ಭಾರತದ ಗಡಿಯಲ್ಲಿ ಚೀನಾದ ಬುಲೆಟ್ ಟ್ರೈನ್

By Suvarna News  |  First Published Jun 25, 2021, 12:30 PM IST
  • ಟಿಬೆಟ್‌ನಲ್ಲಿ ಚೀನಾದ ಬುಲೆಟ್ ಟ್ರೈನ್
  • ಭಾರತದ ಗಡಿಯಲ್ಲಿ ಓಡುತ್ತಿದೆ ಡ್ರಾಗನ್ ರೈಲು

ಚೀನಾ ಶುಕ್ರವಾರ ತನ್ನ ಮೊದಲ ಸಂಪೂರ್ಣ ವಿದ್ಯುದ್ದೀಕರಿಸಿದ ಬುಲೆಟ್ ರೈಲನ್ನು ಟಿಬೆಟ್‌ನ ಹಿಮಾಲಯನ್ ಪ್ರದೇಶದಲ್ಲಿ ಚಾಲನೆಗೆ ತಂದಿದೆ. ಪ್ರಾಂತೀಯ ರಾಜಧಾನಿ ಲಾಸಾ ಮತ್ತು ಅರುಣಾಚಲ ಪ್ರದೇಶಕ್ಕೆ ಸಮೀಪವಿರುವ ಆಯಕಟ್ಟಿನ ಟಿಬೆಟಿಯನ್ ಗಡಿ ಪಟ್ಟಣವಾದ ನೈಂಗ್ಚಿಯನ್ನು ಇದು ಸಂಪರ್ಕಿಸುತ್ತದೆ.

ಜುಲೈ 1 ರಂದು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಯ ಶತಮಾನೋತ್ಸವದ ಮುನ್ನ ಸಿಚುವಾನ್-ಟಿಬೆಟ್ ರೈಲ್ವೆಯ 435.5 ಕಿ.ಮೀ ಲಾಸಾ-ನಿಂಗ್ಚಿ ವಿಭಾಗವನ್ನು ಉದ್ಘಾಟಿಸಲಾಗಿದೆ. ಟಿಬೆಟ್ ಸ್ವಾಯತ್ತ ಪ್ರದೇಶದ ಮೊದಲ ವಿದ್ಯುದ್ದೀಕೃತ ರೈಲ್ವೆ ತೆರೆಯಲಾಗಿದೆ.

Tap to resize

Latest Videos

undefined

ಮೆಕೆಫಿ ಆ್ಯಂಟಿ ವೈರಸ್‌ ಸೃಷ್ಟಿಕರ್ತ ಆತ್ಮಹತ್ಯೆ!

ಲಾಸಾವನ್ನು ನೈಂಗ್ಚಿಯೊಂದಿಗೆ ಜೋಡಿಸುವ "ಫಕ್ಸಿಂಗ್" ಬುಲೆಟ್ ರೈಲುಗಳು ಪ್ರಸ್ಥಭೂಮಿ ಪ್ರದೇಶದಲ್ಲಿ ಅಧಿಕೃತ ಕಾರ್ಯಾಚರಣೆ ನಡೆಸುತ್ತವೆ. ಕಿಂಗ್‌ಹೈ-ಟಿಬೆಟ್ ರೈಲ್ವೆಯ ನಂತರ ಸಿಚುವಾನ್-ಟಿಬೆಟ್ ರೈಲ್ವೆ ಟಿಬೆಟ್‌ಗೆ ಬರುವ ಎರಡನೇ ರೈಲು ಆಗಲಿದೆ. ಇದು ಕಿಂಗ್‌ಹೈ-ಟಿಬೆಟ್ ಪ್ರಸ್ಥಭೂಮಿಯ ಆಗ್ನೇಯದ ಮೂಲಕ ಹೋಗುತ್ತದೆ.

ನವೆಂಬರ್‌ನಲ್ಲಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಹೊಸ ರೈಲ್ವೆ ಯೋಜನೆಯ ನಿರ್ಮಾಣವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಗಡಿ ಸ್ಥಿರತೆಯನ್ನು ಕಾಪಾಡುವಲ್ಲಿ ಹೊಸ ರೈಲು ಮಾರ್ಗವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

click me!