ಚೀನಾದಲ್ಲಿ ಮತ್ತೆ ಕೊರೋನಾ ಹಾವಳಿ, ಉಯಿಗುರ್‌ ಜನ ತತ್ತರ!

By Suvarna NewsFirst Published Jul 31, 2020, 2:40 PM IST
Highlights

ಚೀನಾದಲ್ಲಿ ಸತತ 2ನೇ  ದಿನವೂ 100 ಕೇಸ್‌: ಉಯಿಗುರ್‌ ಜನ ತತ್ತರ| ಮೂರು ತಿಂಗಳಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಪ್ರಕರಣ ದಾಖಲು

ಬೀಜಿಂಗ್(ಜು.31)‌: ಕೊರೋನಾ ವೈರಸ್‌ ಅನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಚೀನಾದಲ್ಲಿ ಸತತ 2ನೇ ದಿನವೂ 100ಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ.

ಅಮೆರಿಕದೆಲ್ಲೆಡೆ ಚೀನಾ ರಹಸ್ಯ ಬೀಜ... ಕೊರೋನಾ ನಂತ್ರ ಇದ್ಯಾವ ಕೆಲಸಕ್ಕೆ ಇಳಿಯಿತು ಡ್ರ್ಯಾಗನ್!

ಮೂರು ತಿಂಗಳಲ್ಲೇ ಮೊದಲ ಬಾರಿಗೆ ಮಂಗಳವಾರ 102 ಕೊರೋನಾ ಸೋಂಕಿತರು ಚೀನಾದಲ್ಲಿ ಪತ್ತೆಯಾಗಿದ್ದರು. ಬುಧವಾರ ಮತ್ತೆ 105 ಪ್ರಕರಣಗಳು ದೃಢಪಟ್ಟಿವೆ. ಈ ಹಿಂದೆ ಕೊರೋನಾ ಆರ್ಭಟಿಸಿದ್ದ ಹುಬೆ ಪ್ರಾಂತ್ಯದ ಬದಲಿಗೆ ಉಯಿಗುರ್‌ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಚೀನಾದ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಈಗ ಸೋಂಕು ಕಾಣಿಸಿಕೊಂಡಿದೆ.

ಚೀನಾದಲ್ಲಿ ಬುಧವಾರ ಪತ್ತೆಯಾಗಿರುವ 105 ಕೇಸುಗಳ ಪೈಕಿ 96 ಕ್ಸಿನ್‌ಜಿಯಾಂಗ್‌ನಿಂದಲೇ ವರದಿಯಾಗಿವೆ. ಇದರಿಂದಾಗಿ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 84165ಕ್ಕೇರಿದೆ. ಈವರೆಗೆ 4634 ಮಂದಿ ಸಾವಿಗೀಡಾಗಿದ್ದಾರೆ.

click me!