ಕೊರೋನಾ ಜನ್ಮಸ್ಥಳ ವುಹಾನ್ ಈಗ ಸೋಂಕಿತರಿಂದ ಮುಕ್ತ!| 20 ದಿನದಿಂದ ಒಂದೂ ಹೊಸ ಸೋಂಕು ಇಲ್ಲ| ಕೊರೋನಾ ನಿಗ್ರಹದಲ್ಲಿ ಚೀನಾ ಸರ್ಕಾರ ಮತ್ತೊಂದು ಮೈಲುಗಲ್ಲು
ವುಹಾನ್(ಏ.27): ಕೊರೋನಾ ಸೋಂಕು ಮೊದಲು ಪತ್ತೆಯಾದ ಚೀನಾದ ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಸೋಂಕಿತರಿಂದ ಮುಕ್ತವಾಗಿದೆ. ಈ ಮೂಲಕ ಕೊರೋನಾ ನಿಗ್ರಹದಲ್ಲಿ ಚೀನಾ ಸರ್ಕಾರ ಮತ್ತೊಂದು ಮೈಲುಗಲ್ಲು ಸಾಧಿಸಿದೆ.
ವುಹಾನ್ ಆಸ್ಪತ್ರೆಗೆ ದಾಖಲಾಗಿದ್ದ ಕಡೆಯ ರೋಗಿ ಶುಕ್ರವಾರ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಇನ್ನು ಶನಿವಾರ ಯಾವುದೇ ಹೊಸ ಸೋಂಕಿತರು ಪತ್ತೆಯಾಗಿಲ್ಲ. ಈ ಮೂಲಕ ವುಹಾನ್ ಸೋಂಕು ಮುಕ್ತ ಪ್ರದೇಶವಾಗಿ ಹೊರಹೊಮ್ಮಿದೆ.
undefined
ವುಹಾನ್ ಇಸ್ಟಿಟ್ಯೂಟ್, WHOದ 25 ಸಾವಿರ ಪಾಸ್ ವರ್ಡ್ ಕಳ್ಳತನ, ಯಾರ ಕೈಚಳಕ?
ಇದೇ ವೇಳೆ ಹುಬೇ ಪ್ರಾಂತ್ಯದಲ್ಲಿ ಸೋಂಕಿತರ ಸಂಖ್ಯೆ ಇದೇ ಮೊದಲ ಬಾರಿಗೆ 50ಕ್ಕಿಂತ ಕೆಳಗೆ ಬಂದಿದೆ. ಕಳೆದ 20 ದಿನಗಳಿಂದ ಪ್ರಾಂತ್ಯದಲ್ಲಿ ಒಂದೇ ಒಂದು ಹೊಸ ಕೇಸು ಪತ್ತೆಯಾಗಿಲ್ಲ.
2019ರ ಡಿಸೆಂಬರ್‌ನಲ್ಲಿ ವುಹಾನ್‌ನಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು. ತದನಂತರದಲ್ಲಿ ಸೋಂಕು ಭಾರೀ ಪ್ರಮಾಣದಲ್ಲಿ ವ್ಯಾಪಿಸಿತ್ತು. ಚೀನಾದಲ್ಲಿ ಒಟ್ಟು ಪತ್ತೆಯಾದ 82827 ಕೊರೋನಾ ಸೋಂಕಿತರು ಪೈಕಿ ಶೆ.82ರಷ್ಟುಪಾಲು ಹುಬೈ ಪ್ರಾಂತ್ಯದ್ದೇ ಆಗಿತ್ತು. ಏಕೆಂದರೆ ರಾಜಧಾನಿ ವುಹಾನ್‌ನ 50333 ಮತ್ತು ಒಟ್ಟಾರೆ ಹುಬೇ ಪ್ರಾಂತ್ಯದಲ್ಲಿ 68128 ಪ್ರಕರಣ ಬೆಳಕಿಗೆ ಬಂದಿತ್ತು.
ಕೊರೋನಾ ತಾಂಡವ: ಅಮೆರಿಕದಲ್ಲಿ ದುಡ್ಡಿಗೆ ಬಲೆ, ಭಾರತದಲ್ಲಿ ಜೀವಕ್ಕೆ ಬೆಲೆ!
ಈ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ವುಹಾನ್‌ನಲ್ಲಿ ಕೇವಲ 10 ದಿನಗಳಲ್ಲಿ ಎರಡು ದೊಡ್ಡ ಆಸ್ಪತ್ರೆಗಳನ್ನು ತೆರೆದಿತ್ತು. ದೇಶಾದ್ಯಂತ ಇರುವ ವೈದ್ಯಕೀಯ ಸಿಬ್ಬಂದಿಯನ್ನು ಇಲ್ಲಿಗೆ ರವಾನಿಸಿತ್ತು. ಇಡೀ ಹುಬೇ ಪ್ರಾಂತ್ಯವನ್ನು ಸೀಲ್‌ಡೌನ್ ಮಾಡಿ, ಕೊರೋನಾ ನಿಗ್ರಹಕ್ಕೆ ಸರ್ವ ಕ್ರಮ ಕೈಗೊಂಡಿತ್ತು. ಪರಿಣಾಮ ಸೋಂಕನ್ನು ಯಶಸ್ವಿಯಾಗಿ ನಿಗ್ರಹಿಸುವಲ್ಲಿ ಯಶಸ್ವಿಯಾದ ಸರ್ಕಾರ ಏ.8ರಂದಷ್ಟೇ 76 ದಿನಗಳಿಂದ ಏರಿದ್ದ ಲಾಕ್‌ಡೌನ್ ಅನ್ನು ತೆರವುಗೊಳಿಸಿತ್ತು.
ಚೀನಾದಲ್ಲಿ ಸಂಭವಿಸಿದ ಒಟ್ಟಾರೆ 4632 ಸಾವಿನ ಪೈಕಿ ವುಹಾನ್ ಒಂದರಲ್ಲೇ 3869 ಜನ ಸಾವನ್ನಪ್ಪಿದ್ದರು.