
ಬೀಜಿಂಗ್(ಮೇ.16): ನೇಪಾಳದಿಂದ ಬಂದ ಪರ್ವತಾರೋಹಿಗಳಿಂದ ತನ್ನ ದೇಶಕ್ಕೆ ಮತ್ತೆ ಸೋಂಕು ಹಬ್ಬಬಹುದು ಎಂಬ ಕಾರಣಕ್ಕೆ, ಎವರೆಸ್ಟ್ ಶಿಖರದ ಮೇಲೆ ಗೆರೆಯೊಂದನ್ನು ಎಳೆಯಲು ನಿರ್ಧರಿಸಿದ್ದ ಚೀನಾ ಸರ್ಕಾರ, ಇದೀಗ ತನ್ನ ದೇಶದ ಕಡೆಯಿಂದ ಎವರೆಸ್ಟ್ ಶಿಖರಕ್ಕೆ ಆರೋಹಣವನ್ನೇ ನಿಷೇಧಿಸಿದೆ.
ಚೀನಾದಲ್ಲಿ ಈಗ ಸ್ಥಳೀಯ ಕೊರೋನಾ ವೈರಸ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದ್ದು, ಪಕ್ಕದ ರಾಷ್ಟ್ರ ನೇಪಾಳದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಏರಿಕೆ ಆಗುತ್ತಿರುವುದು ಚೀನಾದ ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ.
"
ಚೀನಾ ಈ ವರ್ಷ 38 ಮಂದಿಗೆ ಮಾತ್ರ ಮೌಂಟ್ ಎವರೆಸ್ಟ್ ಏರಲು ಅವಕಾಶ ನೀಡಿದ್ದು, ಅವರೆಲ್ಲರೂ ಚೀನಾದ ನಾಗರಿಕರೇ ಆಗಿದ್ದಾರೆ. ಮತ್ತೊಂದೆಡೆ ನೇಪಾಳ 408 ಮಂದಿಗೆ ಮೌಂಟ್ ಎವರೆಸ್ಟ್ ಅನ್ನು ಏರಲು ಅನುಮತಿ ನೀಡಿದೆ. ಇವರಲ್ಲಿ ಹಲವು ಮಂದಿ ಪರ್ವತಾರೋಹಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಎವರೆಸ್ಟ್ ಬೇಸ್ ಕ್ಯಾಂಪ್‌ನಿಂದ ಕೆಳಗೆ ಇಳಿಸಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ