
ವಾಷಿಂಗ್ಟನ್ ಡಿಸಿ (ಮಾರ್ಚ್ 5, 2023): ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಬಿಲ್ ಗೇಟ್ಸ್ ಹಲವು ನಾಯಕರು, ಸೆಲೆಬ್ರಿಟಿಗಳನ್ನು ಭೇಟಿಯಾಗಿದ್ದರು. ಅಲ್ಲದೆ, ಭಾರತದ ಆರ್ಥಿಕತೆ ಮುಂತಾದ ವಿಚಾರಗಳನ್ನು ಶ್ಲಾಘಿಸಿದ್ದರು. ಮೈಕ್ರೋಸಾಫ್ಟ್ ಸಹ ಸಂಸ್ಥಾಪಕರೂ ಆಗಿರುವ ಬಿಲ್ ಗೇಟ್ಸ್‌ಗೆ ಸಂಬಂಧಿಸಿದ ಮತ್ತೊಂದು ಸುದ್ದಿ ಇದು. ಅದೇನೆಂದರೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಈಗ ಅಜ್ಜ ಆಗ್ತಿದ್ದಾರೆ. ಹೌದು, ಮೆಲಿಂಡಾ ಫ್ರೆಂಚ್ ಗೇಟ್ಸ್ ಅವರೊಂದಿಗೆ ಬಿಲ್ ಗೇಟ್ಸ್ ಅವರ ಹಿರಿಯ ಮಗಳು, ಜೆನ್ನಿಫರ್ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಪತಿ ನಯೆಲ್ ನಾಸರ್ ಅವರೊಂದಿಗೆ ಮಗುವಿಗೆ ಜನ್ಮ ನೀಡಿದ್ದು, ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಮಗುವನ್ನು ಎತ್ತಿಕೊಂಡಿರುವ ತಾಯಿ ಈ ಕ್ಯೂಟ್ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ತಾಯಿ ಹಾಗೂ ತಂದೆ ಶೇರ್ ಮಾಡಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಜೆನ್ನಿಫರ್ ಗೇಟ್ಸ್ ಶನಿವಾರ ಹಂಚಿಕೊಂಡ ಫೋಟೋದಲ್ಲಿ, ಆಕೆ ತನ್ನ ಮಗುವನ್ನು ನಯೆಲ್ ನಾಸರ್‌ನೊಂದಿಗೆ ತನ್ನ ತೋಳುಗಳಲ್ಲಿ ಹಿಡಿದಿರುವುದನ್ನು ಕಾಣಬಹುದು. ಅವರು ತಮ್ಮ ಮಗು ಹೆಣ್ಣೋ ಅಥವಾ ಗಂಡೋ ಎಂಬ ಬಗ್ಗೆ ಬಹಿರಂಗಪಡಿಸಿಲ್ಲವಾದರೂ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. "ನಮ್ಮ ಆರೋಗ್ಯವಂತ ಪುಟ್ಟ ಕುಟುಂಬದಿಂದ ಪ್ರೀತಿಯನ್ನು ಕಳುಹಿಸುತ್ತಿದ್ದೇವೆ" ಎಂದು ಈ ಪೋಸ್ಟ್‌ಗೆ ಕ್ಯಾಪ್ಷನ್ ಅನ್ನು ಸಹ ಹಾಕಲಾಗಿದೆ.
ಇದನ್ನು ಓದಿ: ಆರ್‌ಸಿ-ಬಿಲ್ ಗೇಟ್ಸ್ ಭೇಟಿ : ಕೃತಕ ಬುದ್ಧಿಮತ್ತೆ ಬಗ್ಗೆ ಚರ್ಚೆ
ಇದೇ ಪೋಸ್ಟ್ ಅನ್ನು ಬಿಲ್ ಗೇಟ್ಸ್ ಸಹ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, ತಾಯಿ ಮೆಲಿಂಡಾ ಗೇಟ್ಸ್ ಸಹ ಹರ್ಷ ವ್ಯಕ್ತಪಡಿಸಿದ್ದು, ಈ ಪೋಸ್ಟ್‌ಗೆ ಕಮೆಂಟ್ ಮಾಡಿದ್ದರು.
ಪೋಸ್ಟ್ ಅನ್ನು ಇಲ್ಲಿ ನೋಡಿ:
ಇನ್ನು, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಬಿಲ್ ಗೇಟ್ಸ್ ಪುತ್ರಿ ಈ ಪೋಸ್ಟ್ ಹಾಕುತ್ತಿದ್ದ ಹಾಗೆ, ಎಲ್ಲೆಡೆಯಿಂದ ಅಭಿನಂದನಾ ಸಂದೇಶಗಳು ಹರಿದು ಬಂದವು. ಮೆಲಿಂಡಾದಿಂದ ಸಹೋದರಿ ಫೋಬೆ ಗೇಟ್ಸ್‌ವರೆಗೆ ಹಲವಾರು ಜನರು ತಮ್ಮ ಶುಭಾಶಯಗಳನ್ನು ಕಳುಹಿಸಿದ್ದಾರೆ. ತಮ್ಮ ಮಗಳ ಪೋಸ್ಟ್‌ಗೆ ಕಮೆಂಟ್ ಮಾಡಿದ್ದ ಮೆಲಿಂಡಾ ಫ್ರೆಂಚ್ ಗೇಟ್ಸ್, "ಜಗತ್ತಿಗೆ ಸ್ವಾಗತ" ಎಂದುಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, "ನನ್ನ ಹೃದಯ ಉಕ್ಕಿ ಹರಿಯುತ್ತದೆ," ಎಂದೂ ಕಮೆಂಟ್ ಮಾಡಿದ್ದಾರೆ. ಹಾಗೂ, ಜೆನ್ನಿಫರ್ ಅವರ ಸಹೋದರಿ ಫೋಬೆ ಕೂಡ ಈ ಪೋಸ್ಟ್‌ಗೆ ಹೃದಯದ ಎಮೋಟಿಕಾನ್‌ಗಳೊಂದಿಗೆ ಕಮೆಂಟ್ ಮಾಡಿದ್ದರು.
ಇದನ್ನೂ ಓದಿ: Vaccine Death: ಮಗಳ ಸಾವಿಗೆ 1000 ಕೋಟಿ ರೂ. ಪರಿಹಾರ ಕೇಳಿದ ತಂದೆ: Bill Gatesಗೆ ನೋಟಿಸ್
ಕಳೆದ ವರ್ಷ ನವೆಂಬರ್‌ನಲ್ಲಿ ಜೆನ್ನಿಫರ್ ಗೇಟ್ಸ್ ತಾನು ಪ್ರೆಗ್ನೆಂಟ್ ಆಗಿರುವುದನ್ನು ಘೋಷಿಸಿದ್ದರು. ಆಕೆ ತಮ್ಮ ಬೇಬಿ ಬಂಪ್ ಫೋಟೋಗಳನ್ನು ಸಹ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಫೋಟೋವೊಂದರಲ್ಲಿ, ಜೆನ್ನಿಫರ್ ಗೇಟ್ಸ್ ನಯೆಲ್ ನಾಸರ್ ಜೊತೆ ಪೋಸ್ ನೀಡಿದ್ದರು.
ಈ ಫೋಟೋಗಳನ್ನು ಇಲ್ಲಿ ನೋಡಿ:
ಜೆನ್ನಿಫರ್ ಗೇಟ್ಸ್ ಮತ್ತು ನಯೆಲ್ ನಾಸರ್ ಅಕ್ಟೋಬರ್ 2021 ರಲ್ಲಿ ವಿವಾಹವಾದರು. ಅವರು ಸುಮಾರು ಐದು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎಂದು ತಿಳಿದುಬಂದಿತ್ತು. ಇಬ್ಬರೂ ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಪಾಲ್ಗೊಂಡವರಾಗಿದ್ದು, ಪತಿ ನಯೆಲ್ ನಾಸರ್ ಒಲಿಂಪಿಕ್ಸ್‌ನಲ್ಲಿ ಸಹ ಸ್ಪರ್ಧೆ ಮಾಡಿದ್ದಾರೆ. ಜೆನ್ನಿಫರ್ ಗೇಟ್ಸ್ ವೈದ್ಯಕೀಯ ಕೋರ್ಸ್ ಅನ್ನೂ ಅಧ್ಯಯನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಿಲ್ ಗೇಟ್ಸ್ ಅನ್ನೇ ಮೀರಿಸಿದ ಉದ್ಯಮಿ ಗೌತಮ್ ಅದಾನಿ ಆಸ್ತಿ ಎಷ್ಟು ಗೊತ್ತಾ..?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ