ಚೀನಾದ ಕೊರೋನಾ ಲಸಿಕೆ | ಪ್ರಯೋಗ ಪಾಕ್ ಜನರ ಮೇಲೆ
ಇಸ್ಲಮಾಬಾದ್(ನ.06): ಚೀನಾದ ಜೊತೆ ಭಾರೀ ಕ್ಲೋಸ್ ಆಗಿರೋ ಪಾಕಿಸ್ತಾನದ ಜನರ ಮೇಲೆ ಶೀಘ್ರದಲ್ಲಿಯೇ ಕೊರೋನಾ ಲಸಿಕೆ ಪ್ರಯೋಗವಾಗಲಿದೆ, ಅದೂ ಚೀನಾ ಮೇಡ್.
ಚೀನಾ ಮಿತ್ರರಾಷ್ಟ್ರಗಳಲ್ಲಿ ಒಂದಾಗಿರುವಂತ ಪಾಕಿಸ್ತಾನ ಕರೋನಾವೈರಸ್ ವಿರುದ್ಧ ಚೀನಾ ಕಂಡುಹಿಡಿದ ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ಸ್ವಯಂಸೇವಕರನ್ನು ಹುಡುಕಲು ಒದ್ದಾಡುತ್ತಿದೆ.
undefined
ಉತ್ತರ ಕೊರಿಯಾದಲ್ಲಿ ಧೂಮಪಾನ ನಿಷೇಧ: ಸಿಗರೇಟ್ ಇಲ್ದೆ ಹೇಗಿರ್ತಾರೆ ಕಿಮ್..?
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುಳ್ಳುಸುದ್ದಿಗಳು ಹರಿದಾಡ್ತಿರೋದ್ರಿಂದ ಆಸ್ಪತ್ರೆಗಳು ಲಸಿಕೆ ಪ್ರಯೋಗಕ್ಕೆ ಸ್ವಯಂಸೇವಕರನ್ನು ನೇಮಿಸಿಕೊಳ್ಳಲು ತೊಂದರೆ ಎದುರಿಸುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಟಿಯಾನ್ಜಿನ್ ಮೂಲದ ಚೈನೀಸ್ ಔಷಧ ಕಂಪನಿ ಕಾನ್ಸಿನೋ ಬಯಲಾಜಿಕ್ಸ್ ಜೊತೆ ಅಭಿವೃದ್ಧಿಪಡಿಸಲಾಗಿದ್ದ ಕೊರೋನಾ ಔಷಧ Ad5-nCoV ಪ್ರಯೋಗವನ್ನು ಪಾಕಿಸ್ತಾನ ಎಪ್ರೂವ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಚೀನಾ ಆದ್ಯತೆ ಮೇಲೆ ಪಾಕಿಸ್ತಾನಕ್ಕೆ ಕೊರೋನಾ ಔಷಧ ಒದಗಿಸಲು ಒಪ್ಪಿಕೊಂಡಿತ್ತು.
ಶಾಲೆಗಳಲ್ಲಿನ್ನು ಲೈಂಗಿಕ ಶಿಕ್ಷಣ..! ಪಠ್ಯ ಪುಸ್ತಕದಲ್ಲಿನ್ನು ಸೆಕ್ಸ್ ಪಾಠ
2022 ಜನವರಿಯಲ್ಲಿ Ad5-nCoV ಔಷಧದ ಮೂರನೇ ಹಂತದ ಪ್ರಯೋಗ ಮುಗಿಯಲಿದ್ದು, ಇದರಲ್ಲಿ ಅರ್ಜೆಂಟೀನಾ, ಚಿಲಿ, ಮೆಕ್ಸಿಕೊ, ಸೌದಿ ಅರೇಬಿಯಾ, ರಷ್ಯಾ ಮತ್ತು ಪಾಕಿಸ್ತಾನದಿಂದ ಸುಮಾರು 40,000 ಸ್ವಯಂಸೇವಕರು ಭಾಗವಹಿಸುವ ಸಾಧ್ಯತೆ ಇದೆ.