
ಕಾಠ್ಮಂಡು (ನ.20) ನೇಪಾಳದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ ಜೆನ್ ಝೀ ಪ್ರತಿಭಟನೆ ಹಂಗಾಮಿ ಸರ್ಕಾರ ರಚನೆಯೊಂದಿಗೆ ಅಂತ್ಯಗೊಂಡಿತ್ತು. ಪ್ರತಿಭಟನಾಕಾರರ ಬೇಡಿಕೆಯಂತೆ ನೇಪಾಳ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ಹಂಗಾಮಿ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೆಲ ತಿಂಗಳಿನಿಂದ ನೇಪಾಳದಲ್ಲಿ ಪರಿಸ್ಥಿತಿ ಶಾಂತವಾಗಿತ್ತು. ಆದರೆ ಇದೀಗ ಮತ್ತೆ ಜೆನ್ ಝೀ ಪ್ರತಿಭಟನೆ ಶುರುವಾಗಿದೆ. ನೇಪಾಳದಲ್ಲಿ ಆತಂಕದ ಪರಿಸ್ಥಿತಿ ಎದುರಾಗಿದೆ. ಹಲವು ಜಿಲ್ಲೆಗಳಲ್ಲಿ ಜೆನ್ ಝೀ ಪ್ರತಿಭಟನೆ ಜೋರಾಗುತ್ತಿದೆ. ಹೀಗಾಗಿ ಹೆಚ್ಚುವರಿ ಭದ್ರತಾ ಪಡೆಗಳು ರಂಗ ಪ್ರವೇಶ ಮಾಡಿದೆ. ಇತ್ತ ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ.
ಕಳೆದೆರಡು ದಿನದಲ್ಲಿ ನೇಪಾಳದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಇಂದು 11 ಗಂಟೆಗೆ ನೇಪಾಳದ ಕಾಠ್ಮಂಡುವಿನ ಸಿಮ್ರೌನ್ ಚೌಕ್ ಬಳಿ ಜಮಾಯಿಸಿದ ಪ್ರತಿಭಟನಾಕಾರಾರು ಭಾರಿ ಪ್ರತಿಭಟನೆಗೆ ತಯಾರಿ ಮಾಡಿಕೊಂಡಿದ್ದರು. ಈ ವೇಳೆ ಪೊಲೀಸ್ ಹಾಗೂ ಭದ್ರತಾ ಪಡೆಗಳು ಆಗಮಿಸಿ ಪ್ರತಿಭಟನಕಾರರ ಚದುರಿಸಿದೆ. ಇಷ್ಟೇ ಅಲ್ಲ ಇಲ್ಲೂ ಕರ್ಫ್ಯೂ ಹೇರಲಾಗಿದೆ.
ನೇಪಾಳದ ಬಾರಾ ಜಿಲ್ಲೆಯಲ್ಲಿ ಕಳೆದೆರಡು ದಿನದಿಂದ ಪ್ರತಿಭಟನೆ ನಡೆಯುತ್ತಿದೆ. ಬಿಹಾರದ ಗಡಿ ಜಿಲ್ಲೆಯಾಗಿರುವ ಬಾರಾದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಪೊಲೀಸರ ವಿರುದ್ದವೇ ಪ್ರತಿಭಟನಕಾರರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಬಾರಾ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದೆ. ಪೊಲೀಸರ ಹಾಗೂ ಪ್ರತಿಭಟನಾಕಾರರ ನಡುವೆ ಉದ್ವೇಗ ಸನ್ನಿವೇಶಗಳು ಸೃಷ್ಟಿಯಾಗಿತ್ತು.
ಯುನಿಫೈಡ್ ಮಾರ್ಕಿಸ್ಟಿ ಲೆನಿನಿಸ್ಟ್ ಪಾರ್ಟಿ ನಾಯಕರು ಬೀದಿಗೆ ಇಳಿದಿದ್ದಾರೆ. ಜೆನ್ ಝಿ ಎಂದು ಹೇಳಿಕೊಂಡು ಪ್ರತಿಭಟನೆ ಆರಂಭಿಸಿದ್ದಾರೆ. ಮಾರ್ಚ್ 5, 2026ಕ್ಕೆ ನೇಪಾಳದಲ್ಲಿ ಚುನಾವಣೆ ನಡೆಯಲಿದೆ. ಪಾರ್ಟಿ ನಾಯಕರ ಪ್ರತಿಭಟನೆ ವೇಳೆ ಪೊಲೀಸರ ಜೊತೆ ಚಕಮಕಿ ಶುರುವಾಗಿದೆ. ಇತ್ತ ಅಸಲಿ ಝೆನ್ ಝಿ ಪ್ರತಿಭಟನಕಾರರು ಬೀದಿಗಿಳಿದಿದ್ದಾರೆ. ಇದರಿಂದ ಪರಿಸ್ಥಿತಿ ರಣಾಂಗಣವಾಗಿದೆ.
ಇತ್ತೀಟೆಗೆ ನಡೆದ ನೇಪಾಳದ ಜೆನ್ ಝೀ ಪ್ರತಿಭಟನೆ ವಿಶ್ವದೆಲ್ಲೆಡ ಆತಂಕದ ಪರಿಸ್ಥಿತಿಗೆ ಕಾರಣವಾಗಿತ್ತು. ಚುನಾಯಿತಿ ಕೆಪಿ ಶರ್ಮಾ ಒಲಿ ಸರ್ಕಾರವೇ ಪಲಾಯನ ಮಾಡಿತ್ತು. ಪ್ರಧಾನಿ ಕೆಪಿ ಶರ್ಮ ಒಲಿ ಸೇರಿದಂತೆ ಹಲವು ಸಚಿವರು ದೇಶ ಬಿಟ್ಟು ತೆರಳಿದ್ದರು. ಭಾರಿ ಪ್ರತಿಭಟೆಯಲ್ಲಿ 76 ಮಂದಿ ಮೃತಪಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ