ಅಮೆಜಾನ್ ದಟ್ಟ ಕಾಡು ಹಲವು ಜೀವ ಸಂಕುಲಗಳ ಆಗರ.ಅಮೆಜಾನ್ ಕಾಡಿನ ಕುರಿತ ಪ್ರತಿ ಅಧ್ಯಯನದಲ್ಲೂ ವಿಸ್ಮಯ, ವಿಚಿತ್ರಗಳು ಪತ್ತೆಯಾಗಿದೆ. ಇದೀಗ ಪುರಾತತ್ವ ಇಲಾಖೆ ಅಧಿಕಾರಿಗಳು ಬರೋಬ್ಬರಿ 3,000 ವರ್ಷಗಳ ಹಳೇ ನಗರವನ್ನು ಪತ್ತೆ ಹಚ್ಚಿದ್ದಾರೆ. ಅತ್ಯಂತ ಸುಸಜ್ಜಿತ ನಗರ ಇದಾಗಿದ್ದು, ಅಮೆಜಾನ್ ಕಾಡಿನಲ್ಲಿ ಜನವಸತಿ ಇರುವಿಕೆಯನ್ನು ದೃಢಪಡಿಸಿದೆ.
ಬ್ರೆಜಿಲ್(ಜ.15) ಅಮೆಜಾನ್ ದಟ್ಟಕಾಡು ಕುತೂಹಲಗಳ ಆಗರ. ಅಧ್ಯಯನಕಾರರಿಗೆ ಆಸಕ್ತಿಯ ವಿಷಯ. ದಟ್ಟಾರಣ್ಯ, ಮಳೆಕಾಡು ಎಂದೇ ಜನಪ್ರಿಯವಾಗಿರುವ ಅಮೆಜಾನ್ ಕಾಡು ಹಲವು ಜೀವಿಸಂಕುಲಗಳ ಆಶ್ರಯ ತಾಣ. ಈ ಕಾಡಿನ ಕುರಿತು ಹಲವು ಅಧ್ಯಯನಗಳು ನಡೆದಿದೆ. ಇದೀಗ ಪುರಾತತ್ವ ಇಲಾಖೆ ಅದಿಕಾರಿಗಳು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಬರೋಬ್ಬರಿ 3,000 ವರ್ಷಗಳ ಹಳೇ ನಗರವೊಂದು ಅಮೆಜಾನ್ ದಟ್ಟಾರಣ್ಯದಲ್ಲಿ ಪತ್ತೆಯಾಗಿದೆ. ಸುಸಜ್ಜಿತ, ರಸ್ತೆ, ಕಟ್ಟಡ ಸೇರಿದಂತೆ ಎಲ್ಲಾ ವ್ಯವಸ್ಥೆಗಳ ನಗರ ಇದಾಗಿದೆ. ಈ ಸಂಶೋಧನೆಯಿಂದ ಇದೀಗ ಅಮೆಜಾನ್ ಕಾಡಿನಲ್ಲಿ ಜನವಸತಿ ಇತ್ತು ಅನ್ನೋದು ದೃಢಪಟ್ಟಿದೆ.
ಅಮೆಜಾನ್ ಕಾಡಿನಲ್ಲಿ ಜನರು ಮನೆ, ಕಟ್ಟಡ, ನಗರ ಕಟ್ಟಿ ವಾಸಿಸಿದ ಕುರುಹಗಳಿಲ್ಲ ಎಂದೇ ಭಾವಿಸಲಾಗಿತ್ತು.ಬುಡುಕಟ್ಟು ಸಮುದಾಯ, ಕಾಡಿನ ಜನರು ವಾಸಗಳು ಪತ್ತೆಯಾಗಿದೆ. ಆದರೆ ಈ ಸಮುದಾಯ ಕೂಡ ನಶಿಸಿ ಹೋಗಿದೆ ಅನ್ನೋದ ವರದಿಗಳೂ ಇವೆ. ಇದೀಗ ಈಕ್ವೇಡಾರ್ ಭಾಗದಲ್ಲಿ ಬರವು ಅಮೆಜಾನ್ ಕಾಡಿನ ನಡುವೆ ಈ ನಗರ ಪತ್ತೆಹಚ್ಚಲಾಗಿದೆ. ವಿಶೇಷ ಅಂದರೆ ಈಗ ಪತ್ತೆಯಾಗಿರುವ ಈ ಹಳೇ ನಗರದಿಂದ ಈಕ್ವೇಡಾರ್‌ನ ಉಪಾನೋ ಕಣಿವೆಯನ್ನು ಸಂಪರ್ಕಿಸುವ ರಸ್ತೆಗಳಿವೆ. 3000 ಸಾವಿರ ವರ್ಷಗಳ ಹಳೇ ಕಟ್ಟಡ, ರಸ್ತೆ, ಕಣಿವೆ ಎಲ್ಲವೂ ಈ ನಗರದ ವೈಭವವನ್ನು ಹೇಳುತ್ತಿದೆ.
ಅಮೆಜಾನ್ ಕಾಡಲ್ಲಿ 4 ಮಕ್ಕಳು.. 40 ದಿನ: ವಿಮಾನ ದುರಂತದಲ್ಲಿ ಇವರು ಬದುಕಿದ್ದೇ ಒಂದು ಪವಾಡ..!
ರಿಮೂಟ್ ಸೆನ್ಸಿಂಗ್ LiDAR, ಲೇಸರ್ 3ಡಿ ಸ್ಕ್ಯಾನಿಂಗ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಈ ನಗರ ಪತ್ತೆಹಚ್ಚಲಾಗಿದೆ. ಈ ಸಂಶೋಧನೆಯ ನೇತೃತ್ವವಹಿಸಿದ ಫ್ರಾನ್ಸ್ ನ್ಯಾಷನಲ್ ಸೆಂರ್ ಫಾರ್ ಸೈಂಟಿಫಿಕ್ ರಿಸರ್ಚ್ ನಿರ್ದೇಶಕ ಪ್ರೊಫೆಸರ್ ಸ್ಟೀಫನ್ ರೋಸ್ಟೇನ್ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ಅಮೆಜಾನ್ ಕಾಡಿನಲ್ಲಿ ಇಷ್ಟು ದಿನ ಬುಡಕಟ್ಟು ಸಮುದಾಯದ ಜನರು ವಾಸಿಸುವುದನ್ನು ಅಧ್ಯಯನ ನಡೆಸಲಾಗಿದೆ. ನಗರ, ಆಧುನಿಕತೆ, ಮನೆ ಈ ರೀತಿಯ ಯಾವುದೇ ವಿಷಗಳ ಅರಿವೇ ಇಲ್ಲ. ಕಾಡಿನಲ್ಲಿ ಕಾಡು ಪ್ರಾಣಿಗಳಂತೆ ಬದುಕುತ್ತಿದ್ದ ಸಮುದಾಯ ಇದಾಗಿದೆ. ಆದರೆ ಇದೇ ಕಾಡಿನಲ್ಲಿ 3,000 ವರ್ಷಗಳ ಹಿಂದೆ ನಗರ ಪ್ರದೇಶದಲ್ಲಿ ಜನವಸಿ ಇತ್ತು. ಇಲ್ಲಿ ಎಲ್ಲಾ ಸೌಲಭ್ಯ ಒಳಗೊಂಡ ನಗರ ಪ್ರದೇಶದ ವ್ಯವಸ್ಥೆಗಳಲ್ಲಿ ಜನರು ವಾಸಿಸಿದ್ದಾರೆ ಅನ್ನೋದು ಖಚಿತಗೊಂಡಿದೆ ಎಂದು ಸ್ಟೀಫನ್ ಹೇಳಿದ್ದಾರೆ.
ಈ ನಗರದ ಕುರಿತು ಹೆಚ್ಚಿನ ಅಧ್ಯಯನ ನಡೆಸಿದರೆ ಹಲವು ರೋಚಕ ಮಾಹಿತಿ ಬಹಿರಂಗವಾಗಲಿದೆ. ಇಷ್ಟೇ ಅಲ್ಲ 3,000 ವರ್ಷಗಳ ಕುತೂಹಲ ಹಾಗೂ ಇತಿಹಾಸವೇ ತೆರೆದುಕೊಳ್ಳಲಿದೆ ಎಂದು ಸ್ಟೀಫನ್ ಹೇಳಿದ್ದಾರೆ.
ಯಪ್ಪಾ..ಇಲ್ಲಿನ ಹುಡುಗ್ರು ಮದ್ವೆಯಾಗೋಕೆ ಸ್ಪೆಷಲ್ ಟೆಸ್ಟ್ ಪಾಸ್ ಮಾಡ್ಬೇಕು, ಸಿಕ್ಕಾಪಟ್ಟೆ ನೋವಾದ್ರೂ ಸಹಿಸ್ಕೋಬೇಕು!