ಚೀನಾದಲ್ಲಿ ಮತ್ತೆ ಕೋವಿಡ್‌ ಸದ್ದು: 1 ನಗರ ಸೀಲ್‌ಡೌನ್‌!

By Suvarna NewsFirst Published Aug 5, 2021, 9:22 AM IST
Highlights

* ಸೋಂಕು ನಿಯಂತ್ರಣದಲ್ಲಿ ವಿಫಲರಾದ ಅಧಿಕಾರಿಗಳ ಶಿಕ್ಷೆಗೆ ನಿರ್ಧಾರ

* ಚೀನಾದಲ್ಲಿ ಮತ್ತೆ ಕೋವಿಡ್‌ ಸದ್ದು: 1 ನಗರ ಸೀಲ್‌ಡೌನ್‌

ಬೀಜಿಂಗ್‌(ಆ.05): ವುಹಾನ್‌ ಲ್ಯಾಬ್‌ ಮೂಲಕ ವಿಶ್ವಕ್ಕೇ ಕೊರೋನಾ ಹರಡಿಸಿದ ಆರೋಪ ಹೊತ್ತಿರುವ ಚೀನಾದಲ್ಲಿ ಈಗ ಮತ್ತೆ ಕೊರೋನಾ ಹಾವಳಿ ಆರಂಭವಾಗಿದೆ. ಇಲ್ಲಿ ಈಗ ಡೆಲ್ಟಾರೂಪಾಂತರಿ ಸದ್ದು ಮಾಡಿದ್ದು, ಝಾಂಗ್‌ಜಿಯಾಜಿ ನಗರವನ್ನು ಸೀಲ್‌ಡೌನ್‌ ಮಾಡಲಾಗಿದೆ ಹಾಗೂ ಅನೇಕ ನಗರಗಳಲ್ಲಿ ಕೋವಿಡ್‌ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ಝಾಂಗ್‌ಜಿಯಾಜಿಯೆ ನಗರದಲ್ಲಿ ಕೋವಿಡ್‌ ನಿಯಂತ್ರಣದಲ್ಲಿ ವಿಫಲರಾದ ಅಧಿಕಾರಿಗಳನ್ನು ಶಿಕ್ಷಿಸಲು ನಿರ್ಧರಿಸಲಾಗಿದೆ.

ನಾಂಜಿಂಗ್‌ ಎಂಬಲ್ಲಿ ಬುಧವಾರ 71 ಕೊರೋನಾ ಪ್ರಕರಣ ಪತ್ತೆ ಆಗಿವೆ. ಇನ್ನು ಕೊರೋನಾ ಉಗಮ ಸ್ಥಳ ವುಹಾನ್‌ನಲ್ಲಿ ಸಾಮೂಹಿಕ ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಝಾಂಗ್‌ಜಿಯಾಜಿ ಎಂಬ ನಗರವು ಹೊಸ ಕೋವಿಡ್‌ ಹಾಟ್‌ಸ್ಪಾಟ್‌ ಆಗಿದ್ದು, ಈ ನಗರವನ್ನು ಭಾನುವಾರ ಸೀಲ್‌ಡೌನ್‌ ಮಾಡಲಾಗಿದೆ. ಮಂಗಳವಾರದಿಂದ ಯಾವ ಪ್ರವಾಸಿಗರನ್ನೂ ಒಳಹೋಗಲು ಹಾಗೂ ಹೊರಬರಲು ಬಿಡುತ್ತಿಲ್ಲ.

ಇಲ್ಲಿ ಕೇವಲ 19 ಕೋವಿಡ್‌ ಪ್ರಕರಣ ಕಳೆದ ಬಾರಿ ಪತ್ತೆಯಾಗಿದ್ದವು. ಆದರೆ ಇದು ಪ್ರವಾಸಿ ತಾಣವಾದ ಕಾರಣ ಇಲ್ಲಿಂದ ಅಕ್ಕಪಕ್ಕದ ಪ್ರಾಂತ್ಯಗಳಿಗೆ ಕೋವಿಡ್‌ ತುಂಬಾ ಹರಡಿದೆ. ಇದು ಕಳವಳಕಾರಿ ವಿಚಾರ.

click me!