ಸತತ ಎರಡನೇ ವರ್ಷವೂ ಕುಸಿದ ಚೀನಾದ ಜನಸಂಖ್ಯೆ! ಈಗಿನ ಅಂಕಿಸಂಖ್ಯೆ ಏನು?

By Suvarna News  |  First Published Jan 17, 2024, 12:54 PM IST

ಚೀನಾದ ಜನಸಂಖ್ಯೆಯನ್ನು ಭಾರತ ಕಳೆದ ವರ್ಷವೇ ಹಿಂದಿಕ್ಕಿದೆ. ಈ ವರ್ಷ ಚೀನಾ ಜನಸಂಖ್ಯೆ ಮತ್ತಷ್ಟು ಗಣನೀಯವಾಗಿ ಇಳಿಕೆ ಕಂಡಿದ್ದು, ದೇಶಕ್ಕೆ ಆರ್ಥಿಕ ಸವಾಲುಗಳು ಹೆಚ್ಚಿವೆ. 


ಒಂದು ಕಾಲದಲ್ಲಿ ಜಗತ್ತಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ಚೀನಾದ ಜನಸಂಖ್ಯೆಯು ಸತತ ಎರಡನೇ ವರ್ಷವೂ ಕುಸಿದಿದೆ. 2022ರಲ್ಲಿ ಇದ್ದದ್ದಕ್ಕಿಂತ 2023ರಲ್ಲಿ ಜನಸಂಖ್ಯೆಯು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕುಗ್ಗಿದೆ ಎಂದು ದೇಶದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋವನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ. 

2023ರಲ್ಲಿ ಚೀನಾದ ಒಟ್ಟು ಜನಸಂಖ್ಯೆಯು 2.75 ಮಿಲಿಯನ್‌‌ರಷ್ಟು ಕಡಿಮೆಯಾಗಿದೆ. 2023ರ ಕೊನೆಗೆ  ಇಲ್ಲಿನ ಜನಸಂಖ್ಯೆ  1409 ದಶಲಕ್ಷವಾಗಿದೆ. ಒಂದು ಕಾಲದಲ್ಲಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದ ಚೀನಾವನ್ನು ಕಳೆದ ವರ್ಷ ಭಾರತ ಹಿಂದಿಕ್ಕಿತ್ತು. 

Tap to resize

Latest Videos

ಇದೀಗ ಚೀನಾಕ್ಕೆ ಕುಗ್ಗುತ್ತಿರುವ ಜನಸಂಖ್ಯೆಯು ದೀರ್ಘಾವಧಿಯ ಆರ್ಥಿಕ ಬೆಳವಣಿಗೆಯ ಬಗ್ಗೆ ಕಳವಳ ತಂದಿದೆ. ಹಾಗಾಗಿ, ಬೀಜಿಂಗ್ ಈಗ ಸಬ್ಸಿಡಿಗಳು ಮತ್ತು ಫಲವತ್ತತೆ ಪರ ಪ್ರಚಾರದ ಮೂಲಕ ಜನನ ಪ್ರಮಾಣವನ್ನು ಹೆಚ್ಚಿಸಲು ಪರದಾಡುತ್ತಿದೆ.

ಒಂದೇ ಮಗುವಿನ ನೀತಿ ತಂದ ಬಳಿಕ ಚೀನಾದಲ್ಲಿ ಜನನ ಪ್ರಮಾಣ ಗರಿಷ್ಠ ಕುಸಿಯಿತು. 2015ರಲ್ಲಿ ಈ ನಿಯಮ ಸಡಿಲಿಸಿ 2 ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿದ್ದರೂ, ಜನನ ಪ್ರಮಾಣ ಹೆಚ್ಚಳ ಕಂಡಿಲ್ಲ. ಇದಕ್ಕೆ ಕೋವಿಡ್ ಸಾಂಕ್ರಾಮಿಕ ಕೂಡಾ ಕಾರಣವಾಯಿತು. ಹೆಚ್ಚುತ್ತಿರುವ ಜೀವನ ವೆಚ್ಚ,  ಜೊತೆಗೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಉದ್ಯೋಗಕ್ಕೆ ಹೋಗುವುದು ಕೂಡಾ ಜನಸಂಖ್ಯೆ ಕುಸಿಯಲು ಕಾರಣವಾಗಿದೆ.

ಚೀನಾದಲ್ಲಿ ಯುವ ಜನಸಂಖ್ಯೆಯಲ್ಲಿ ಕುಸಿತದೊಂದಿಗೆ, ಕಾರ್ಮಿಕರ ಸಂಖ್ಯೆ ಕ್ಷೀಣವಾಗಿದೆ. ಗ್ರಾಹಕರೂ ಇಳಿಮುಖವಾಗಿದ್ದಾರೆ. ವೃದ್ಧರ ಸಂಖ್ಯೆ ಹೆಚ್ಚಿದೆ. ವೃದ್ಧರ ಆರೈಕೆ ಮತ್ತು ನಿವೃತ್ತಿ ಪ್ರಯೋಜನಗಳಿಗೆ ಸಂಬಂಧಿಸಿದ ವೆಚ್ಚ ಹೆಚ್ಚುತ್ತಿದೆ. ಈ ಎಲ್ಲ ಅಂಶಗಳಿಂದಾಗಿ ದೇಶದಲ್ಲಿ ಬೆಳವಣಿಗೆಯ ನಿರೀಕ್ಷೆಗಳು ಕಡಿಮೆಯಾಗುತ್ತಿವೆ.

ಏನಿದು ವಿಸ್ಮಯ! 57 ವರ್ಷ ಹಿಂದೆಯೇ ನೇಪಾಳದ ಅಂಚೆಚೀಟಿಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆಯ ವರ್ಷ ಪ್ರಕಟ!

2050 ರ ಹೊತ್ತಿಗೆ ಮತ್ತಷ್ಟು ಕುಸಿತ
ವಿಶ್ವಸಂಸ್ಥೆಯ ತಜ್ಞರು 2050ರ ವೇಳೆಗೆ ಚೀನಾದ ಜನಸಂಖ್ಯೆಯಲ್ಲಿ ಗಣನೀಯ ಕುಸಿತವನ್ನು ಅಂದಾಜು ಮಾಡಿದ್ದಾರೆ. ಏಕೆಂದರೆ, ಚೀನಾದಲ್ಲಿ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ನಿವೃತ್ತಿ ವಯಸ್ಸಿನ ಜನಸಂಖ್ಯೆಯು 2035ರ ವೇಳೆಗೆ 40 ಕೋಟಿ ಮೀರುವ ನಿರೀಕ್ಷೆಯಿದೆ.
 

click me!