ನಮ್ಮ ಪ್ರಧಾನಿ ಆಡಳಿತ ವೈಖರಿಗೆ ಚೀನಿಯರ ಪ್ರಶಂಸೆ: ಮೋದಿ ಲಾವೋಕ್ಸಿಯಾನ್‌ ಎಂದ ಚೀನಾ ನೆಟ್ಟಿಗರು

Published : Mar 20, 2023, 09:20 AM ISTUpdated : Mar 20, 2023, 09:23 AM IST
ನಮ್ಮ ಪ್ರಧಾನಿ ಆಡಳಿತ ವೈಖರಿಗೆ ಚೀನಿಯರ ಪ್ರಶಂಸೆ: ಮೋದಿ ಲಾವೋಕ್ಸಿಯಾನ್‌ ಎಂದ ಚೀನಾ ನೆಟ್ಟಿಗರು

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾದ ನೆಟ್ಟಿಗರು ಮೋದಿ ಲಾವೋಕ್ಸಿಯಾನ್‌ ಎಂದು ಸಂಬೋಧಿಸಿದ್ದಾರೆ. ಇದರರ್ಥ ಅಮರ ಮೋದಿ ಎಂದಾಗಿದೆ. ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ಸಂಬಂಧ ಹಳಸಿರುವ ನಡುವೆಯೇ ಚೀನಾ ನೆಟ್ಟಿಗರ ಈ ಪ್ರಶಂಸೆ ವಿಶ್ವದ ಹುಬ್ಬೇರುವಂತೆ ಮಾಡಿದೆ.

ಬೀಜಿಂಗ್‌: ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾದ ನೆಟ್ಟಿಗರು ಮೋದಿ ಲಾವೋಕ್ಸಿಯಾನ್‌ ಎಂದು ಸಂಬೋಧಿಸಿದ್ದಾರೆ. ಇದರರ್ಥ ಅಮರ ಮೋದಿ ಎಂದಾಗಿದೆ. ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ಸಂಬಂಧ ಹಳಸಿರುವ ನಡುವೆಯೇ ಚೀನಾ ನೆಟ್ಟಿಗರ ಈ ಪ್ರಶಂಸೆ ವಿಶ್ವದ ಹುಬ್ಬೇರುವಂತೆ ಮಾಡಿದೆ. ಅಮೆರಿಕದ ರಕ್ಷಣಾ ನಿಯತಕಾಲಿಕೆ ದ ಡಿಪ್ಲೋಮ್ಯಾಟ್‌ನಲ್ಲಿ ಚೀನಾದಲ್ಲಿ ಭಾರತವನ್ನು ಹೇಗೆ ನೋಡಲಾಗುತ್ತದೆ? ಎಂಬ ಶೀರ್ಷಿಕೆಯಲ್ಲಿ ಪತ್ರಕರ್ತ ಮು ಚುನ್‌ಶನ್‌ ಅವರು ಬರೆದ ಲೇಖನ ಪ್ರಕಟವಾಗಿದ್ದು, ಅದರಲ್ಲಿ ಈ ಮಾಹಿತಿಯಿದೆ.

ಚೀನಾದಲ್ಲಿ ಟ್ವೀಟರ್‌ ರೀತಿಯಲ್ಲೇ ಸಿನಾ ವೈಬೋ ಎಂಬ ಸಾಮಾಜಿಕ ಮಾಧ್ಯಮ (Social Media) ಇದ್ದು 58 ಕೋಟಿ ಬಳಕೆದಾರರನ್ನು ಹೊಂದಿದೆ. ಇದರಲ್ಲಿ ಮೋದಿ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮೋದಿ ನೇತೃತ್ವದಲ್ಲಿ ಭಾರತ ವಿಶ್ವದ ಪ್ರಮುಖ ದೇಶಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವ ಶಕ್ತಿ ಹೊಂದಿದೆ ಎಂದು ಭಾವಿಸಿದ್ದಾರೆ ಎಂದು ಬರೆಯಲಾಗಿದೆ. ಚೀನೀ ಸೋಷಿಯಲ್‌ ಮೀಡಿಯಾದಲ್ಲಿ ನರೇಂದ್ರ ಮೋದಿಗೆ ಅಸಾಮಾನ್ಯ ಅಡ್ಡಹೆಸರು ಇದೆ. ಮೋದಿ ಲಾವೋಕ್ಸಿಯಾನ್‌. ಲಾವೋಕ್ಸಿಯಾನ್‌ ಎಂಬುದು ವಿಲಕ್ಷಣ ಸಾಮರ್ಥ್ಯ ಹೊಂದಿ ಅಮರರಾಗುವ ಹಿರಿಯರನ್ನು ಉಲ್ಲೇಖಿಸುವ ಪದ. ಮೋದಿ ಅವರು ಇತರ ನಾಯಕರಿಗಿಂತ ಭಿನ್ನ. ಇನ್ನೂ ಅದ್ಭುತ ಎಂದು ಚೀನಾ ನೆಟ್ಟಿಗರು ಭಾವಿಸುತ್ತಾರೆ ಎಂಬುದನ್ನು ಮೋದಿ ಲಾವೋಕ್ಸಿಯಾನ್‌ ಎಂಬ ಪದವೇ ಸೂಚಿಸುತ್ತದೆ ಎಂದು ಬಣ್ಣಿಸಲಾಗಿದೆ

.ಪಾಕ್ ಪ್ರಜೆಗಳಿಗೂ ಬೇಕಂತೆ ಮಾಸ್ಟರ್ ಪೀಸ್ ಮೋದಿ: ಹೇಗಿದೆ ಗೊತ್ತಾ ಪಾಕಿಸ್ತಾನದ ಅಂತರಂಗ?

ಮೋದಿ ಉಡುಗೆಗೂ ಮೆಚ್ಚುಗೆ:

ಮೋದಿ ಅವರ ಉಡುಗೆ ಮತ್ತು ದೈಹಿಕ ನೋಟವು 'ಲಾವೋಕ್ಸಿಯಾನ್‌' (Laoxian) ರೀತಿ ಕಾಣುತ್ತದೆ ಮತ್ತು ಅವರ ಕೆಲವು ನೀತಿಗಳು ಭಾರತದ ಹಿಂದಿನ ನೀತಿಗಳಿಗಿಂತ ಭಿನ್ನವಾಗಿವೆ ಎಂದು ಚೀನೀಯರು ಭಾವಿಸಿದ್ದಾರೆ. ನಾನು ಸುಮಾರು 20 ವರ್ಷಗಳಿಂದ ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳನ್ನು ಮಾಡುತ್ತಿದ್ದೇನೆ ಮತ್ತು ಚೀನಾದ ನೆಟ್ಟಿಗರು ವಿದೇಶಿ ನಾಯಕನಿಗೆ ಅಡ್ಡಹೆಸರು ನೀಡುವುದು ಅಪರೂಪ. ಮೋದಿಯವರ ನಿಕ್‌ನೇಮ್‌ ಎಲ್ಲಕ್ಕಿಂತ ಹೆಚ್ಚಾಗಿ ಎದ್ದು ಕಾಣುತ್ತದೆ. ಸ್ಪಷ್ಟವಾಗಿ, ಅವರು ಚೀನಾದ ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಚುನ್‌ಶನ್‌ (Mu Chunsha) ತಮ್ಮ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ.  ಮೋದಿ ಕೂಡ 2015ರಿಂದಲೇ ಚೀನಾದ ಸಿನಾ ವೈಬೋ (Sina Weibo) ಸೋಷಿಯಲ್‌ ಮೀಡಿಯಾ ಖಾತೆದಾರರಾಗಿದ್ದರು. 2.44 ಲಕ್ಷ ಹಿಂಬಾಲಕರ ಹೊಂದಿದ್ದರು. ಜುಲೈ 2020 ರಲ್ಲಿ ವೈಬೊವನ್ನು ತೊರೆದರು

.ಅಲ್ಲಾಹ್ ನಮಗೆ ಮೋದಿಯನ್ನು ಕೊಡಲಿ ಅವರು ನಮ್ಮ ದೇಶವಾಳಲಿ: ಪಾಕ್ ಪ್ರಜೆ ಹೇಳಿಕೆ ವೈರಲ್

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!