ವೈರಾಣು ಯುದ್ಧಕ್ಕೆ ಚೀನಾ-ಪಾಕ್‌ ಡೀಲ್‌: 5 ವರ್ಷದ ರಹಸ್ಯ ಬಟಾಬಯಲು!

Published : Sep 16, 2020, 12:11 PM ISTUpdated : Sep 16, 2020, 12:18 PM IST
ವೈರಾಣು ಯುದ್ಧಕ್ಕೆ ಚೀನಾ-ಪಾಕ್‌ ಡೀಲ್‌: 5 ವರ್ಷದ ರಹಸ್ಯ ಬಟಾಬಯಲು!

ಸಾರಾಂಶ

ವೈರಾಣು ಯುದ್ಧಕ್ಕೆ ಚೀನಾ-ಪಾಕ್‌ ರಹಸ್ಯ ಡೀಲ್‌?| ವುಹಾನ್‌ ಲ್ಯಾಬ್‌-ಪಾಕಿಸ್ತಾನ ಸೇನಾ ಸಂಸ್ಥೆ ಮಧ್ಯೆ ಒಪ್ಪಂದ| ಅಂಥ್ರಾಕ್ಸ್‌ ಹಾಗೂ ಹೊಸ ಸಾಕ್ರಾಮಿಕ ರೋಗ ಕುರಿತ ಸಂಶೋಧನೆ| ಇದರ ಹಿಂದೆ ಹೊಸ ವೈರಾಣು ಸೃಷ್ಟಿಯ ಸಂಚು?| ಇದೇ ವುಹಾನ್‌ ಲ್ಯಾಬ್‌ ಮೇಲೆ ‘ಕೊರೋನಾ ವೈರಾಣು ಜನಕ’ ಆರೋಪವುಂಟು|  ಈಗ ಗಡಿಯಾಚೆ ನಡೆಯುವ ಈ ಪ್ರಯೋಗಕ್ಕೆ ಚೀನಾ ಸಾಥ್‌

ಬೀಜಿಂಗ್(ಸೆ.16)‌: ಭಾರತದ ಸಮಾನ ಶತ್ರುಗಳಾಗಿರುವ ಪಾಕಿಸ್ತಾನ ಹಾಗೂ ಚೀನಾ ದೇಶಗಳು ಹೊಸ ಸಾಂಕ್ರಾಮಿಕ ರೋಗಗಳು, ಅದರಲ್ಲೂ ವಿಶೇಷವಾಗಿ ‘ಅಂಥ್ರಾಕ್ಸ್‌’ ಕುರಿತ ಸಂಶೋಧನೆಗೆ 3 ವರ್ಷಗಳ ಒಪ್ಪಂದನ್ನು ಮಾಡಿಕೊಂಡಿವೆ. ಕೊರೋನಾ ವೈರಸ್‌ ‘ಜನಕ’ ಎಂದು ಹೇಳಲಾಗುವ ವುಹಾನ್‌ ವೈರಾಣು ಸಂಸ್ಥೆಯು, ಪಾಕಿಸ್ತಾನ ಸೇನೆಯ ರಕ್ಷಣಾ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆ (ಡೆಸ್ಟೊ) ನಡುವಿನ ಒಪ್ಪಂದ ಜಾಗತಿಕ ಮಟ್ಟದಲ್ಲಿ ಸಾಕಷ್ಟುಅನುಮಾನಗಳಿಗೆ ಕಾರಣವಾಗಿದೆ.

ಪಾಕ್‌ ಮತ್ತು ಚೀನಾ ನಾನಾ ಕಾರಣಗಳಿಗಾಗಿ ಜಗತ್ತಿನ ನಾನಾ ದೇಶಗಳ ಟೀಕೆಗೆ ಗುರಿಯಾಗಿವೆ. ಹೀಗಾಗಿ ಭಾರತ ಹಾಗೂ ಇತರ ವಿಶ್ವದ ಮೇಲೆ ಜೈವಿಕ ಸಮರ ಸಾರುವ ಉದ್ದೇಶದಿಂದ ಉಭಯ ದೇಶಗಳು ಈ ಒಪ್ಪಂದ ಮಾಡಿಕೊಂಡಿರಬಹುದು. ಜೈವಿಕ ದಾಳಿಗಾಗಿ ಉಭಯ ದೇಶಗಳು ಹೊಸ ವೈರಾಣು ಸೃಷ್ಟಿಸಲು ಉದ್ದೇಶವೂ ಇದರ ಹಿಂದಿರಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಈ ಸಂಶೋಧನೆಗೆ ಚೀನಾ ಆರ್ಥಿಕ ನೆರವು ನೀಡಲಿದೆ. ಜತೆಗೆ ಅಗತ್ಯ ಪ್ರಯೋಗಾಲಯ ಸಲಕರಣೆಗಳನ್ನು ಕೂಡ ಪಾಕ್‌ಗೆ ನೀಡಲಿದೆ. ಆ್ಯಂಥ್ರಾಕ್ಸ್‌ ಎಂಬ ವ್ಯಾಧಿಯ ಮೂಲವಾದ ‘ಬ್ಯಾಸಿಲಸ್‌ ಆಂಥ್ರಾಸಿಸ್‌’ ಎಂಬ ಬ್ಯಾಕ್ಟೀರಿಯಾದ ಸಾಮ್ಯತೆ ಹೊಂದಿರುವ ಬ್ಯಾಸಿಲಸ್‌ ಥುರಿನ್‌ಜೀನ್ಸಸ್‌ ಅನ್ನು (ಬಿಟಿ) ಪ್ರತ್ಯೇಕಿಸುವ ಮಣ್ಣು ಪರೀಕ್ಷೆಯನ್ನು ಈಗಾಗಲೇ ಯಶಸ್ವಿಯಾಗಿ ನಡೆಸಲಾಗಿದೆ ಎನ್ನಲಾಗಿದೆ. ಈ ಸಂಶೋಧನೆಯನ್ನು ಸರ್ಕಾರದ ನಿಗಾದಿಂದ ಹೊರಗೆ ಇರಿಸಲು ತೀರ್ಮಾನಿಸಲಾಗಿದ್ದು, ಅಷ್ಟೊಂದು ರಹಸ್ಯ ಕಾಪಾಡುವ ಉದ್ದೇಶವಿದೆ.

ಪಾಕ್‌ನಲ್ಲೇ ಏಕೆ?

ಚೀನಾ ಮೇಲೆ ಈಗಾಗಲೇ ಅಮೆರಿಕ ಸೇರಿದಂತೆ ಹಲವು ದೇಶಗಳು ಕಣ್ಗಾವಲು ಇಟ್ಟಿವೆ. ಹೀಗಾಗಿ ಆ ದೇಶಗಳ ಕಣ್ಣು ತಪ್ಪಿಸುವ ಉದ್ದೇಶದಿಂದ ಪಾಕ್‌ನಲ್ಲೇ ಪ್ರಯೋಗಾಲಯ ಸ್ಥಾಪಿಸಲಾಗುತ್ತಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!