
ಕಳೆದ ತಿಂಗಳು ಚೀನಾದಲ್ಲಿ ನಡೆದ ಎರಡನೇ ಮಹಾಯುದ್ಧದ ವಿಜಯೋತ್ಸವ ಪರೇಡ್‌ನಲ್ಲಿ ನಡೆದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಗುಟ್ಟಾಗಿ ಮಾತನಾಡಿದ್ದರು ಎನ್ನಲಾದ ಒಂದು ವಿಷಯ ವಿಶ್ವದ ಗಮನ ಸೆಳೆದಿತ್ತು. ಅದೇನೆಂದರೆ, ಮನುಷ್ಯರು 150 ವರ್ಷ ಬದುಕುವ, ಅಂಗಾಂಗಗಳನ್ನು ಪದೇ ಪದೇ ಬದಲಾಯಿಸುವ ಮಾತ್ರೆಯೊಂದನ್ನು ಕಂಡುಹಿಡಿಯುವ ಬಗ್ಗೆ ಇವರು ಮಾತನಾಡಿದ್ದಾರೆ ಎನ್ನಲಾಗಿತ್ತು. ಅಮರತ್ವಕ್ಕಾಗಿ ಇವರಿಬ್ಬರೂ ಪ್ರಯೋಗ ನಡೆಸುತ್ತಿದ್ದಾರೆ ಎನ್ನುವ ವಿಷಯ ಊಹಾಪೋಹಗಳಿಗೆ ಅನುವು ಮಾಡಿಕೊಟ್ಟಿತ್ತು. ಇದು ಸಾಧ್ಯನಾ ಎನ್ನುವ ಚರ್ಚೆಯನ್ನೂ ಹುಟ್ಟುಹಾಕಲಾಗಿತ್ತು.
ಆದರೆ, ಇದನ್ನು ಇದೀಗ ಚೀನಾ ಸಾಧ್ಯ ಮಾಡಿ ತೋರಿಸಿದೆ ಎನ್ನಲಾಗಿದೆ. ಸದ್ಯದ ಸ್ಥಿತಿಯಲ್ಲಿ ಮನುಷ್ಯನ ಸರಾಸರಿ ಆಯಸ್ಸು 60 ವರ್ಷ ಎನ್ನಲಾಗಿದೆ. ಹಲವರು 80ವರ್ಷಕ್ಕಿಂತಲೂ ಮೇಲ್ಪಟ್ಟು ಜೀವನ ನಡೆಸುತ್ತಿದ್ದಾರೆ. 100 ವರ್ಷ ಬದುಕಿರುವವರೂ ಇದ್ದಾರೆ. ಈಚೆಗೆ ನಿಧನರಾದ ಸಾಲುಮರದ ತಿಮ್ಮಕ್ಕ ಅವರಿಗೆ 114 ವರ್ಷ ಎನ್ನಲಾಗಿದೆ. ಆದರೆ ಇವೆಲ್ಲವೂ ಅಪರೂಪದ ಘಟನೆಗಳು. ಆದರೆ ಚೀನಾ ಇದೀಗ ಮಾತ್ರೆಯೊಂದನ್ನು ಕಂಡುಹಿಡಿದಿದ್ದು, ಅದರ ಸೇವನೆಯಿಂದ 150 ವರ್ಷ ಬದುಕಬಹುದಂತೆ! ಇಡೀ ವಿಶ್ವದಲ್ಲಿಯೇ ಕೋಲಾಹಲ ಸೃಷ್ಟಿಸೋ ವಿಷಯ ಇದೀಗ ಬಹಿರಂಗಗೊಂಡಿದೆ.
ಶೆನ್ಜೆನ್‌ನಲ್ಲಿರುವ ಜೈವಿಕ ತಂತ್ರಜ್ಞಾನ ಕಂಪೆನಿಯೊಂದು ಇದನ್ನು ಕಂಡುಹಿಡಿದಿದೆ ಎನ್ನಲಾಗುತ್ತಿದೆ. ಇದೀಗ ಅಂತರರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ. ಈ ಮಾತ್ರೆ ಸೇವನೆ ಮಾಡಿದರೆ, ವಯಸ್ಸಿಗೆ ಸಂಬಂಧಿಸಿದ ಕ್ಷೀಣತೆಯನ್ನು ನಿಧಾನಗೊಳಿಸುವುದಂತೆ. ಸದ್ಯ ಇದರ ಸಂಶೋಧನೆ ಮಾಡಿರುವ ಲೋನ್ವಿ ಬಯೋಸೈನ್ಸ್ ಈ ಹೇಳಿಕೆಯನ್ನು ನೀಡಿದೆ. ವೃದ್ಧಾಪ್ಯ ಕೋಶಗಳನ್ನು ಎದುರಿಸುವುದು ಈ ಮಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದು ದೀರ್ಘಕಾಲದ ಉರಿಯೂತ ಮತ್ತು ವಯಸ್ಸಾಗುವಿಕೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿಯಂತ್ರಿಸುತ್ತದೆಯಂತೆ. ಇದರ ಸೂತ್ರೀಕರಣವು ದ್ರಾಕ್ಷಿ ಬೀಜಗಳಿಂದ ಪಡೆದ ಸಂಯುಕ್ತವಾದ ಪ್ರೊಸೈನಿಡಿನ್ C1 (PCC1) ಅನ್ನು ಅವಲಂಬಿಸಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಅದಕ್ಕೆ ವಿಶೇಷ ದೀರ್ಘಾಯುಷ್ಯ ಮಾತ್ರೆ (special longevity pill) ಎಂದು ಹೆಸರಿಟ್ಟಿದ್ದಾರೆ. ಅದು ಮನುಷ್ಯರು ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ ಜೀವಿತಾವಧಿಯನ್ನೂ ಹೆಚ್ಚಿಸುತ್ತದೆ. ಇದು ದೇಹದಲ್ಲಿನ ಹಳೆಯ ಮತ್ತು ನಿಷ್ಕ್ರಿಯ ಕೋಶಗಳನ್ನು ಗುರಿಯಾಗಿಸಿ ಕೆಲಸ ಮಾಡಲಿದೆ. ಇದನ್ನು ವಿಜ್ಞಾನಿಗಳು zombie cells ಎಂದು ಕರೆಯುತ್ತಾರೆ.
ಇಂಥ ಹೊಸ ಪ್ರಯೋಗಗಳನ್ನು ಮೊದಲು ಇಲಿಯ ಮೇಲೆ ಮಾಡಲಾಗುತ್ತದೆ. ಅದೇ ರೀತಿ ಇದೀಗ ಬಂದಿರುವ ವರದಿಗಳ ಪ್ರಕಾರ, ಈ ಮಾತ್ರೆಯನ್ನು ಕೂಡ ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಅದು ಯಶಸ್ವಿಯಾಗಿದೆ ಎನ್ನಲಾಗಿದೆ. ಇಲಿಗಳ ಒಟ್ಟಾರೆ ಜೀವಿತಾವಧಿಯಲ್ಲಿ ಶೇಕಡಾ 9.4 ರಷ್ಟು ಹೆಚ್ಚಳ ಕಂಡುಬಂದಿದೆ. ಚಿಕಿತ್ಸೆಯ ನಂತರ ಅವುಗಳ ಉಳಿದ ಜೀವಿತಾವಧಿ ಶೇಕಡಾ 64ಕ್ಕಿಂತ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಇದರ ಲೆಕ್ಕಾಚಾರವನ್ನು ಮನುಷ್ಯನ ಜೀವಿತ ಅವಧಿಗೆ ಹೋಲಿಕೆ ಮಾಡಿ, 150 ವರ್ಷ ಮನುಷ್ಯ ಬದುಕಬಲ್ಲ ಎಂದು ಅಂದಾಜಿಸಲಾಗಿದೆ.
ಕಂಪೆನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಲ್ಯು ಕ್ವಿಂಗ್ಹುವಾ, ನ್ಯೂಯಾರ್ಕ್ ಟೈಮ್ಸ್‌ಗೆ 150 ವರ್ಷಗಳ ಜೀವಿತಾವಧಿಯನ್ನು ಸಾಧಿಸುವುದು "ಖಂಡಿತವಾಗಿಯೂ ವಾಸ್ತವಿಕ" ಎಂದು ಹೇಳಿದ್ದಾರೆ. 2024 ರಲ್ಲಿ ಚೀನಾದ ಜೀವಿತಾವಧಿ ಸುಮಾರು 79 ವರ್ಷಗಳು ಎಂದು ಅಂದಾಜಿಸಲಾಗಿದೆ, ಇದು ವಿಶ್ವಾದ್ಯಂತ ಸರಾಸರಿಗಿಂತ ಹಲವಾರು ವರ್ಷಗಳು ಹೆಚ್ಚಾಗಿದೆ. ದೇಶವು ಸಾರ್ವಜನಿಕ ಹಿತಾಸಕ್ತಿ, ಸರ್ಕಾರಿ ಗಮನ ಮತ್ತು ವಯಸ್ಸಾದ ಸಂಬಂಧಿತ ವಿಜ್ಞಾನದ ಕಡೆಗೆ ನಿರ್ದೇಶಿಸಲ್ಪಟ್ಟ ಖಾಸಗಿ ಹೂಡಿಕೆಯಲ್ಲಿ ಗಮನಾರ್ಹ ವಿಸ್ತರಣೆಯನ್ನು ಕಂಡಿದೆ ಎಂದು ಸಂಶೋಧಕರು ಮತ್ತು ಕೈಗಾರಿಕಾ ವೀಕ್ಷಕರು ಗಮನಿಸಿದ್ದಾರೆ, ದೀರ್ಘಾಯುಷ್ಯ ದರಗಳು ಹೆಚ್ಚಾಗುತ್ತಲೇ ಇರಬಹುದು ಎಂಬ ಮುನ್ಸೂಚನೆಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ