ಹೆಚ್ಚುತ್ತಿರುವ ಅಶ್ಲೀಲತೆ ಹಾಗೂ ನಗ್ನತೆಗೆ ಅಲ್ಲಾ ನೀಡಿದ ಶಿಕ್ಷೆ ಕೊರೋನಾ; ಪಾಕ್ ಮೌಲ್ವಿ!

Suvarna News   | Asianet News
Published : Apr 26, 2020, 06:50 PM IST
ಹೆಚ್ಚುತ್ತಿರುವ ಅಶ್ಲೀಲತೆ ಹಾಗೂ ನಗ್ನತೆಗೆ ಅಲ್ಲಾ ನೀಡಿದ ಶಿಕ್ಷೆ ಕೊರೋನಾ; ಪಾಕ್ ಮೌಲ್ವಿ!

ಸಾರಾಂಶ

ಕೊರೋನಾ ವೈರಸ್ ಹರಡದಂತೆ ತಡೆಯಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಭಾರತದಲ್ಲಿ ತಬ್ಲೀಘಿಗಳು ನಿಯಮ ಉಲ್ಲಂಘಿಸಿ ಒಂದಷ್ಟು ಕೊರೋನಾ ಪ್ರಕರಣ ಹೆಚ್ಚಿಸಿದ್ದಾರೆ. ಅತ್ತ ಪಾಕಿಸ್ತಾನದಲ್ಲಿ  ಪ್ರಭಾವಿ ಮೌಲ್ವಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ.

ಕರಾಚಿ(ಏ.26): ಕೊರೋನಾ ವೈರಸ್ ಕುರಿತು ಸರ್ಕಾರದ ಜೊತೆಗೆ ಧರ್ಮಗುರುಗಳು, ಮೌಲ್ವಿಗಳು ಕೈಜೋಡಿಸಿದರೆ ಇಷ್ಟು ಕಷ್ಟವಾಗುತ್ತಿರಲಿಲ್ಲ. ಇದೀಗ ಪಾಕಿಸ್ತಾನ ಮೌಲ್ವಿ ತಾರಿಕ್ ಜಮೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೊರೋನಾ ವೈರಸ್‌ಗೆ ವಿಶ್ವದಲ್ಲಿ ಹೆಚ್ಚುತ್ತಿರುವ ಅಶ್ಲೀಲತೆ ಹಾಗೂ ನಗ್ನತೆ ಕಾರಣ ಎಂದಿದ್ದಾರೆ. ಅಶ್ಲೀಲತೆ, ನಗ್ನತೆ ಹೆಚ್ಚಾದ ಕಾರಣ ಅಲ್ಲಾ ಕೋಪಗೊಂಡಿದ್ದಾನೆ. ಹೀಗಾಗಿ ಕೊರೋನಾ ಶಿಕ್ಷೆ ನೀಡಿದ್ದಾನೆ ಎಂದು ಮೌಲ್ವಿ ಹೇಳಿದ್ದಾರೆ.

ಕಾಲನ್ನು ಮುಚ್ಚಿ, ಇಲ್ದಿದ್ರೆ ಕೊರೋನಾ ಕೆಳಗಿಂದ ಅಟ್ಯಾಕ್ ಮಾಡುತ್ತೆ: ಪಾಕ್ ಸಚಿವೆ

ಪಾಕ್ ಪ್ರಧಾನಿ ಇಮ್ರಾನ್ ಖಾನ್, ದೇಶ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ದೇಣಿಗೆ ಮೂಲಕ ನೆರವಾಗಬೇಕು ಎಂದು ಪಾಕಿಸ್ತಾನ ಉದ್ದೇಶಿಸಿ ಮಾತನಾಡಿದ್ದರು. ಇಮ್ರಾನ್ ಖಾನ್ ಹೇಳಿಕೆ ಕುರಿತು ಖಾಸಗಿ ಮಾಧ್ಯಮ ಚರ್ಚಾಕೂಟ ಏರ್ಪಡಿಸಿತ್ತು. ಈ ಚರ್ಚೆಯಲ್ಲಿ ಪಾಲ್ಗೊಂಡ ಮೌಲ್ವಿ ಖಾರಿಕ್ ಜಮೀಲ್ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

ತುಂಡುಗೆಯಲ್ಲಿ ನೃತ್ಯ, ಅಶ್ಲೀಲತೆಗೆ ಅಲ್ಲಾ ಸಹನೆ ಮೀರಿ ಹೋಗಿದೆ. ಹೀಗಾಗಿ ಕೊರೋನಾ ವಕ್ಕರಿಸಿದೆ ಎಂದಿದ್ದಾರೆ. ಪಾಕಿಸ್ತಾನ ಕಾನೂನು ಹಾಗೂ ನ್ಯಾಯ ಇಲಾಖೆ ತಾರಿಕ್ ಹೇಳಿಕೆಯನ್ನು ಖಂಡಿಸಿತು. ಮಹಿಳೆಯರ ಟಾರ್ಗೆಟ್ ಮಾಡುವುದು ಸರಿಯಲ್ಲ. ಇಷ್ಟೇ ಅಲ್ಲ ಕೊರೋನಾ ಸೋಂಕು ಹರಡುವಿಕೆಗೂ ಮಹಿಳೆಯರ ಡ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದಿದೆ.

ಚೀನಾ ಹಾದಿಯಲ್ಲಿ ಪಾಕ್: ಕರಾಚಿಯಲ್ಲೇ 3 ಸಾವಿರಕ್ಕೂ ಅಧಿಕ ಶವ!

ತಾರಿಕ್ ಜಮೀಲ್ ಹೇಳಿಕೆಯನ್ನು ಪಾಕಿಸ್ತಾದ ಬಹುತೇಕರು ಬೆಂಬಲಿಸಿದ್ದರು. ಆದರೆ ಕೆಲ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಮಂತ್ರಿಗಳೂ ಅಸಂಬದ್ದ ಹೇಳಿಕೆ ಎಂದು ಟ್ವಿಟರ್ ಮೂಲಕ ಪೋಸ್ಟ್ ಮಾಡಿದೆ. ಮೌಲ್ವಿ ಹೇಳಿಕೆ ಅಸಬಂದ್ದವಾಗಿದೆ. ಕೊರೋನಾ ಸೋಂಕು ಹರಡುವಿಕೆ ದೇಶದಲ್ಲಿನ ಆರೋಗ್ಯ ತುರ್ತು ಪರಿಸ್ಥಿತಿಗೆ ಮೌಲ್ವಿ  ಹೇಳಿದ ಯಾವ ಕಾರಣವೂ ಅಲ್ಲ ಎಂದು ಪಾಕಿಸ್ತಾನ ಮಾನವ ಹಕ್ಕುಗಳ ಆಯೋಗ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ