ಕ್ಕೊಕ್ಕೊಕ್ಕೊ ಕೋಳಿ ಬಂತು... ಕುಕ್ಕುಟಗಳಿಗೂ ಸೌಂದರ್ಯ ಸ್ಪರ್ಧೆ... ವಿಡಿಯೋ ನೋಡಿ

Suvarna News   | Asianet News
Published : Feb 17, 2022, 01:13 PM IST
ಕ್ಕೊಕ್ಕೊಕ್ಕೊ ಕೋಳಿ ಬಂತು... ಕುಕ್ಕುಟಗಳಿಗೂ ಸೌಂದರ್ಯ ಸ್ಪರ್ಧೆ... ವಿಡಿಯೋ ನೋಡಿ

ಸಾರಾಂಶ

ಕೋಳಿಗಳಿಗಾಗಿ ಸೌಂದರ್ಯ ಸ್ಪರ್ಧೆ ಆಯೋಜಿಸಿದ ಲಿಬಿಯಾ ಬಣ್ಣ, ಗಾತ್ರ, ಗರಿಗಳ ಹೊಳಪಿನ ಆಧಾರದ ಮೇಲೆ ಸುಂದರಿಯ ಆಯ್ಕೆ ಕೋಳಿ ಸಾಕಣೆದಾರರನ್ನು ಉತ್ತೇಜಿಸಲು ಆಯೋಜನೆ

ಲಿಬಿಯಾ(ಫೆ.17): ಲಿಬಿಯಾದ ರಾಜಧಾನಿ ಟ್ರಿಪೋಲಿ ಇತ್ತೀಚೆಗೆ ಅಸಾಮಾನ್ಯ ಆದರೆ ಆಕರ್ಷಕವಾದ ಸಮಾರಂಭವೊಂದಕ್ಕೆ ಸಾಕ್ಷಿಯಾಯಿತು. ಜಗತ್ತಿನಲ್ಲಿಯೇ ಮೊದಲ ಬಾರಿ ಕೋಳಿಗಳಿಗಾಗಿ ಸೌಂದರ್ಯ ಸ್ಪರ್ಧೆಯನ್ನು ಲಿಬಿಯಾ ಏರ್ಪಡಿಸಿತ್ತು. ಇದು ದೇಶಾದ್ಯಂತ ಅನೇಕ ಕೋಳಿ ಸಾಕಾಣೆಕಾರರನ್ನು ಹಾಗೂ ಪ್ರಾಣಿಪ್ರಿಯರ ಗಮನ ಸೆಳೆಯಿತು.ಕೋಳಿಗಳನ್ನು ಅವುಗಳ ಬಣ್ಣ, ಗಾತ್ರ, ಆಕಾರ ಮತ್ತು ಗರಿಗಳ ಹೊಳಪನ್ನು ಆಧಾರಿಸಿ ಈ ಸೌಂದರ್ಯ ಸ್ಪರ್ಧೆಯ ವಿಜೇತರನ್ನು ನಿರ್ಣಯಿಸಲಾಗಿತ್ತು.

ಕೋಳಿ ಸಾಕಣೆದಾರರನ್ನು ಉತ್ತೇಜಿಸಲು ಮಾತ್ರವಲ್ಲದೆ ಪಕ್ಷಿಗಳ ಸಾಕಣೆಯ ಕುಶಲತೆಯ ಬಗ್ಗೆ ತಿಳಿದುಕೊಳ್ಳಲು ಯುವಕರಿಗೆ ಅವಕಾಶ ನೀಡಿ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಸಂಘರ್ಷದಲ್ಲಿ ಯುವಕರು ಭಾಗಿಯಾಗದಂತೆ ಅವರನ್ನು ಇತ್ತ ಸೆಳೆಯಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಸಮಾರಂಭದ ಮೇಲ್ವಿಚಾರಣೆಯನ್ನು ಖಲೀದ್ ದಿಯಾಬ್(Khaled Diab)ಎಂಬುವರು ವಹಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಖಲೀದ್ ದಿಯಾಬ್, ನಾವು ಅಲಂಕಾರಿಕ ಕೋಳಿ ತಳಿಗಳ ಸಾಕಾಣೆಗಾರರ ಆಗಮನವನ್ನು ನಿರೀಕ್ಷಿಸುತ್ತಿದ್ದೇವೆ ಯುವಕರನ್ನು ಋಣಾತ್ಮಕತೆ ಮತ್ತು ಯುದ್ಧಗಳಿಂದ ದೂರ ಮಾಡಿದ ಶ್ರೇಷ್ಠ ವೃತ್ತಿ ಇದಾಗಿದೆ. ಅಧಿಕಾರಿಗಳು ಈ ಕ್ಷೇತ್ರದಲ್ಲಿ ಯುವಕರನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.

ಕೋಳಿಯ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿದ ಮನೆಮಂದಿ

ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಪಕ್ಷಿಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹವಾಗಿವೆ ಎಂದು ದಿಯಾಬ್ ಹೇಳಿದರು. ಪಕ್ಷಿಗಳನ್ನು ಅವುಗಳ ಬಣ್ಣ, ಗಾತ್ರ, ಆಕಾರ ಮತ್ತು ಅವುಗಳ ವೈಶಿಷ್ಟ್ಯಗಳ ಹೊಳಪಿನ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಈ ಕೋಳಿಗಳ ಸೌಂದರ್ಯ ಸ್ಪರ್ಧೆ ಮತ್ತು ಪ್ರದರ್ಶನಕ್ಕೆ ಭೇಟಿ ನೀಡಿದ ವೀಕ್ಷಕರಾದ ತಾಹೆರ್ ಬೆಲ್ಕಾಸ್ಸೆಮ್ (Taher Belkassem) ಸುದ್ದಿ ಸಂಸ್ಥೆ ರಾಯಿಟರ್ಸ್‌ ಜೊತೆ ಮಾತನಾಡಿ, ಈ ರೀತಿಯ ಸಮಾರಂಭವನ್ನು ನೋಡಿದ್ದು ಇದೇ ಮೊದಲು ಎಂದು ಹೇಳಿದರು.'ನಾನು ಮೊದಲು ಸಾಮಾನ್ಯ ಕೋಳಿಗಳ ಬಗ್ಗೆ ಕೇಳಿದ್ದೆ, ಆದರೆ ಇಷ್ಟು ವಿಧದ ಕೋಳಿಗಳನ್ನು ನೋಡುತ್ತಿರುವುದು ಇದೇ ಮೊದಲು. ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಸಂಘಟಕರ ಪ್ರಯತ್ನಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ಹೇಳಿದರು.

ಪೆಂಟಗಾನ್‌ ಮುಂದೆ ಸುಳಿದಾಡುತ್ತಿದ್ದ ಕೋಳಿ ವಶಕ್ಕೆ

93.8 ಶೇಕಡಾ ಅಂಕಗಳೊಂದಿಗೆ ಈ ಕೋಳಿ ಸ್ಪರ್ಧೆಯಲ್ಲಿ ಮೊಹನ್ನದ್ ಜೈಡೆ (Mohannad Jaydeh) ಎಂಬುವರ ಬ್ರಹ್ಮ ಎಂಬ ಕೋಳಿ ತಳಿಯು ಪ್ರಥಮ ಬಹುಮಾನ ಗಳಿಸಿದೆ. ಈ ಕೋಳಿ ದೊಡ್ಡ ಗಾತ್ರ ಮತ್ತು ಹಳದಿ ಪಾದಗಳಿಗೆ, ಮೃದುತ್ವ ಮತ್ತು ಗರಿಗಳ ಹೊಳಪಿಗೆ ಹೆಸರುವಾಸಿಯಾಗಿದೆ ಎಂದು ಇದರ ಮಾಲೀಕ ಮೊಹನ್ನದ್ ಜೈಡೆ  ರಾಯಿಟರ್ಸ್‌ಗೆ ಹೇಳಿದರು.

ಇತ್ತೀಚೆಗೆ ತಮಿಳುನಾಡಿನ ಕುಟುಂಬವೊಂದು ಕೋಳಿಯ ಹುಟ್ಟುಹಬ್ಬವನ್ನು ಆಚರಿಸಿತ್ತು. ಕೋಳಿಯ ಹುಟ್ಟುಹಬ್ಬವನ್ನು ಯಾವುದೇ ಮನೆ ಮಂದಿಯ ಹುಟ್ಟುಹಬ್ಬಕ್ಕೂ ಕಮ್ಮಿ ಇಲ್ಲದಂತೆ ಆಚರಿಸಲಾಗಿತ್ತು ಅಲ್ಲದೇ ಈ ಸಂಭ್ರಮಾಚರಣೆಗೆ ಅತಿಥಿಗಳನ್ನು ಕೂಡ ಕರೆಸಿ ಎಲ್ಲರೆದುರು ಕೇಕ್‌ ಕತ್ತರಿಸಿ ಈ ಹುಟ್ಟಹಬ್ಬವನ್ನು ಆಚರಿಸಿದ್ದರು.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ವಿಡಿಯೋದಲ್ಲಿ ದೊಡ್ಡದಾದ ಕೇಕ್‌ ಅನ್ನು ಟೇಬಲ್‌ ಮೇಲೆ ಇರಿಸಲಾಗಿತ್ತು. ಕೇಕ್‌ ಇರಿಸಿರುವ ರೂಮ್‌ನ್ನು ಬಣ್ಣ ಬಣ್ಣದ ಬಲೂನ್‌ಗಳಿಂದ ಸಿಂಗರಿಸಲಾಗಿದ್ದು, ಹಾಗೂ ಲೇಂಟರ್ನ್ಸ್‌, ಪೊಮ್‌ ಪೊಮ್‌ ಹಾಗೂ  ಹುಟ್ಟು ಹಬ್ಬದ ಶುಭಾಶಯ ತಿಳಿಸುವ ಬ್ಯಾನರ್‌ಗಳನ್ನು ಇರಿಸಲಾಗಿತ್ತು. ಜೊತೆಗೆ ಅಲ್ಲಿ ಸಾಕಷ್ಟು ಜನ ಸೇರಿದ್ದು, ಗುಂಪಿನ ಮಧ್ಯದಲ್ಲಿದ್ದ ಹುಡುಗಿಯೊಬ್ಬಳು ಕೈಯಲ್ಲಿ ಹುಂಜವನ್ನು ಹಿಡಿದಿದ್ದಳು. ನಂತರ ಓರ್ವ ಮಹಿಳೆ ಹುಂಜದ ಕಾಲಿನಲ್ಲಿ ಕೇಕ್‌ ಕತ್ತರಿಸುವ ಚಾಕ್‌ ಇಡುತ್ತಾಳೆ. ಇದೇ ವೇಳೆ ಜೊತೆಗೆ ಸೇರಿರುವ ಅನೇಕರು ಹ್ಯಾಪ್‌ ಬರ್ತ್‌ಡೇ ಹಾಡು ಹಾಡಿ ಜನ್ಮದಿನದ ಶುಭಾಶಯ ವಿನಿಮಯ ಮಾಡುತ್ತಾರೆ. ನಂತರ ಕೇಕ್‌ನ ಸಣ್ಣ ತುಂಡೊಂದನ್ನು ಹುಂಜಕ್ಕೆ ತಿನ್ನಿಸುತ್ತಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!