ಹೊತ್ತಿ ಉರಿದ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡ ಬೆಕ್ಕು!

Published : May 15, 2021, 05:54 PM IST
ಹೊತ್ತಿ ಉರಿದ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡ ಬೆಕ್ಕು!

ಸಾರಾಂಶ

5 ಮಹಡಿ ಅಪಾರ್ಮೆಂಟ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಪ್ರಾಣ ರಕ್ಷಣೆಗೆ ಕಿಟಕಿ ಮೂಲಕ ಹಾರಿದ ಬೆಕ್ಕು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಚಿಕಾಗೋ(ಮೇ.15): ಅದು 5 ಮಹಡಿಗಳ ಬಹುದೊಡ್ಡ ಕಟ್ಟಡ. ಈ ಅಪಾರ್ಟ್‌ಮೆಂಟ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.  ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಆದರೆ ಬೆಂಕಿ ಹಾಗೂ ಹೊಗೆಯಿಂದ ಆತಂಕಗೊಂಡಿದ್ದ ಬೆಕ್ಕು ತನ್ನ ಪ್ರಾಣ ರಕ್ಷಣೆಗೆ 5ನೇ ಮಹಡಿಯ ಕಿಟಕಿಯಿಂದ ನೇರವಾಗಿ ಕೆಳಗ್ಗೆ ಜಿಗಿದಿದೆ. ಅಮೆರಿಕದ ಚಿಕಾಗೋದಲ್ಲಿ  ಈ ಘಟನೆ ನಡೆದಿದೆ.

ಮನೇಲೆ ಇರು ಅಂದ್ರೆ ಕೇಳಲ್ಲ ತುಂಟ ಬೆಕ್ಕು, ಬ್ಯಾಗ್‌ನಲ್ಲಿ ತುಂಬಿ ಕಾಲೇಜಿಗೆ ಒಯ್ದ ಸುಂದರಿ

ಪ್ರಾಣ ಉಳಿಸಿಕೊಳ್ಳಲು 5ನೇ ಮಹಡಿಯಿಂದ ಜಿಗಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪಾರ್ಟ್‌ಮೆಂಟ್‌ನ 5ನೇ ಮಹಡಿಯ ಮನೆಯ ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿ ತಕ್ಷಣವೇ ಸಂಪೂರ್ಣ ಮಹಡಿಗೆ ಆವರಿಸಿದೆ. ಇತ್ತ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಮಾಡಿದೆ. ಈ ವೇಳೆ ಬೆಕ್ಕು ಮಾತ್ರ ಮನೆಯೊಳಗೆ ಬಂಧಿಯಾಗಿತ್ತು. 

 

ಬೆಂಕಿ, ಹೊಗೆಯಿಂದ ಆತಂಕಗೊಂಡ ಬೆಕ್ಕು, ಕಿಟಕಿಯ ಮೂಲಕ ಹೊರಬಂದು 5ನೇ ಮಹಡಿಯಿಂದ ಕೆಳಕ್ಕೆ ಹಾರಿದೆ. ಎತ್ತರದಿಂದ ಜಿಗಿದ ಬೆಕ್ಕು ನೆಲಕ್ಕೆ ಬಿದ್ದ ತಕ್ಷಣ ಎದ್ದು ಮುಂದೆ ಸಾಗಿದೆ. ಬೆಕ್ಕಿಗೆ ಯಾವುದೇ ಅಪಾಯ ಆಗಿಲ್ಲ. ಇದುವರೆಗೂ ಹೊರಜಗತ್ತು ಕಾಣದ ಬೆಕ್ಕು, ಹಾರಿದ ಬಳಿಕ ಇದೀಗ ಮನೆಗೆ ಹಿಂತುರಿಗಿಲ್ಲ ಎಂದು ಮನೆಯ ಮಾಲೀಕ ಕಣ್ಮೀರಿಟ್ಟಿದ್ದಾರೆ.

480 ಬೆಕ್ಕು ಮತ್ತು 12 ನಾಯಿಗಳೊಂದಿಗೆ ಈ ಮಹಿಳೆ ವಾಸ!

ಬೆಕ್ಕು ಹಾರುತ್ತಿರುವ ವಿಡಿಯೋವನ್ನು ಚಿಕಾಗೋ ಅಗ್ನಿಶಾಮಕ ದಳ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ವೈರಲ್ ಆಗಿದೆ. ಇತ್ತ ಅಪಾರ್ಟ್‌ಮೆಂಟ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ. ಆದರೆ ಬೆಕ್ಕು ಕಾಣೆಯಾಗಿರುವುದು ಮಾಲೀಕನಿಗೆ ಇನ್ನಿಲ್ಲದ ನೋವು ತಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ
ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು