ಅಮೆರಿಕಾ ಚುನಾವಣೆ : ಮತ ಮರು ಎಣಿಕೆಗೆ ಕೋರಿ ಕೋರ್ಟಿಗೆ

By Kannadaprabha NewsFirst Published Nov 6, 2020, 8:50 AM IST
Highlights

ಅಮೆರಿಕಾ ಚುನಾವಣೆ ಕುತೂಹಲದ ಘಟ್ಟ ತಲುಪಿದ್ದು ಇದೀಗ ಚುನಾವಣೆ ಫಲಿತಾಂಶ ಪ್ರಶ್ನಿಸಿ ಟ್ರಂಪ್ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ

ವಾಷಿಂಗ್ಟನ್‌ (ನ.06): : ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಸೋತರೆ ಫಲಿತಾಂಶವನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಮೊದಲೇ ಹೇಳಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ವಿವಿಧ ರಾಜ್ಯಗಳಲ್ಲಿನ ಫಲಿತಾಂಶವನ್ನು ಪ್ರಶ್ನಿಸಿ ಕೋರ್ಟ್‌ನ ಮೊರೆಹೋಗಲು ಆರಂಭಿಸಿದ್ದಾರೆ. 
ಪೆನ್ಸಿಲ್ವೇನಿಯಾ, ಮಿಶಿಗನ್‌, ಜಾರ್ಜಿಯಾ ಹಾಗೂ ನೆವಾಡಾದಲ್ಲಿ ಮತ ಎಣಿಕೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿ ಟ್ರಂಪ್‌ ಪರ ವಕೀಲರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರೆ.

ಇದೇ ವೇಳೆ, ವಿಸ್ಕಾನ್ಸಿನ್‌ನಲ್ಲಿ ಮರು ಮತ ಎಣಿಕೆ ನಡೆಸಬೇಕೆಂದೂ ನ್ಯಾಯಾಲಯದಲ್ಲಿ ಟ್ರಂಪ್‌ ದಾವೆ ಹೂಡಿದ್ದಾರೆ. ಮತ ಎಣಿಕೆ ಇನ್ನೂ ಪ್ರಗತಿಯಲ್ಲಿರುವ ರಾಜ್ಯಗಳಲ್ಲಿ ತಮ್ಮ ಪಕ್ಷದ ವೀಕ್ಷಕರಿಗೆ ಮತ ಎಣಿಕೆ ಕೇಂದ್ರದೊಳಗೆ ಸರಿಯಾಗಿ ಪ್ರವೇಶ ನೀಡುತ್ತಿಲ್ಲವೆಂದು ಟ್ರಂಪ್‌ ಪರ ಕಾನೂನು ಘಟಕ ಆರೋಪಿಸುತ್ತಿದೆ.

ಅಮೆರಿಕ ಅಧ್ಯಕ್ಷ ಯಾರು?: ಅಂತಿಮ ಹಂತದಲ್ಲಿ ಬಿರುಸಿನ ಮತದಾನ! ...

ಆದರೆ, ಟ್ರಂಪ್‌ ಹೂಡಿರುವ ದಾವೆಯಿಂದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟಿಸುವುದಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಡೆಮಾಕ್ರೆಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್‌ ಪರ ವಕೀಲರು ಹೇಳಿದ್ದಾರೆ.

click me!