ಕೊನೆಗೂ ಬ್ರೆಕ್ಸಿಟ್‌ಗೆ ಬ್ರಿಟನ್‌ ಸಂಸತ್ತು ಅಸ್ತು: EU ನಿಂದ ಔಟ್!

By Kannadaprabha NewsFirst Published Jan 30, 2020, 12:55 PM IST
Highlights

ಭಾರೀ ಪ್ರತಿಭಟನೆ ಗದ್ದಲ, ಕೋಲಾಹಲ, ವಿರೋಧ ಹಾಗೂ ಸಾರ್ವತ್ರಿಕ ಚುನಾವಣೆಗೂ ಕಾರಣವಾದ ಯೂರೋಪಿಯನ್‌ ಒಕ್ಕೂಟದಿಂದ ಬ್ರಿಟನ್‌ ಕೊರಕ್ಕೆ| ಕೊನೆಗೂ ಬ್ರೆಕ್ಸಿಟ್‌ಗೆ ಬ್ರಿಟನ್‌ ಸಂಸತ್ತು ಅಸ್ತು

ಲಂಡನ್‌[ಜ.30]: ಭಾರೀ ಪ್ರತಿಭಟನೆ ಗದ್ದಲ, ಕೋಲಾಹಲ, ವಿರೋಧ ಹಾಗೂ ಸಾರ್ವತ್ರಿಕ ಚುನಾವಣೆಗೂ ಕಾರಣವಾದ ಯೂರೋಪಿಯನ್‌ ಒಕ್ಕೂಟದಿಂದ ಬ್ರಿಟನ್‌ ಹೊರ ಬರುವ ‘ಬ್ರೆಕ್ಸಿಟ್‌’ ನಿರ್ಣಯಕ್ಕೆ ಕೊನೆಗೂ ಅಲ್ಲಿನ ಸಂಸತ್ತು ಒಪ್ಪಿಗೆ ನೀಡಿದೆ. ಆ ಮೂಲಕ ಮೂರು ವರ್ಷಗಳ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಿದೆ.

ಈ ಮಾಸಾಂತ್ಯಕ್ಕೆ ಅಧಿಕೃತವಾಗಿ ಬ್ರಿಟನ್‌ ಯೂರೋಪಿಯನ್‌ ಒಕ್ಕೂಟದಿಂದ ಹೊರ ಬರಲಿದೆ. ಬ್ರೆಕ್ಸಿಟ್‌ ನಿರ್ಣಯದ ಪರ ಬ್ರಿಟನ್‌ನ ಹೌಸ್‌ ಆಫ್‌ ಕಾಮನ್ಸ್‌ 330 ಮಂದಿ ಸಂಸದರು ಮತ ಚಲಾಯಿಸಿದರೆ, ವಿರೋಧವಾಗಿ 231 ಮತಗಳು ಬಿದ್ದವು. ಯೂರೋಪಿಯನ್‌ ಒಕ್ಕೂಟದಿಂದ ಬ್ರಿಟನ್‌ ಹೊರ ಬರುವ ಮೂಲಕ ಆ ಒಕ್ಕೂಟದೊಂದಿಗೆ ಇದ್ದ 50 ವರ್ಷಗಳ ಒಪ್ಪಂದ ಹಾಗೂ ಸಂಬಂಧಗಳನ್ನು ಕಡಿದುಕೊಳ್ಳಲಿದ್ದಾರೆ.

ಗೆಟ್ ಬ್ರಿಕ್ಸಿಟ್ ಡನ್: ಬ್ರಿಟನ್‌ಗೆ ಮತ್ತೆ ಬೋರಿಸ್ ಜಾನ್ಸನ್!

ಒಕ್ಕೂಟದಿಂದ ಹೊರ ಬಂದರೆ ಬ್ರಿಟನ್‌ನ ಗೌರವ ಕಡಿಮೆಯಾಗಬಹುದು ಎನ್ನುವ ವಾದ ಒಂದೆಡೆಯಾದರೆ, ಒಕ್ಕೂಟ ತ್ಯಜಿಸಿದರೆ ಬ್ರಿಟನ್‌ ಶಕ್ತ ರಾಷ್ಟ್ರವಾಗಲಿದೆ ಎನ್ನುವ ವಾದ ಮತ್ತೊಂದೆಡೆ ಇತ್ತು. ಈ ಬಿಕ್ಕಟ್ಟಿನಿಂದಾಗೆ ಮಾಜಿ ಪ್ರಧಾನಿಗಳಾದ ಡೇವಿಡ್‌ ಕ್ಯಾಮರೂನ್‌ ಹಾಗೂ ಥೆರೇಸಾ ಮೇ ರಾಜೀನಾಮೆ ಕೊಟ್ಟಿದ್ದರು.

ಹಾಲಿ ಪ್ರಧಾನಿ ಜಾನ್ಸನ್‌ ಬೋರಿಸ್‌ ಇದೇ ಬಿಕ್ಕಟ್ಟಿನಿಂದಾಗಿ ಸಂಸತ್‌ ವಿಸರ್ಜಿಸಿ ಸಾರ್ವತ್ರಿಕ ಚುನಾವಣೆಗೆ ಹೋಗಿದ್ದರು. ಕಳೆದ ತಿಂಗಳಷ್ಟೇ ಬಹುಮತದಿಂದ ಮರು ಆಯ್ಕೆಯಾಗಿದ್ದರು.

ಭಾರತದ ಅಳಿಯ ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ!

click me!