ಕನ್ನಡದ ನಟ ಸಾರ್ವಭೌಮ ಡಾ ರಾಜ್‌ಕುಮಾರ್ ಅವರು ಅಭಿನಯಿಸಿದ ಸಂಪತ್ತಿಗೆ ಸವಾಲ್ ಸಿನಿಮಾದ ಯಾರೇ ಕೂಗಾಡಲಿ ಹಾಡನ್ನು ನೀವೆಲ್ಲರೂ ಕೇಳಿರಬಹುದು. ಅದರಲ್ಲಿ ಪ್ರಾಣಿಗಳ ಗುಣಗಾಣವಿದೆ. ಪ್ರಾಣಿಗಳೇ ಗುಣದಲ್ಲಿ ಮೇಲೂ ಮಾನವನದಕ್ಕಿಂತ ಕೀಳು ಎಂದು ರಾಜ್‌ಕುಮಾರ್ ಹಾಡುತ್ತಾರೆ. ಆಗಲೂ ಈಗಲೂ ಮುಂದೆಯೂ ಈ ಹಾಡು ಎವರ್‌ಗ್ರೀನ್. ಈಗ ಯಾಕೆ ಆ ಹಾಡಿನ ವಿಚಾರ ಅಂತೀರಾ ಇಲ್ಲೊಂದು ಚಿಂಪಾಜಿ (chimpanzee) ಅಳುತ್ತಿರುವ ವ್ಯಕ್ತಿಯನ್ನು ತಬ್ಬಿಕೊಂಡು ತಲೆ ಸವರಿ ಅಳದಂತೆ ಸಂತೈಸುತ್ತಿದೆ.
ಪ್ರಾಣಿಗಳು ಪ್ರೀತಿ ತೋರುವ ಹಲವರು ವೀಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ನೋಡಿದ್ದೇವೆ. ಕೆಲವು ಶ್ವಾನಗಳು ತಮ್ಮ ಮಾಲೀಕ ಅಥವಾ ಪ್ರೀತಿ ಪಾತ್ರರೂ ಯಾರಾದರೂ ಅಪಾಯಕ್ಕೆ ಸಿಲುಕಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಓಡಿ ಹೋಗಿ ಅವರ ರಕ್ಷಣೆಗೆ ಮುಂದಾಗುವ ಅನೇಕ ವಿಡಿಯೋಗಳನ್ನು ನಾವು ನೋಡಿದ್ದೇವೆ. ಮನುಷ್ಯರೇ ತನ್ನವರನ್ನು ದೂರ ಮಾಡುತ್ತಿರುವ ಇಂದಿನ ಕಾಲದಲ್ಲಿ ಪ್ರಾಣಿಗಳು ಇನ್ನಿಲ್ಲದಂತೆ ಪ್ರೀತಿ ಮಾಡುವುದನ್ನು ನೋಡಿದರೆ ಅಣ್ಣಾವ್ರ ಈ ಹಾಡು ನೆನಪಿಗೆ ಬರದೇ ಇರುವುದಿಲ್ಲ. ಅದೇ ರೀತಿ ಮಿಯಾಮಿಯಲ್ಲಿ ವಾಸಿಸುವ ಲಿಂಬಾನಿ ಎಂಬ 2.5 ವರ್ಷ ವಯಸ್ಸಿನ ಚಿಂಪಾಂಜಿಯು ತನ್ನ ಅಳುತ್ತಿರುವ ಮಾಲೀಕನನ್ನು ಸಂತೈಸುವ ಮೂಲಕ ಆತನಿಗೆ ಭಾವನಾತ್ಮಕವಾದ ಬೆಂಬಲ ನೀಡುತ್ತದೆ.
ಸ್ಟೈಲ್ ಆಗಿ ಜೀನ್ಸ್ ಪ್ಯಾಂಟ್ ಧರಿಸಿ ಯುವತಿಗೆ ಮುತ್ತಿಕ್ಕಿದ ಚಿಂಪಾಜಿ
ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಲಿಂಬಾನಿಯ ಅಧಿಕೃತ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಇಂಟರ್ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಒಂದು ಬದಿಯಲ್ಲಿ ಕುಳಿತು ಅಳುತ್ತಿರುವಂತೆ ನಟಿಸುತ್ತಿದ್ದಾರೆ. ಈ ವೇಳೆ ಅಲ್ಲಿಗೆ ಓಡಿ ಬರುವ ಲಿಂಬಾನಿ ಅವರನ್ನು ಅಪ್ಪಿಕೊಂಡು ಸಮಾಧಾನ ಮಾಡುವ ಮುನ್ನ ಕಣ್ಣೀರು ಒರೆಸಲು ಮುಂದಾಗುತ್ತದೆ. ಮಾನವನ ದುಃಖವನ್ನು ತನ್ನದೆಂಬಂತೆ ಭಾವಿಸುವ ಈ ಪ್ರಾಣಿಯ ವೀಡಿಯೊವನ್ನು ನೋಡಿ ಅನೇಕರು ಭಾವುಕರಾಗಿದ್ದಾರೆ.
ಯಾರಾದರೂ ಅತ್ತರೆ ಲಿಂಬಾನಿಯ ಪ್ರತಿಕ್ರಿಯೆ ಹೇಗಿರುತ್ತೆ ಎಂದು ಪರೀಕ್ಷಿಸಲು ಹೀಗೆ ಅಳುವಂತೆ ನಾಟಕ ಮಾಡಲಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ನಾಟಕ ಎಂಬುದರ ಅರಿವಿರದ ಲಿಂಬಾನಿ ಆತನ ಹೆಗಲ ಮೇಲೆ ಕುಳಿತುಕೊಂಡು ಆತನ ಮುಖದತ್ತ ತಲೆ ಬಾಗಿಸಿ ಸಾಂತ್ವಾನಿಸಲು ಪ್ರಯತ್ನಿಸುತ್ತದೆ. ಅಲ್ಲದೇ ಆತನನ್ನು ತಬ್ಬಿಕೊಂಡು ಸಮಾಧಾನ ಪಡಿಸಲು ಯತ್ನಿಸುತ್ತಿದೆ.
ಬೇರ್ಪಟ್ಟ ಚಿಂಪಾಜಿ ಸಹೋದರರು ಒಂದಾದ ಕ್ಷಣ: ಮುದ್ದಾದ ವಿಡಿಯೋ
ಲಿಂಬಾನಿ(Limbani) ಫ್ಲೋರಿಡಾದ (Florida) ಮಿಯಾಮಿಯಲ್ಲಿರುವ ಝೂಲಾಜಿಕಲ್ ವೈಲ್ಡ್‌ಲೈಫ್ ಫೌಂಡೇಶನ್‌ನ (Zoological Wildlife Foundation) ಉದ್ಯಾನವನದಲ್ಲಿ ವಾಸಿಸುತ್ತಿದೆ. ಲಿಂಬಾನಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದೆ. ಇನ್ನು ತನ್ನ ಪ್ರೀತಿಯನ್ನು ಸಾರುತ್ತಿರುವ ಈ ಲೀಮಬಾನಿಯ ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಪ್ರಾಣಿಗಳಿಂದ ಮನುಷ್ಯ ಕಲಿಯುವುದು ತುಂಬಾ ಇದೆ ಎಂದು ಒಬ್ಬರು ಈ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. ಲಿಂಬಾನಿ ತನ್ನ ಪ್ರೀತಿಯಿಂದ ಎಲ್ಲರ ಹೃದಯವನ್ನು ಗೆದ್ದಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮನುಷ್ಯರಂತೆ ಪ್ರಾಣಿಗಳು ಕೂಡ ಸಂಬಂಧವನ್ನು ತುಂಬಾ ಸುಂದರವಾಗಿ ನಿಭಾಯಿಸುತ್ತವೆ. ಅವರಿಗೂ ಕೂಡ ಅಕ್ಕ ತಮ್ಮ ಅಮ್ಮ ಅಪ್ಪ ಎಂಬ ಅನುಬಂಧಗಳಿವೆ. ಅದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ ಪಕ್ಷಿಗಳು ಪ್ರೀತಿ ತೋರುವ ತಮ್ಮ ಸಹವರ್ತಿಗಳಲ್ಲಿ ಪ್ರೇಮದಿಂದ ವರ್ತಿಸುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಅದೇ ರೀತಿ ಬೇರ್ಪಟ್ಟಿದ್ದ ಎರಡು ಸಹೋದರ ಚಿಂಪಾಜಿಗಳು ಮೊದಲ ಬಾರಿ ಒಂದಾದಾಗ ಪರಸ್ಪರ ಹೃದಯ ತುಂಬಿ ಭಾವುಕವಾಗಿ ಮುದ್ದಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ