲ್ಲೂ ಸಣ್ಣ ಮಾಲ್ ಗಳನ್ನು ನೀವು ನೋಡ್ಬಹುದು. ಒಂದೇ ಕಡೆ ಎಲ್ಲ ರೀತಿಯ ವಸ್ತುಗಳ ಸಿಗೋದ್ರಿಂದ ಮಾಲ್ ಬರಲು ಜನರು ಹೆಚ್ಚು ಆಸಕ್ತಿ ತೋರಿಸ್ತಾರೆ. ಮಾಲ್ ಗೆ ಹೋಗಿ ಏನು ಮಾಡ್ತೀರಾ ಅಂತ ನಿಮ್ಮನ್ನು ಕೇಳಿದ್ರೆ, ಶಾಪಿಂಗ್ ಮಾಡ್ತೇವೆ ಇಲ್ಲ ಸ್ವಲ್ಪ ಸುತ್ತಾಡಿ, ವಿಂಡೋ ಶಾಪಿಂಗ್ ಮಾಡಿ, ಒಂದಿಷ್ಟು ಫೋಟೋ ಕ್ಲಿಕ್ಕಿಸಿಕೊಂಡು ಮನೆಗೆ ಬರ್ತೇವೆ ಅಂತಾ ನೀವು ಹೇಳ್ತೀರ. ಆದ್ರೆ ಈ ವ್ಯಕ್ತಿ ಎಲ್ಲ ಆದ್ಮೇಲೆ ಮನೆಗೆ ಬರುವ ಸುದ್ದಿ ಹೇಳೋದಿಲ್ಲ. ಯಾಕೆಂದ್ರೆ ಮಾಲನ್ನೇ ಆತ ಮನೆ ಮಾಡಿಕೊಂಡಿದ್ದ. 

ಮಾಲ್ ಗೆ ದಿನಕ್ಕೆ ಸಾವಿರಾರು ಮಂದಿ ಬರ್ತಾರೆ. ದೊಡ್ಡ ಮಾಲ್ ಆದ್ರೆ ಬರುವವರ ಸಂಖ್ಯೆ ಇನ್ನೂ ಹೆಚ್ಚು. ಯಾರು ಬಂದ್ರು ಎಂಬುದನ್ನು ಚೆಕಿಂಗ್ ಮೂಲಕ ನೋಡಲಾಗುತ್ತೆಯಾದ್ರೂ ಎಲ್ಲರ ಮುಖ ನೆನಪಿಟ್ಟುಕೊಳ್ಳಲು ಸೆಕ್ಯುರಿಟಿ ಗಾರ್ಡ್ ಗೆ ಸಾಧ್ಯವಿಲ್ಲ. ಇನ್ನು ಮಾಲ್ ನಿಂದ ಯಾರೆಲ್ಲ ಹೊರಗೆ ಹೋದ್ರು ಅನ್ನೋದನ್ನಂತೂ ನೋಡೋದು ಬಹಳ ಕಷ್ಟ. ನಾಲ್ಕೈದು ದಾರಿಗಳಿರೋದ್ರಿಂದ ಅದನ್ನೆಲ್ಲ ನೋಡ್ತಾ ಕೂರೋದು ಮೂರ್ಖತನವಾಗುತ್ತೆ. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಮಾಲನ್ನೇ ಮನೆ ಮಾಡಿಕೊಂಡಿದ್ದ. 

ಭಾರತದ ಅತೀ ಶ್ರೀಮಂತರ ಮದುವೆಯ ನೆಚ್ಚಿನ ತಾಣ ಅಂಬಾನಿ ಜಿಯೋ ವರ್ಲ್ಡ್‌ ಸೆಂಟರ್‌; ದಿನದ ಬಾಡಿಗೆಯೆಷ್ಟು?

ಘಟನೆ ನೆರೆಯ ಚೀನಾದಲ್ಲಿ ನಡೆದಿದೆ.  ಚೀನಾದ ಈ ವ್ಯಕ್ತಿ ಒಂದೋ ಎರಡೋ ದಿನದ ಮಟ್ಟಿಗೆ ಮಾಲನ್ನು ಮನೆ ಮಾಡಿಕೊಂಡಿಲ್ಲ. ಬರೋಬ್ಬರಿ ಆರು ತಿಂಗಳು ಆತ ಮಾಲ್ ನಲ್ಲಿಯೇ ವಾಸ ಮುಂದುವರೆಸಿದ್ದ ಅಂದ್ರೆ ನಿಮಗೆ ಅಚ್ಚರಿ ಆಗ್ಬಹುದು. ಆದ್ರೆ ಸತ್ಯ. ವ್ಯಕ್ತಿ ಬಹಳ ಜಾಣತನದಿಂದ ಮೆಟ್ಟಿಲುಗಳ ಕೆಳಗೆ ಟೆಂಟ್ ಹಾಕಿದ್ದ. ಟೆಂಟ್ ಜೊತೆಗೆ ಮೇಜು, ಕುರ್ಚಿ, ಕಂಪ್ಯೂಟರ್ ಕೂಡ ಹಾಕಿಕೊಂಡಿದ್ದ. ವ್ಯಕ್ತಿ ಕಳೆದ 6 ತಿಂಗಳಿಂದ ಶಾಪಿಂಗ್ ಸೆಂಟರ್‌ನ ಔಟ್‌ಲೆಟ್ ಅನ್ನು ತನ್ನ ಮನೆ ಮಾಡಿಕೊಂಡಿದ್ದಲ್ಲದೆ, ಅಲ್ಲಿಯೇ ತನ್ನಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡುತ್ತಿದ್ದ.

ಅಚ್ಚರಿ ಅಂದ್ರೆ ಕೆಲ ತಿಂಗಳ ಹಿಂದೆ ಸೆಕ್ಯುರಿಟಿ (Security) ಇವನನ್ನು ನೋಡಿದ್ದಾರೆ. ಇವನನ್ನು ಪ್ರಶ್ನಿಸಿದ್ದಾರೆ. ನಂತ್ರ ಅವರೇ ಈ ವ್ಯಕ್ತಿಗೆ ಉಳಿದುಕೊಳ್ಳಲು ಅವಕಾಶ ನೀಡಿದ್ದಾರೆ. ಆತ ಓದಲು ಶಾಂತವಾದ ಸ್ಥಳ ಹುಡುಕುತ್ತಿದ್ದ. ಅವನಿಗೆ ಇದು ಪ್ರಶಸ್ತವಾಗಿದೆಯಂತೆ. ಹಾಗಾಗಿ ಇಲ್ಲಿ ಉಳಿಯಲು ಅವಕಾಶ ನೀಡಿದ್ವಿ ಎಂದು ಸೆಕ್ಯುರಿಟಿ ಗಾರ್ಡ್ ಹೇಳಿದ್ದಾರೆ. 

ಶೇಕ್ ಇಟ್ ಫುಷ್ಪವತಿ ಹಾಡಿಗೆ ಹೆಜ್ಜೆ ಹಾಕಿದ ನಿಮಿಕಾ ಎಂಜಿನೀಯರ್!

ಕೊನೆಗೂ ಸಿಕ್ಕಿಬಿದ್ದ ವ್ಯಕ್ತಿ : ಮಾಲ್ (Mall) ನಲ್ಲಿಯೇ ಮನೆ ಮಾಡಿದ್ದ ವ್ಯಕ್ತಿ  ಮುಖ್ಯ ಸೆಕ್ಯುರಿಟಿ ಗಾರ್ಡ್ ಕಣ್ಣಿಗೆ ಬೀಳೋವರೆಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದ್ರೆ ಮುಖ್ಯ ಸೆಕ್ಯುರಿಟಿ ಗಾರ್ಡ್ ಗೆ ಈ ವ್ಯಕ್ತಿ ಟೆಂಟ್ (Tent) ಕಾಣ್ತಿದ್ದಂತೆ ಆತನನ್ನು ಬಂಧಿಸಿದ್ದಾರೆ. ಮಾಲ್ ನಲ್ಲಿದ್ದ ಆತನ ಮನೆಯನ್ನು ತೆರವುಗೊಳಿಸಿದ್ದಾರೆ.  ಈ ಘಟನೆಗೆ ಸಂಬಂಧಿಸಿದ ಕೆಲವು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ನೆಟ್ಟಿಗರು ವಿಡಿಯೋದಲ್ಲಿ ಮಾಲ್ ನಲ್ಲಿರುವ ಈತನ ಮನೆ ನೋಡಿ ದಂಗಾಗಿದ್ದಾರೆ.

ಹಿಂದೆಯೂ ನಡೆದಿತ್ತು ಇಂಥ ಘಟನೆ : ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ರಸ್ತೆ ಬದಿಯಲ್ಲಿ ಕೆಲ ಜನರು ರಾತ್ರಿ ಕಳೆಯೋದನ್ನು ನೀವು ನೋಡಿರಬಹುದು. ಆದ್ರೆ ಮಾಲ್ ನಲ್ಲಿ ಅದು ಹೈಫೈ ರೀತಿಯಲ್ಲಿ ಜೀವನ ಸಾಗಿಸ್ತಿರೋ ಇಂಥ ವ್ಯಕ್ತಿಗಳನ್ನು ನೋಡೋದು ಬಹಳ ಅಪರೂಪ. 2007 ರಲ್ಲೂ ಇಂಥ ಘಟನೆ ನಡೆದಿತ್ತು. ರೋಡ್ ಐಲ್ಯಾಂಡ್ ಶಾಪಿಂಗ್ ಮಾಲ್‌ನಲ್ಲಿ ವ್ಯಕ್ತಿಯೊಬ್ಬ ಒಂದು, ಎರಡು ತಿಂಗಳಲ್ಲಿ ಬರೋಬ್ಬರಿ 4 ವರ್ಷಗಳನ್ನು ಆರಾಮವಾಗಿ ಕಳೆದಿದ್ದ.  ಮೈಕೆಲ್ ಟೌನ್ಸೆಂಡ್ ಹೆಸರಿನ ಆತ ಕಲಾವಿದ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್