
ಬೀಜಿಂಗ್: ಯಾವುದೇ ಕೆಲಸ ಮಾಡಿದ್ರೂ ಶ್ರದ್ಧೆಯಿರಬೇಕು. ಶ್ರದ್ಧೆಯಿಂದ ಕೆಲಸ ಮಾಡಿದ್ರೆ ಯಶಸ್ಸು ನಿಮ್ಮನರಸಿಕೊಂಡು ಬರುತ್ತದೆ. ಆಹಾರ, ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವ ಸಿಬ್ಬಂದಿ ಸಂಬಳ ಕಡಿಮೆ ಅನ್ನೋ ಮಾತಿದೆ. ಆದ್ರೆ ಇದೇ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಬದುಕು ಕಟ್ಟಿಕೊಂಡಿರುವ ಕಥೆಗಳು ನಮಗೆ ಸಿಗುತ್ತವೆ. ಇದೀಗ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು 12 ಮಿಲಿಯನ್ ಯುವಾನ್ (US$160,000) 1.42 ಕೋಟಿ ರೂಪಾಯಿ ಹಣ ಉಳಿತಾಯ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಚೀನಾದ ಸೋಶಿಯಲ್ ಮೀಡಿಯಾದಲ್ಲಿ 25 ವರ್ಷದ ಜಾಂಗ್ ಕ್ಸುಯೆಕಿಯಾಂಗ್ (Zhang Xueqiang) ಸದ್ದು ಮಾಡುತ್ತಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (South China Morning Post) ವರದಿ ಪ್ರಕಾರ, ಐದು ವರ್ಷದ ಅವಧಿಯಲ್ಲಿ ಜಾಂಗ್ ಬರೋಬ್ಬರಿ 1.42 ಕೋಟಿ ರೂ. ಹಣ ಉಳಿತಾಯ ಮಾಡಿದ್ದಾರೆ. ಈ ಬಗ್ಗೆ ಜಾಂಗ್ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಬಳಿಕ ಹಲವು ಸುದ್ದಿ ಸಂಸ್ಥೆಗಳು, ಜಾಂಗ್ ಕ್ಸುಯೆಕಿಯಾಂಗ್ ಅವರ ಸಂದರ್ಶನ ನಡೆಸಿವೆ.
ಜಾಂಗ್ ಕ್ಸುಯೆಕಿಯಾಂಗ್ ಮೊದಲು ಫುಜಿಯಾನ್ ಪ್ರಾಂತ್ಯದ ಜಾಂಗ್‌ಝೌ ನಗರದಲ್ಲಿ ಸ್ನೇಹಿತನೊಂದಿಗೆ ಉಪಹಾರ ಮಳಿಗೆಯನ್ನು ನಡೆಸುತ್ತಿದ್ದರು. ಈ ವ್ಯಾಪಾರದಲ್ಲಿ ನಷ್ಟಕ್ಕೊಗಾಗಿ 50,000 ಯುವಾನ್ (US$7,000) ಸಾಲದ ಸುಳಿಗೆ ಸಿಲುಕಿದ್ದರು. 2020ರಲ್ಲಿ ಫುಜಿಯಾನ್ ತೊರೆದು ಕೆಲಸವನ್ನರಸಿ ಶಾಂಘೈಗೆ ಬಂದು ಡೆಲಿವರಿ ಬಾಯ್ ಆಗಿ ಕೆಲಸ ಆರಂಭಿಸಿದ್ರು.
ನಾನು ಐದು ವರ್ಷಗಳಲ್ಲಿ ಕಠಿಣ ಕೆಲಸ ಮಾಡಿ ಮತ್ತು ಕನಿಷ್ಠ ಜೀವನಶೈಲಿಯನ್ನು ಅಳವಡಿಸಿಕೊಂಡು 1.42 ಕೋಟಿ ರೂಪಾಯಿ ಹಣ ಉಳಿಸಿದ್ದೇನೆ. ದಿನಕ್ಕೆ 13 ಗಂಟೆ ಮತ್ತು ವಾರದ ಏಳು ದಿನವೂ ನಾನು ಕೆಲಸ ಮಾಡುತ್ತೇನೆ. ಬೆಳಗ್ಗೆ 10.30ಕ್ಕೆ ಆರಂಭವಾದ ಕೆಲಸ ರಾತ್ರಿ 1 ಗಂಟೆಗೆ ಮುಕ್ತಾಯವಾಗುತ್ತದೆ. ನನಗೆ ದೈನಂದಿನ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಖರ್ಚುಗಳಿಲ್ಲ. ಊಟ ಮಾಡುವುದು ಮತ್ತು ಮಲಗುವುದನ್ನು ಹೊರತುಪಡಿಸಿದ್ರೆ ಉಳಿದೆಲ್ಲಾ ಸಮಯವನ್ನು ಕೆಲಸಕ್ಕೆ ಮೀಸಲಿಟ್ಟಿದ್ದೇನೆ ಎಂದು ಜಾಂಗ್ ಕ್ಸುಯೆಕಿಯಾಂಗ್ ಸಂದರ್ಶನದಲ್ಲಿ ಹೇಳಿದ್ದಾರೆ.
ಜಾಂಗ್ ಕ್ಸುಯೆಕಿಯಾಂಗ್ ತಿಂಗಳಿಗೆ ಸುಮಾರು 300 ಆರ್ಡರ್ ಸ್ವೀಕರಿಸಿ ಕಂಪ್ಲೀಟ್ ಮಾಡುತ್ತಾರೆ. ಒಂದು ಆರ್ಡರ್ ತಲುಪಿಸಲು ಗರಿಷ್ಠ 25 ನಿಮಿಷಗಳನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಜಾಂಗ್ ಕ್ಸುಯೆಕಿಯಾಂಗ್ ಅವರ ಸಿಬ್ಬಂದಿ ಇವರನ್ನು ಆರ್ಡರ್ ಕಿಂಗ್ ಮತ್ತು ಗ್ರೇಟ್ ಗಾಡ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಳೆದ 5 ವರ್ಷದಲ್ಲಿ ಜಾಂಗ್ ಕ್ಸುಯೆಕಿಯಾಂಗ್ ಕೇವಲ ಹಬ್ಬದ ಸಂದರ್ಭದಲ್ಲಿ (Chinese Spring Festival) ಮಾತ್ರ ಕೆಲವೊಂದು ರಜೆಗಳನ್ನು ತೆಗೆದುಕೊಳ್ಳುತ್ತಾರೆ.
ನವೆಂಬರ್ ಅಂತ್ಯದಲ್ಲಿ 5 ವರ್ಷ ಕೆಲಸ ಮಾಡಿ 1.4 ಮಿಲಿಯನ್ ಯುವಾನ್ ಉಳಿಸಿದ್ದಾರೆ. ಸಾಲಗಳನ್ನು ಹಿಂದುರಿಗಿಸಿ, ದಿನನಿತ್ಯದ ಖರ್ಚುಗಳನ್ನು ತೆಗೆದು ಇಷ್ಟು ಹಣ ಉಳಿಸುವಲ್ಲಿ ಸಕ್ಸಸ್ ಆಗಿದ್ದೇನೆ ಎಂದು ಪೋಸ್ಟ್ ಮಾಡಿಕೊಂಡಿದ್ದರು. ದಿನಕ್ಕೆ 8.5 ಗಂಟೆ ನಿದ್ದೆ ಮಾಡುವ ಜಾಂಗ್ 5 ವರ್ಷದಲ್ಲಿ 3,24,000 ಕಿಲೋಮೀಟರ್ ಪ್ರಯಾಣಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸೈಕಲ್‌ನಲ್ಲಿ ಪಾರ್ಸೆಲ್ ತಂದ ಡೆಲಿವರಿ ಬಾಯ್‌ಗೆ ಗ್ರಾಹಕ ಮಾಡಿದ್ದೇನು? ನೆಟ್ಟಿಗರು ಭಾವುಕ
ಜಾಂಗ್ ಕಾಲಹರಣ ಮಾಡುವ ವ್ಯಕ್ತಿ ಅಲ್ಲ, ಆಹಾರ ವಿತರಣೆ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾರೆ. ಜಾಂಗ್ ಯಾವಾಗಲೂ ಆರ್ಡರ್ ಪಡೆದುಕೊಂಡು ಹೋಗುತ್ತಲೇ ಇರುತ್ತಾರೆ ಎಂದು ಶಾಂಘೈನ ಮಿನ್‌ಹಾಂಗ್ ಜಿಲ್ಲೆಯ ವಿತರಣಾ ಕೇಂದ್ರದ ನಿರ್ದೇಶಕ ಯಾನ್ ಹೇಳಿದ್ದಾರೆ. ಜಾಂಗ್ ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಯಾಗಿದ್ದು, ನಮ್ಮ ಸಿಬ್ಬಂದಿಗೆ ಪ್ರೇರಣೆಯಾಗಿದ್ದಾರೆ.
SCMP ವರದಿ ಪ್ರಕಾರ, ನನ್ನ ಕಥೆಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದೆ. ಆದ್ರೆ ಜನರಿಂದ ಇಷ್ಟೊಂದು ಮೆಚ್ಚುಗೆ ಸಿಗುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನನ್ನ ಪರಿಶ್ರಮದ ಬಗ್ಗೆ ನನಗೆ ಹೆಮ್ಮೆ ಇದೆ. ಕಷ್ಟಪಟ್ಟು ಕೆಲಸ ಮಾಡಿದ್ದರಿಂದಲೇ ಇಷ್ಟೊಂದು ಹಣ ಉಳಿತಾಯ ಮಾಡಲು ಸಾಧ್ಯವಾಯ್ತು. ಮುಂದಿನ ವರ್ಷ 8 ಲಕ್ಷ ಯುವಾನ್ ಹೂಡಿಕೆ ಮಾಡಿ ಎರಡು ಹೋಟೆಲ್ ಆರಂಭಿಸುವ ಯೋಜನೆಯನ್ನು ಹೊಂದಿದ್ದೇನೆ ಎಂದು ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದೀಪಾವಳಿಯಂದು ರಾತ್ರಿ 11ರವರೆಗೂ ಕೆಲಸ ಮಾಡಿದ್ದ Zomato ಡೆಲಿವರಿ ಬಾಯ್‌ಗೆ ಸಿಕ್ಕ ಹಣ ಎಷ್ಟು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ