Birthday Penalty 61ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ರಾಷ್ಟ್ರಾಧ್ಯಕ್ಷರಿಗೆ 16.80 ಲಕ್ಷ ರೂ ದಂಡ!

By Suvarna NewsFirst Published May 24, 2022, 5:24 PM IST
Highlights
  • ಹುಟ್ಟು ಹಬ್ಬ ಆಚರಿಸಿದ ದೇಶದ ಅಧ್ಯಕ್ಷನಿಗೆ ಬಿತ್ತು ಬರೆ
  • 16.80 ಲಕ್ಷ ರೂಪಾಯಿ ದಂಡ ಕಟ್ಟಲು ಕೋರ್ಟ್ ಸೂಚನೆ
  • ರಾಷ್ಟ್ರ ಅಧ್ಯಕ್ಷ ಹಾಗೂ ಪ್ರಥಮ ಮಹಿಳೆಗೆ ದಂಡ ವಿಧಿಸಿದಿ ಕೋರ್ಟ್
     

ಅರ್ಜೆಂಟೀನಾ(ಮೇ.24): 61ನೇ ವಯಸ್ಸಿಗೆ ಕಾಲಿಟ್ಟ ಸಂಭ್ರಮದಲ್ಲಿ ಅರ್ಜೆಂಟೀನಾ ಅಧ್ಯಕ್ಷ ಆಲ್ಬರ್ಟೋ ಫೆರ್ನಾಂಡೀಸ್ ಅದ್ಧೂರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಕುಟುಂಬಸ್ಥರು, ಆಪ್ತರಿಗಷ್ಟೇ ಆಮಂತ್ರಣ ನೀಡಲಾಗಿತ್ತು. ಆದರೂ ದಾಖಲಾಗಿತ್ತು ಕೇಸ್. ಇದೀಗ ಕೋರ್ಟ್ ಬರೋಬ್ಬರಿ 16.80 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಸೂಚಿಸಿದೆ. ಇದು ಹುಟ್ಟು ಹಬ್ಬ ಆಯೋಜನೆಗೆ ಖರ್ಚು ಮಾಡಿದ ಹಣಕ್ಕಿಂತ ದುಪಟ್ಟು.

ಹುಟ್ಟು ಹಬ್ಬ ಆಚರಣೆ ಈ ದೇಶದಲ್ಲಿ ಅಪರಾಧವೇ? ಅದು ದೇಶಧ ಅಧ್ಯಕ್ಷರಿಗೆ ದಂಡ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಆದರೆ ಅರ್ಜೆಂಟೀನಾದ ಅಧ್ಯಕ್ಷ ಆಲ್ಬರೋಟ್ ಫೆರ್ನಾಂಡೀಸ್ ಹುಟ್ಟು ಹಬ್ಬ ಆಚರಣೆಯಲ್ಲಿ ದೊಡ್ಡ ತಪ್ಪಾಗಿತ್ತು. ಅದು ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಈ ಹುಟ್ಟು ಹಬ್ಬ ಆಚರಿಸಲಾಗಿತ್ತು.

Latest Videos

ಅಬಾರ್ಷನ್ ಕಾನೂನು ಬದ್ಧ..! ದಶಕದ ಹೋರಾಟಕ್ಕೆ ಜಯ

ಆಲ್ಬರ್ಟೋ ಫೆರ್ನಾಂಡೀಸ್ ಹುಟ್ಟಿದ್ದು ಎಪ್ರಿಲ್ 2 ರಂದು. 2020ರಲ್ಲಿ ಆಲ್ಬರ್ಟ್ 61ನೇ ವಯಸ್ಸಿಗೆ ಕಾಲಿಟ್ಟಿದ್ದರು. ಆದರೆ ಇಡೀ ವಿಶ್ವವೇ ಕೊರೋನಾ ಆತಂಕದಲ್ಲಿ ಮುಳುಗಿತ್ತು. ಹೀಗಾಗಿ ಕೊರೋನಾ ಭಯ ಕೊಂಚ ತಣ್ಣಗಾಗುತ್ತಿದ್ದಂತೆ ಆಲ್ಬರ್ಟ್ ಜುಲೈ 20 , 2020ರಂದು ಅದ್ಧೂರಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಆಪ್ತರು, ಕುಟಂಬಸ್ಖರು, ಕೆಲ ಅಧಕಾರಿಗಳು ಮಾತ್ರ ಈ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಿದ್ದರು. ಆದರೆ ಅರ್ಜೆಂಟೀನಾದಲ್ಲಿ ಇನ್ನು ಲಾಕ್‌ಡೌನ್ ಸಡಿಲ ಮಾಡಿರಲಿಲ್ಲ.

ಕೊರೋನಾ ಲಾಕ್‌ಡೌನ್ ಜಾರಿಯಲ್ಲಿರುವಾಗಲೇ ಅಧ್ಯಕ್ಷರೇ ಹುಟ್ಟು ಹಬ್ಬ ಆಚರಿಸಿದ್ದಾರೆ. ಈ ಮೂಲಕ ಹೆಚ್ಚು ಜನರು ಸೇರಬಾರದು, ಸಭೆ, ಸಮಾರಂಭ ನಡೆಸಬಾರದು, ಅನಗತ್ಯ ಪ್ರಯಾಣ ಮಾಡಬಾರದು ಸೇರಿದಂತೆ ಹಲವು ಕೋವಿಡ್ ನಿಯಮಗಳನ್ನು ಸ್ವತಃ ಅಧ್ಯಕ್ಷರೇ ಉಲ್ಲಂಘಿಸಿದ್ದರು. 

ಅರ್ಜೆಂಟೀನಾದಲ್ಲಿ 2020ರ ಜುಲೈ ವೇಳೆ ಅಂತ್ಯಸಂಸ್ಕಾರಕ್ಕೂ ಯಾರೂ ಸೇರುವಂತಿರಲಿಲ್ಲ. ಇಷ್ಟು ಕಠಿಣ ನಿಯಮ ಜಾರಿಯಲ್ಲಿರುವಾಗ ಆಲ್ಬರ್ಟ್ ಹುಟ್ಟು ಹಬ್ಬ ಆಚರಿಸಿಕೊಂಡಿರುವುದು ಭಾರಿ ಸದ್ದು ಮಾಡಿತ್ತು. ಹೀಗಾಗಿ ಪ್ರಕರಣವೂ ದಾಖಲಾಗಿತ್ತು.

ಅರ್ಜೆಂಟೀನಾ ನೋಟಿನ ಮೇಲೆ ಮರಡೋನಾ ಚಿತ್ರ?

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ 2 ವರ್ಷಗಳ ಬಳಿಕ ತೀರ್ಪು ನೀಡಿದೆ. ಅಧ್ಯಕ್ಷರು ಹಾಗೂ ಅಧ್ಯಕ್ಷರ ಪತ್ನಿ ಪ್ರಥಮ ಮಹಿಳೆ ನಿಯಮ ಉಲ್ಲಂಘಿಸಿದ ಕಾರಣ ಅರ್ಜೆಂಟೀನಾದ 3 ಮಿಲಿಯನ್ ಪೆಸೋಸ್ ಅಂದರೆ ಭಾರತೀಯ ರೂಪಾಯಿಗಳಲ್ಲಿ 16.80 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಅಧ್ಯಕ್ಷರಿಗೆ 1.6 ಮಿಲಿಯನ್ ಹಾಗೂ ಪ್ರಥಮ ಮಹಿಳೆಗೆ 1.4 ಮಿಲಿಯನ್ ಪೆಸೋಸ್ ದಂಡ ವಿಧಿಸಲಾಗಿದೆ. ಇದರಲ್ಲಿ ಅಧ್ಯಕ್ಷರ ಪಾವತಿಸುವ ದಂಡವನ್ನು ಅರ್ಜೆಂಟೀನಾದ ಲಸಿಕಾ ಸಂಶೋಧನಾ ಸಂಸ್ಥೆ ಮಲ್‌ಬ್ರಾನ್‌ಗೆ ನೀಡಲು ಕೋರ್ಟ್ ಸೂಚಿಸಿದೆ. ಇನ್ನು ಪ್ರಥಮ ಮಹಿಳೆ ಫ್ಯಾಬಯೋಲಾ ಯೆನೆಜ್ ಪಾವತಿಸಿದ ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ಕೋರ್ಟ್ ಸೂಚಿಸಿದೆ.

ಕೊರೋನಾ ಆರ್ಥಿಕ ಹೊರೆ: ಅರ್ಜೆಂಟೀನಾದಲ್ಲಿ ಶ್ರೀಮಂತರ ಮೇಲೆ ತೆರಿಗೆ
ಕೊರೋನಾ ವೈರಸ್‌ ಸೃಷ್ಟಿಸಿದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅರ್ಜೆಂಟೀನಾ ಸರ್ಕಾರ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ತೀರ್ಮಾನ ಕೈಗೊಂಡಿದೆ. ಬಡವರು ಮತ್ತು ಸಣ್ಣ ವ್ಯಾಪಾರಿಗಳಿಗೆ ಪರಿಹಾರ ಮತ್ತು ವೈದ್ಯಕೀಯ ಸಲಕರಣೆಗಳ ಪೂರೈಕೆಗಾಗಿ 12,000 ಶ್ರೀಮಂತರಿಂದ ತೆರಿಗೆ ಸಂಗ್ರಹಿಸುವ ಪ್ರಸ್ತಾವನೆಯನ್ನು ಅರ್ಜೆಂಟೀನಾದ ಸೆನೆಟ್‌ ಬಹುಮತದಿಂದ ಅಂಗೀಕರಿಸಿದೆ. ಈ ತೆರಿಗೆಯಿಂದ 27,750 ಕೋಟಿ ರು. ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಅಧ್ಯಕ್ಷ ಅಲ್ಬೆರ್ಟೊ ಫರ್ನಾಂಡಿಸ್‌ ಹೇಳಿದ್ದಾರೆ. ಶ್ರೀಮಂತರ ತೆರಿಗೆಯ ಅಡಿಯಲ್ಲಿ 75 ಕೋಟಿಗಿಂತಲೂ ಅಧಿಕ ಆಸ್ತಿ ಇರುವವರು ದೇಶದಲ್ಲಿ ಹೊಂದಿರುವ ಸಂಪತ್ತಿನ ಶೇ.3.5ರಷ್ಟುಹಾಗೂ ವಿದೇಶಗಳಲ್ಲಿ ಗಳಿಸಿರುವ ಸಂಪತ್ತಿನ ಶೇ. 5.25ರಷ್ಟನ್ನು ಸರ್ಕಾರಕ್ಕೆ ನೀಡಬೇಕಿದೆ. 4.4 ಕೋಟಿ ಜನಸಂಖ್ಯೆ ಇರುವ ಅರ್ಜೆಂಟೀನಾದಲ್ಲಿ 14 ಲಕ್ಷ ಕೊರೋನಾ ಕೇಸ್‌ಗಳು ಪತ್ತೆ ಆಗಿದ್ದು, 39,500ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

click me!