ಡ್ರ್ಯಾಗನ್‌ಫ್ರುಟ್‌ನಲ್ಲಿ ವೈರಸ್‌: ಸೂಪರ್‌ ಮಾರ್ಕೆಟ್ ಬಂದ್ ಮಾಡಿದ ಚೀನಾ

By Suvarna NewsFirst Published Jan 6, 2022, 6:38 PM IST
Highlights
  • ಚೀನಾದಲ್ಲಿ ಡ್ರ್ಯಾಗನ್‌ಫ್ರುಟ್‌ನಲ್ಲಿ ವೈರಸ್‌
  • ವಿಯೆಟ್ನಾಂನಿಂದ ಆಮದಾಗಿದ್ದ  ಡ್ರ್ಯಾಗನ್‌ಫ್ರುಟ್‌
  • ಸೂಪರ್‌ ಮಾರ್ಕೆಟ್ ಬಂದ್ ಮಾಡಿದ ಚೀನಾ
     

ಬೀಜಿಂಗ್‌(ಜ.6) ಚೀನಾದಲ್ಲಿ ವಿಯೆಟ್ನಾಂ (Vietnam)ನಿಂದ ಆಮದು ಮಾಡಿಕೊಂಡ ಹಣ್ಣುಗಳಲ್ಲಿ ಕೋವಿಡ್‌ ವೈರಸ್ ಕುರುಹುಗಳು ಕಂಡು ಬಂದ ಹಿನ್ನೆಲೆ ಚೀನಾದ ಅಧಿಕಾರಿಗಳು ಹಲವಾರು ಸೂಪರ್‌ ಮಾರ್ಕೆಟ್‌ಗಳನ್ನು ಬಂದ್  ಮಾಡಿದ್ದಾರೆ. ಝೆಜಿಯಾಂಗ್(Zhejiang) ಮತ್ತು ಜಿಯಾಂಗ್ಕ್ಸಿ( Jiangxi) ಪ್ರಾಂತ್ಯಗಳಲ್ಲಿ ಕನಿಷ್ಠ ಒಂಬತ್ತು ನಗರಗಳ ಸೂಪರ್‌ ಮಾರ್ಕೆಟ್‌ನಲ್ಲಿ ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನಲ್ಲಿ ಕರೋನಾ ವೈರಸ್  ಕಂಡು ಬಂದಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. 

ಹೀಗಾಗಿ ಚೀನಾದ ಅಧಿಕಾರಿಗಳು ಆಮದು ಮಾಡಿಕೊಂಡ ಆಹಾರ ಉತ್ಪನ್ನಗಳ ತುರ್ತು ತಪಾಸಣೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಹಣ್ಣು ಖರೀದಿದಾರರಿಗೆ ಖರೀದಿ ಮಾಡದಂತೆ ಆದೇಶಿಸಿದ್ದಾರೆ. ಆದರೆ ಆಹಾರದಿಂದ ಕರೋನಾ ವೈರಸ್ ಹರಡಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಆದರೂ ಚೀನಾದ ಆರೋಗ್ಯ ಅಧಿಕಾರಿಗಳು ದೇಶದಲ್ಲಿ ವೈರಸ್ ಅಲೆ ಹಿಡಿತ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಜಾಗರೂಕರಾಗಿದ್ದಾರೆ. ಡಿಸೆಂಬರ್ ಕೊನೆಯ ವಾರದಲ್ಲಿಯೇ  ಡ್ರ್ಯಾಗನ್‌ ಹಣ್ಣಿನಲ್ಲಿ ಕೋವಿಡ್‌ ವೈರಸ್‌ ಪತ್ತೆಯಾಗಿದ್ದರಿಂದ, ಚೀನಾ ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳುವ ಡ್ರ್ಯಾಗನ್ ಹಣ್ಣಿನ ಮೇಲೆ ಜನವರಿ 26 ರವರೆಗೆ ನಿಷೇಧ ಹೇರಿತ್ತು.  

chinese xian city lockdown: ಚೀನಾದ ಕ್ಸಿಯಾನ್‌ ನಗರ ಸಂಪೂರ್ಣ ಬಂದ್, ವೈರಸ್ ಹಬ್ಬಲು ಕಾರಣ ಪಾಕಿಸ್ತಾನ!

ಚೀನಾಕ್ಕೆ ಡ್ರ್ಯಾಗನ್ ಫ್ರೂಟ್(dragon fruit) ಕಳುಹಿಸುವ ಲ್ಯಾಂಗ್ ಸನ್ ಪ್ರಾಂತ್ಯದ ( Lang Son province) ಹುಯು ಘಿ (Huu Nghi Border Gate)ಬಾರ್ಡರ್ ಗೇಟ್ ಮೇಲೆ ನಿಷೇಧ ಹೇರಲಾಗಿದೆ. ಇದರ ಜೊತೆಗೆ ಅಧಿಕಾರಿಗಳು ಡ್ರ್ಯಾಗನ್ ಹಣ್ಣಿನ  ಆಮದು ಬರುವ ಟಾನ್ ಥಾನ್ (Tan Thanh) ಎಂಬ ಇನ್ನೊಂದು ಗಡಿ ಗೇಟ್‌ನ್ನು ಕೂಡ ಬಂದ್‌ ಮಾಡಿದ್ದಾರೆ. ಅಲ್ಲಿಗೆ ಆಗಮಿಸಿದ ಟ್ರಕ್‌ಗಳನ್ನು ಅಧಿಕಾರಿಗಳು ವಾಪಸ್‌ ಹಿಂದಕ್ಕೆ ಕಳುಹಿಸಿದ್ದರು.

ಚೀನಾ ಮುಂದಿನ ತಿಂಗಳು ಚಳಿಗಾಲದ ಒಲಿಂಪಿಕ್ಸ್‌ನ ಆತಿಥ್ಯ ವಹಿಸಲು ಸಜ್ಜಾಗಿದೆ, ಹೀಗಾಗಿ ಜಗತ್ತನ್ನು ಕಾಡುತ್ತಿರುವ ವೈರಸ್ ಅನ್ನು ಎದುರಿಸಲು ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ. ಕೋವಿಡ್‌ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕ್ಸಿಯಾನ್ ನಗರ (Xi'an city) ದಲ್ಲಿ ಲಾಕ್‌ಡೌನ್ ಹೇರಲಾಗಿದೆ. ಜೊತೆಗೆ ಹೆನಾನ್ ಪ್ರಾಂತ್ಯದ (Henan province) ಯುಝೌ ನಗರ (Yuzhou city )ದಲ್ಲೂ ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಲಾಕ್‌ಡೌನ್‌ ಘೋಷಿಸಲಾಗಿದೆ. 

Ladakh Issue: ಲಡಾಖ್‌ ಗಡಿಯಲ್ಲಿ ಸೇತುವೆ: ಚೀನಾ ಮತ್ತೆ ಕಿರಿಕ್‌

ಜನರಿಗೆ ಹೊರಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.  ಶಾಪಿಂಗ್ ಮಾಲ್‌ಗಳು ಹಾಗೂ ಇತರ ಸಾರ್ವಜನಿಕ ಪ್ರದೇಶಗಳಲ್ಲಿ ತಿರುಗಾಡದಂತೆ ಸೂಚಿಸಲಾಗಿದೆ. ಜೊತೆಗೆ ಸೇರಿದಂತೆ ಯುಝೌ ನಗರದಲ್ಲಿ ಜನರು ಹೊರಗೆ ಹೋಗದಂತೆ ಮತ್ತು ಬಸ್ ಮತ್ತು ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸು ಅಧಿಕಾರಿಗಳು ಆದೇಶಿಸಿದ್ದಾರೆ. ಚೀನಾದಲ್ಲಿ ಮಂಗಳವಾರ 175 ಕೋವಿಡ್‌ ಪ್ರಕರಣಗಳು ವರದಿ ಆಗಿತ್ತು. ಇಲ್ಲಿನ ಹೆನಾನ್ ಪ್ರಾಂತ್ಯವು ಪೂರ್ವ ನಗರವಾದ ನಿಂಗ್ಬೋದಲ್ಲಿನ ಕ್ಲಸ್ಟರ್ ಸೇರಿದಂತೆ ಒಟ್ಟು ಐದು ಪ್ರಕರಣಗಳನ್ನು ಹೊಂದಿದೆ. ವೈರಸ್‌ನ ಕೇಂದ್ರಬಿಂದುವಾಗಿ ಹೊರ ಹೊಮ್ಮಿರುವ ಕ್ಸಿಯಾನ್ ನಗರದಲ್ಲಿ ಡಿಸೆಂಬರ್‌ನಿಂದ ಒಟ್ಟು  1,600 ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗಿವೆ. 

ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಆದ್ರೆ, ಇದಕ್ಕೆ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಸ್ವತಃ ಸಚಿವ ಈಶ್ವರಪ್ಪ ಕೂಡ ವೀಕೆಂಡ್ ಕರ್ಫ್ಯೂಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಇಂದು(ಗುರುವಾರ) ನಡೆದ ಸಚಿವ ಸಂಪುಟದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಅಂತಿಮ ತೀರ್ಮಾನ ಪ್ರಕಟಿಸಿದ್ದಾರೆ.

click me!