
ಲಂಡನ್(ಮಾ. 19) ಹೆಂಡತಿಗೆ ವಿದೇಶದಲ್ಲಿ ಬಿಜಿನಸ್ ಮೀಟ್ ಇದೆ ಎಂದು ಹೇಳಿ ಪ್ರೇಯಸಿಯೊಂದಿಗೆ ಚಕ್ಕಂದವಾಡಲು ವಿದೇಶಕ್ಕೆ ಹಾರಿದ್ದ ಅಸಾಧ್ಯ ಗಂಡ ಕೊರೋನಾ ದಾಳಿಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಉತ್ತ ಇಂಗ್ಲೆಂಡ್ ನಲ್ಲಿ ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡಿಸಿದಾಗ ಗಂಡನ ಅಸಲಿತನ ರಟ್ಟಾಗಿದೆ. ಗಹೆಂಡಿತ ಬಳಿ ಯುಎಸ್ ಗೆ ಬಿಜಿನಸ್ ಟ್ರಿಪ್ ಹೋಗುತ್ತೇನೆ ಎಂದು ಹೇಳಿದ್ದ ಆಸಾಮಿ ಲವರ್ ಜತೆ ಇಟಲಿಗೆ ಹಾರಿದ್ದ. ಇಟಲಿಯಲ್ಲೇ ಮಾರಕ ವೈರಸ್ ಬೆನ್ನು ಬಿದ್ದಿದೆ.
ಈ ರಕ್ತದ ಗುಂಪಿನವರೇ ಎಚ್ಚರ, ಕೊರೋನಾ ನಿಮ್ಮನ್ನು ಬಲುಬೇಗ ಪ್ರೀತಿಸ್ಬಹುದು!
ಈ ಅಸಾಧ್ಯ ಗಂಡ ಯಾವ ಮಹಿಳೆಯೊಂದಿಗೆ ಅಫೇರ್ ಇಟ್ಟುಕೊಂಡಿದ್ದ ಎಂಬ ಸಂಗತಿಯನ್ನು ಅಧಿಕಾರಿಗಳು ಗೌಪ್ಯವಾಗಿ ಇಟ್ಟಿದ್ದಾರೆ. ಈತನ ಹೆಂಡತಿ ಉತ್ತರ ಇಂಗ್ಲೆಂಡ್ ನಲ್ಲಿ ಗೃಹ ಬಂಧನದಲ್ಲಿದ್ದರೆ ಗಂಡ ಆಸ್ಪತ್ರೆ ಸೇರಿಕೊಂಡಿದ್ದಾನೆ.
ಈ ಪ್ರಕರಣ ತಮಾಷೆಯಾಗಿ ತೋರಿದರೂ ಇದರ ಗಂಭೀರತೆ ಕಡಿಮೆ ಇಲ್ಲ. ಅಕ್ರಮ ಸಂಬಂಧ ಮುಚ್ಚಿಡಬಹುದು ಎಂದು ಅಂದುಕೊಂಡಿದ್ದ ಎಲ್ಲ ಪ್ಲಾನ್ ಗಳನ್ನು ಕೊರೋನಾ ಬಹಿರಂಗ ಮಾಡಿ ಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ