ಡೆನ್ಮಾರ್ಕ್ ರಾಣಿ ಮಾರ್ಗರೇಟ್‌ ಪದತ್ಯಾಗ, ರಾಜನಾಗಿ ಪುತ್ರ ಅಧಿಕಾರಕ್ಕೆ, 1ಲಕ್ಷಕ್ಕೂ ಹೆಚ್ಚು ನೆರೆದ ಪ್ರಜೆಗಳು!

Published : Jan 15, 2024, 05:39 PM IST
ಡೆನ್ಮಾರ್ಕ್ ರಾಣಿ ಮಾರ್ಗರೇಟ್‌ ಪದತ್ಯಾಗ, ರಾಜನಾಗಿ ಪುತ್ರ ಅಧಿಕಾರಕ್ಕೆ, 1ಲಕ್ಷಕ್ಕೂ ಹೆಚ್ಚು ನೆರೆದ ಪ್ರಜೆಗಳು!

ಸಾರಾಂಶ

ಡೆನ್ಮಾರ್ಕ್‌ನ ಕಿಂಗ್ ಫ್ರೆಡರಿಕ್ ಎಕ್ಸ್‌ ಭಾನುವಾರ ಪಟ್ಟಕ್ಕೇರಿದ್ದಾರೆ. ಅವರ ತಾಯಿ ರಾಣಿ ಮಾರ್ಗರೇಟ್‌ ಪದತ್ಯಾಗ ಮಾಡಿದ್ದು, ಅವರ ಪುತ್ರ ಫೆಡ್ರಿಕ್‌ 10ನೇ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಡೆನ್ಮಾರ್ಕ್‌ನ ಕಿಂಗ್ ಫ್ರೆಡರಿಕ್ ಎಕ್ಸ್‌ ಭಾನುವಾರ ಪಟ್ಟಕ್ಕೇರಿದ್ದಾರೆ. ಅವರ ತಾಯಿ ರಾಣಿ ಮಾರ್ಗರೇಟ್‌ ಪದತ್ಯಾಗ ಮಾಡಿದ್ದು,  ಅವರ ಪುತ್ರ ಫೆಡ್ರಿಕ್‌ 10ನೇ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದು, ಆ ನಂತರ ಹೊಸ ಯುಗ ಆರಂಭವಾಗಿದೆ. ರಾಜನಾಗಿ ಫೆಡ್ರಿಕ್ ಅಧಿಕಾರ ಗ್ರಹಣ ಮಾಡುವ ಅಭೂತಪೂರ್ವ ಗಳಿಗೆಗೆ  ಕೋಪನ್‌ಹೇಗನ್‌ನ ಕ್ರಿಸ್ತಿಯಾನ್ಸ್‌ಬರ್ಗ್‌ ಸ್ಕ್ವೈರ್‌ನಲ್ಲಿ  100,000 ಕ್ಕೂ ಹೆಚ್ಚು ಜನರು ಸಾಕ್ಷಿಯಾಗಿ ಆಗಮಿಸಿದ್ದರು.

ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿ ಬ್ರೇಕಪ್‌ ಬಳಿಕ ಗೆಳತಿಯ ಗಂಡನನ್ನೇ ಮದುವೆಯಾದ ನಟಿ!

ಕ್ರಿಸ್ತಿಯಾನ್ಸ್‌ಬರ್ಗ್‌ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ 83 ವರ್ಷದ ರಾಣಿ ಮಾರ್ಗರೇಟ್‌, ಅಧಿಕಾರ ತ್ಯಜಿಸುವ ಘೋಷಣೆಗೆ ಸಹಿ ಹಾಕುವ ಮೂಲಕ ತನ್ನ  52 ವರ್ಷದ ಅವರ ಸುದೀರ್ಘ ಆಡಳಿತಾವಧಿಯ ಯುಗಕ್ಕೆ ಅಂತ್ಯ ಹಾಡಿದರು.  ಬಳಿಕ ರಾಜನಾಗಿ ಅವರ 55 ವರ್ಷ ವಯಸ್ಸಿನ ಪುತ್ರ ಫೆಡ್ರಿಕ್‌ ಅವರ ಅಧಿಕಾರವಧಿ ಆರಂಭಗೊಂಡಿತು.

ಸೂಪರ್‌ ಸ್ಟಾರ್‌ ರಾಜೇಶ್ ಖನ್ನಾರ 7 ವರ್ಷದ ಲಿವಿನ್ ರಿಲೇಷನ್ ಶಿಪ್‌ ಗೆ ಹುಳಿ ಹಿಂಡಿದ ಕ್ರಿಕೆಟರ್‌!

ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ರಾಣಿ ಮಾರ್ಗರೇತ್ ಅವರು ಸಚಿವ ಸಂಪುಟದಿಂದ ನಿರ್ಗಮಿಸಿದರು. ರಾಜ ಫೆಡ್ರಿಕ್, ಅವರ ಪತ್ನಿ ಮತ್ತು  18 ವರ್ಷದ ಪುತ್ರ ಯುವ ರಾಜಕುಮಾರ ಈ ಸಂದರ್ಭದಲ್ಲಿ ಜೊತೆಗಿದ್ದರು.

ಫೆಡ್ರಿಕ್ ಅವರು ನೂತನ ರಾಜನಾಗಿ ಅಧಿಕಾರ ಸ್ವೀಕರಿಸಿದ್ದನ್ನು ಪ್ರಧಾನಿ ಮ್ಯಾಟೆ ಫ್ರೆಡೆರಿಕ್ಸೆನ್ ಅವರು ಅರಮನೆಯ ಮಹಡಿಯಲ್ಲಿ ಘೋಷಣೆ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ
ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ