ಭಾರತದ ರೂಪಾಂತರಿ ವೈರಸ್‌ ವಿಶ್ವಕ್ಕೇ ತೀವ್ರ ಅಪಾಯಕಾರಿ!

Published : May 11, 2021, 08:01 AM ISTUpdated : May 11, 2021, 09:10 AM IST
ಭಾರತದ ರೂಪಾಂತರಿ ವೈರಸ್‌ ವಿಶ್ವಕ್ಕೇ ತೀವ್ರ ಅಪಾಯಕಾರಿ!

ಸಾರಾಂಶ

* ಭಾರತದ ರೂಪಾಂತರಿ ವೈರಸ್‌ ವಿಶ್ವಕ್ಕೇ ತೀವ್ರ ಅಪಾಯಕಾರಿ! * ವಿಶ್ವ ಆರೋಗ್ಯ ಸಂಸ್ಥೆಯಿಂದ ಘೋಷಣೆ *  ಮೂಲ ವೈರಸ್‌ಗಿಂತ ಸುಲಭವಾಗಿ ಇದು ಹರಡುತ್ತೆ

ನ್ಯೂಯಾರ್ಕ್(ಮೇ.11): ಭಾರತದಲ್ಲಿ ಕೊರೋನಾ 2ನೇ ಅಲೆಯ ಭಾರೀ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಡಬಲ್‌ ಮ್ಯುಟೆಂಟ್‌ (ಬಿ.1.617) ಕೊರೋನಾ ತಳಿಯು ಇದೀಗ ವಿಶ್ವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಭಾರತದಲ್ಲಿ ಪತ್ತೆಯಾದ ಈ ಡಬಲ್‌ ಮ್ಯುಟೆಂಟ್‌ ತಳಿಯನ್ನು ಇದುವರೆಗೆ ‘ವೇರಿಯಂಟ್‌ ಆಫ್‌ ಇಂಟ್ರೆಸ್ಟ್‌’ ಎಂದು ವರ್ಗೀಕರಿಸಲಾಗಿತ್ತು. ಆದರೆ ಇದೀಗ ಅದರ ತೀವ್ರತೆಯನ್ನು ಪರಿಗಣಿಸಿ, ‘ವೇರಿಯಂಟ್‌ ಆಫ್‌ ಕನ್ಸ್‌ರ್ನ್‌’ ಎಂದು ವರ್ಗೀಕರಿಸಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಭಾರತದಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವ ವಹಿಸಿರುವ ಮಾರಿಯಾ ವ್ಯಾನ್‌ ಕೆರ್ಕೋವ್‌ ‘ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಈ ಡಬಲ್‌ ಮ್ಯುಟೆಂಟ್‌ ವೈರಸ್‌, ಮೂಲ ವೈರಸ್‌ಗಿಂತ ಹೆಚ್ಚು ಸುಲಭವಾಗಿ ಹಬ್ಬುತ್ತಿದೆ. ಜೊತೆಗೆ ಲಸಿಕೆಯ ರಕ್ಷಣೆಯನ್ನು ಮೆಟ್ಟಿನಿಲ್ಲುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಂತಿದೆ. ಇತ್ತೀಚಿನ ವರದಿಗಳು ಇದನ್ನು ಸಾಬೀತುಪಡಿಸಿವೆ. ಹೀಗಾಗಿಯೇ ಈ ಡಬಲ್‌ ಮ್ಯುಟೆಂಟ್‌ ವೈರಸ್‌ ಅನ್ನು ನಾವು ಜಾಗತಿಕ ಮಟ್ಟದಲ್ಲಿ ಅಪಾಯಕಾರಿ ವೈರಸ್‌ ಎಂದು ವರ್ಗೀಕರಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಬ್ರಿಟನ್‌, ಬ್ರೆಜಿಲ್‌ ಮತ್ತು ದಕ್ಷಿಣಾ ಆಫ್ರಿಕಾ ಮಾದರಿಯ ವೈರಸ್‌ ತಳಿಯನ್ನು ಜಾಗತಿಕ ಮಟ್ಟದಲ್ಲಿ ಅಪಾಯಕಾರಿ ಎಂದು ಘೋಷಿಸಲಾಗಿತ್ತು. ಈ ಎಲ್ಲಾ ವೈರಸ್‌ಗಳೂ, ಹೆಚ್ಚು ಪ್ರಸರಣದ ಶಕ್ತಿ ಹೊಂದಿರುವ, ತುಂಬಾ ಅಪಾಯಕಾರಿಯಾಗಿರುವ ಮತ್ತು ಲಸಿಕೆಯ ಭದ್ರತಾ ಕೋಟೆಯನ್ನು ಭೇದಿಸಬಲ್ಲ ಶಕ್ತಿ ಹೊಂದಿವೆ ಎಂದು ಘೋಷಿಸಲ್ಪಟ್ಟಿವೆ.

"

ಡಬಲ್‌ ಮ್ಯುಟೆಂಟ್‌ ಎಂದರೇನು?

ರೂಪಾಂತರವಾಗಿರುವ ಎರಡು ವೈರಸ್‌ಗಳು ಒಂದುಗೂಡಿರುವುದನ್ನು ಡಬಲ್‌ ಮ್ಯುಟೆಂಟ್‌ ಎನ್ನಲಾಗುತ್ತಿದೆ. ಇವು ಸಾಮಾನ್ಯ ವೈರಸ್‌ಗಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇವು ಲಸಿಕೆಯಿಂದಲೂ ರಕ್ಷಣೆ ಸಿಗದಂತೆ ಮಾಡಬಲ್ಲವು. ಜೊತೆಗೆ ಮೂಲ ವೈರಸ್‌ಗಿಂತ ಸುಲಭವಾಗಿ ಹರಡಬಲ್ಲವು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ