ನಮ್ಮ ಜಾಗ, ಪಾಕಿಸ್ತಾನದ ಅತಿಕ್ರಮಣ, ಚೀನಾದ ಅಣೆಕಟ್ಟು, ಬೌದ್ಧ ಶಿಲ್ಪಗಳು ಅನಾಥ!

By Suvarna News  |  First Published May 19, 2020, 9:57 PM IST

ಪಾಕ್- ಚೀನಾ ಕಂಪನಿ ಜತೆ ಸೇರಿ ಮಸಲತ್ತು/ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಣೆಕಟ್ಟು/ ಅಳಿವು ಉಳಿವಿನಲ್ಲಿ ಬೌದ್ಧ ಶಿಲ್ಪಗಳು/ ಮುಂದೆ ಏನಾಗಬಹುದು


ನವದೆಹಲಿ(ಮೇ 19)   ಭಾರತದ ವಿರೋಧದ ನಡುವೆಯೂ ಚೀನಾ ಅಣೆಕಟ್ಟು ನಿರ್ಮಾಣ ಮಾಡಲು ಮುಂದಾಗಿದ್ದು ಸುದ್ದಿಯಾಗುತ್ತಲೇ ಇತ್ತು.  ಗಿಲ್ಗಿಟ್ ಬಾಲ್ಟಿಸ್ತಾನ್ ನ  ಡೈಮರ್ ಭಾಷಾ ಅಣೆಕಟ್ಟು ಯೋಜನೆಗೆ ಚೀನಾ ಹಣ ನೀಡಿದ್ದು ಮುಚ್ಚು ಮರೆ ಏನಿಲ್ಲ.  ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಇಲ್ಲಿಯ ಜನ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿಕೊಂಡೇ ಬಂದಿದ್ದಾರೆ. ಇದೀಗ ಮತ್ತೆ ವಿವಾದಕ್ಕೆ ಈ ಅಣೆಕಟ್ಟು ವಿಚಾರ ತೆರೆದುಕೊಂಡಿದೆ.

ಪುರಾತನ ಬೌದ್ಧ ಶಿಲ್ಪಗಳಿಗೆ ಈ ಅಣೆಕಟ್ಟೆಯಿಂದ ಹಾನಿಯಾಗಲಿದೆ. ಪ್ರವಾಸಿ ತಾಣ ಬರಿಗಾಡಾಗಿ ಬದಲಾಗುವ ಆತಂಕ ಎದುರಾಗಿದೆ.  ಮೇ 13 ರಂದು ಪಾಕಿಸ್ತಾನ ಚೀನಾದ ಕಂಪನಿಯೊಂದಿಗೆ 442 ಬಿಲಿಯನ್ ರೂ. ಒಪ್ಪಂದಕ್ಕೆ ಸಹಿ ಹಾಕಿದ ನಂತರ ಈ ವಿಚಾರ ಮತ್ತಷ್ಟು ವೇಗ ಪಡೆದುಕೊಂಡಿದೆ.  ಈ ಭಾಗದಲ್ಲಿ ಡ್ಯಾಂ ಆದರೆ 50 ಹಳ್ಳಿಗಳಿಗೆ ಸಮಸ್ಯೆ ಆಗಲಿದ್ದು ಬೌದ್ಧ ಶಿಲ್ಪಗಳಿಗೆ ತೊಂದರೆ ಆಗಲಿದೆ.

Tap to resize

Latest Videos

ಜಾಗ ಬಿಟ್ಟು ಹೊರಡಿ ಕುತಂತ್ರಿ ಪಾಕ್  ಗೆ ಕೊನೆ ಸಂದೇಶ

ಶ್ರೀಮಂತ ಪರಂಪರೆ ನಾಶವಾಗುವುದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಈ ಭಾಗದ ಮುಸ್ಲಿಂ ನಾಯಕರು ದನಿ ಎತ್ತಿದ್ದಾರೆ.  ಇತಿಹಾಸ ಸಾರುವ ಪರಂಪರೆಯೊಂದು ನೀರಿನಲ್ಲಿ ಮುಳುಗಡೆಯಾಗಿಹೋಗಲಿದೆ ಎಂದು ಕಮೆಂಟ್ ಮಾಡಿದ್ದಾರೆ. 

ಸಿಂಧೂ ನದಿ ಪಾತ್ರದ ಈ ಜಾಗವನ್ನು, ಡೈಮರ್ , ಹುಂಜಾ ಮತ್ತು ನಗರ್ ಜಿಲ್ಲೆಗಳನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಇಲ್ಲಿಯ ನಿವಾಸಿ ಅರಿಬ್ ಅಲಿ ಹೇಳುತ್ತಾರೆ.  ಎಕಾನಿಮಿಕ್ ಕಾರಿಡಾರ್ ವಿಚಾರ ಸಹ ಇಲ್ಲಿಂದಲೇ ವಿವಾದ ಎಬ್ಬಿಸಿರುವುದು.

ತನ್ನ ಸ್ವಂತ ದುಡ್ಡಿನಲ್ಲಿಯೇ ಅಣೆಕಟ್ಟೆ ನಿರ್ಮಾಣ ಮಾಡುತ್ತೇನೆ ಎಂದು ಪಾಕಿಸ್ತಾನ ಹಿಂದೊಮ್ಮೆ ಹೇಳಿಕೊಂಡಿತ್ತು. ಆಕ್ರಮಿತ ಪ್ರದೇಶ ಬಿಟ್ಟು ಹೊರಡಿ ಇದು ನಿಮಗೆ ಕೊನೆಯ ಸಂದೇಶ ಎಂದು ಭಾರತದ ಗೃಹ ಇಲಾಖೆ ಸಹ ಎಚ್ಚರಿಕೆ ನೀಡಿತ್ತು.

ಭಾರತಕ್ಕೆ ಸೇರಿದ ಜಾಗ ಆಕ್ರಮಿಸಿಕೊಂಡಿರುವ ಪಾಕಿಸ್ತಾನ, ಆ ಜಾಗದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವ ಚೀನಾ.. ಒಟ್ಟಿನಲ್ಲಿ ಶಾಂತ ಸ್ವರೂಪಿಯಾಗಿ ನಿಂತಿರುವ ಬೌದ್ಧ ಶಿಲ್ಪಗಳು ..


 

click me!