ನಮ್ಮ ಲಸಿಕೆ ಅಷ್ಟು ಪರಿಣಾಮಕಾರಿಯಲ್ಲ: ಚೀನಾ ಅಧಿಕಾರಿ ಒಪ್ಪಿಗೆ!

By Suvarna NewsFirst Published Apr 12, 2021, 7:56 AM IST
Highlights

ನಮ್ಮ ಲಸಿಕೆ ಅಷ್ಟುಪರಿಣಾಮಕಾರಿಯಲ್ಲ: ಚೀನಾ ಅಧಿಕಾರಿ ಒಪ್ಪಿಗೆ!| ಹೀಗಾಗಿ 2 ಲಸಿಕೆಗಳ ಸಮ್ಮಿಶ್ರಣ ಮಾಡಿ ಸಾಮರ್ಥ್ಯ ವೃದ್ಧಿಸಲು ಯತ್ನ

ಬೀಜಿಂಗ್(ಏ.12)‌: ಕೊರೋನಾ ವೈರಸ್‌ ನಿಗ್ರಹಕ್ಕೆ ಚೀನಾ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಅಷ್ಟೇನೂ ಪರಿಣಾಮಕಾರಿಯಲ್ಲ ಎಂಬ ಸಂಗತಿಯನ್ನು ಆ ದೇಶದ ಹಿರಿಯ ಅಧಿಕಾರಿಯೇ ಒಪ್ಪಿಕೊಂಡಿದ್ದಾರೆ. ಅಲ್ಲದೆ ಲಸಿಕೆಯ ಸಾಮರ್ಥ್ಯ ವೃದ್ಧಿಗಾಗಿ ತಾನು ಉತ್ಪಾದಿಸಿದ ಎರಡೂ ಲಸಿಕೆಗಳನ್ನು ಮಿಶ್ರಣ ಮಾಡುವ ಬಗ್ಗೆ ಚೀನಾ ಚಿಂತನೆ ನಡೆಸುತ್ತಿದೆ.

10 ದಿನದಲ್ಲಿ ಸ್ಪುಟ್ನಿಕ್‌ ಲಸಿಕೆಗೆ ಒಪ್ಪಿಗೆ!

ಈ ಬಗ್ಗೆ ಮಾತನಾಡಿದ ಚೀನಾದ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಗಾವ್‌ ಫು ಅವರು, ‘ಚೀನಿಯ ಲಸಿಕೆಗಳಲ್ಲಿ ಕೋವಿಡ್‌ನಿಂದ ರಕ್ಷಿಸುವ ಸಾಮರ್ಥ್ಯ ಹೆಚ್ಚಾಗಿ ಇಲ್ಲ’ ಎಂದು ಹೇಳಿದ್ದಾರೆ. ಚೀನಾ ಸರ್ಕಾರಿ ಸ್ವಾಮ್ಯದ ಔಷಧ ಉತ್ಪಾದಕ ಕಂಪನಿಗಳು ಉತ್ಪಾದಿಸಿದ ಸಿನೋವ್ಯಾಕ್‌ ಮತ್ತು ಸಿನೋಫಾಮ್‌ರ್‍ ಲಸಿಕೆಗಳ ಪೈಕಿ ಒಂದರಲ್ಲಿ ಕೊರೋನಾ ನಿಗ್ರಹಿಸುವ ಸಾಮರ್ಥ್ಯ ಕಡಿಮೆ ಇದೆ. ಹೀಗಾಗಿ ಈ ಲಸಿಕೆಗಳ ಸಮ್ಮಿಶ್ರಣಗೊಳಿಸಿ ಪರಿಣಾಮಕಾರಿಯಾಗಿ ಪರಿವರ್ತಿಸಬಹುದೇ ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ’ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಭಾರತವೇ ಗಡಿಯಿಂದ ಹಿಂದೆ ಸರಿಯಲಿ: ಚೀನಾ

ಆದಾಗ್ಯೂ ಅಮೆರಿಕದ ಫೈಝರ್‌ ಸೇರಿದಂತೆ ಇನ್ನಿತರ ಲಸಿಕೆಗಳ ಪರಿಣಾಮ ಬಗ್ಗೆ ಅನುಮಾನ ಸೃಷ್ಟಿಸಲು ಲಕ್ಷಾನುಗಟ್ಟಲೇ ಕೊರೋನಾ ಲಸಿಕೆಯ ಡೋಸ್‌ಗಳನ್ನು ಚೀನಾ ಹಲವು ರಾಷ್ಟ್ರಗಳಿಗೆ ರಫ್ತು ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವ್ಯಾಕ್ಸಿನ್ ಹಾಕಿಸಿಕೊಳ್ಳಿ, ಫ್ರೀಯಾಗಿ ಐಸ್ ಕ್ರೀಂ, ಬೀಯರ್ ಪಡೆದುಕೊಳ್ಳಿ

click me!