ರಷ್ಯಾ ಮೂಲದ ಕ್ಷಿಪಣಿ ಪೋಲೆಂಡ್ ಗಡಿಯಲ್ಲಿ ಇಬ್ಬರು ನಾಗರಿಕರ ಸಾವಿಗೆ ಕಾರಣವಾಗಿದೆ ಎಂದು ನ್ಯಾಟೋ ರಾಷ್ಟ್ರ ಪೊಲೆಂಡ್ ಹೇಳಿದ ಬೆನ್ನಲ್ಲಿಯೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಂಡೋನೇಷ್ಯಾದಲ್ಲಿ ಜಿ7 ಹಾಗೂ ನ್ಯಾಟೋ ರಾಷ್ಟ್ರಗಳ ಸಭೆ ಕರೆದು ವಿಷಯದ ಚರ್ಚೆ ಮಾಡಿದ್ದಾರೆ.
ಬಾಲಿ (ನ.16): ಉಕ್ರೇನ್ ಗಡಿಯಲ್ಲಿರುವ ಪೋಲೆಂಡ್ ಪ್ರದೇಶದಲ್ಲಿ ರಷ್ಯಾದ ಕ್ಷಿಪಣಿ ದಾಳಿ ನಡೆದಿದ್ದು, ಇಬ್ಬರು ನಾಗರಿಕರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲಿಯೇ ನ್ಯಾಟೋ ರಾಷ್ಟ್ರವಾಗಿರುವ ಪೋಲೆಂಡ್ ಹೈ ಅಲರ್ಟ್‌ನಲ್ಲಿದೆ. ಆರಂಭದಲ್ಲಿ ಇದು ರಷ್ಯಾದ ಕ್ಷಿಪಣಿ ದಾಳಿ ಎಂದು ಹೇಳಲಾಗಿದ್ದರೂ, ನಂತರದ ವರದಿಗಳ ಪ್ರಕಾರ ರಷ್ಯಾ ನಿರ್ಮಿತ ಕ್ಷಿಪಣಿಯಿಂದಾದ ದಾಳಿ ಬಹುಶಃ ಉಕ್ರೇನ್‌ನಿಂದಲೇ ಈ ದಾಳಿಯಾಗಿರಬಹುದು ಎನ್ನಲಾಗಿದೆ. ನ್ಯಾಟೋ ರಾಷ್ಟ್ರದಲ್ಲಿ ರಷ್ಯಾದ ಕ್ಷಿಪಣಿ ಬಿದ್ದ ಬೆನ್ನಲ್ಲಿಯೇ ಇಂಡೋನೇಷ್ಯಾದ ಬಾಲಿಯಲ್ಲಿ ಜಿ20 ರಾಷ್ಟ್ರಗಳ ಸಭೆಯಲ್ಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ತುರ್ತು ಸಭೆ ನಡೆಸಿದ್ದಾರೆ. ಈ ಸಮಯದಲ್ಲೂ ಬೈಡೆನ್ ಕ್ಷಿಪಣಿ ರಷ್ಯಾ ಸೇನೆಯೇ ಉಡಾಯಿಸಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ ಎಂದು ಹೇಳಿದ್ದಾರೆ. ಹಾಗಿದ್ದರೂ ಈ ಘಟನೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಇದರ ನಡುವೆ ವಿಶ್ವದಲ್ಲಿ ಮೂರನೇ ಮಹಾಯುದ್ಧದ ಆತಂಕ ಮನೆ ಮಾಡಿದ್ದು, ನ್ಯಾಟೋ ಆರ್ಮಿ ಹಾಗೂ ಪೋಲೆಂಡ್ ಸೇನೆಗೆ ಹೈ ಅಲರ್ಟ್‌ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಉಕ್ರೇನ್ ಗಡಿಯ ಬಳಿ ತನ್ನ ದೇಶದ ಪೂರ್ವ ಭಾಗದಲ್ಲಿ "ರಷ್ಯಾದ ನಿರ್ಮಿತ" ಕ್ಷಿಪಣಿಯು ಇಬ್ಬರನ್ನು ಕೊಂದಿದೆ ಎಂದು ನ್ಯಾಟೋ-ಮಿತ್ರ ಪೋಲೆಂಡ್ ಹೇಳಿದ ನಂತರ ತುರ್ತು ಸಮಾಲೋಚನೆಗಾಗಿ ಇಂಡೋನೇಷ್ಯಾದಲ್ಲಿ ಜಿ7 ಮತ್ತು ನ್ಯಾಟೋ ನಾಯಕರ ತುರ್ತು ಸಭೆಯನ್ನು ಬೈಡೆನ್ ಕರೆದಿದ್ದರು.
ತನ್ನ ಭೂಪ್ರದೇಶದ ಮೇಲೆ ದಾಳಿ ಮಾಡಿದ ಕ್ಷಿಪಣಿಯಲ್ಲಿ "ನಿಖರವಾಗಿ ಏನಾಯಿತು" ಎಂದು ತನಿಖೆ ಮಾಡಲು ಪೋಲೆಂಡ್‌ಗೆ ಬೆಂಬಲ ನೀಡುವುದಾಗಿ ಬೈಡೆನ್ ಹೇಳಿದ್ದಾರೆ. ಕ್ಷಿಪಣಿಯ ಪಥವನ್ನು ಉಲ್ಲೇಖಿಸಿರುವ ಅವರು ಇದು ಬಹುಶಃ "ರಷ್ಯಾದಿಂದ" ಹಾರಿಸಿದ ಕ್ಷಿಪಣಿಯಾಗಿಲ್ಲ ಎನ್ನುವುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗುತ್ತಿದೆ ಎಂದಿದ್ದಾರೆ. "ಪಶ್ಚಿಮ ಉಕ್ರೇನ್‌ನಲ್ಲಿ ಸ್ಕೋರ್‌ಗಳು ಮತ್ತು ಸ್ಕೋರ್‌ಗಳ ಕ್ಷಿಪಣಿ ದಾಳಿಗಳು ನಡೆದಿವೆ. ಈ ಕ್ಷಣದಲ್ಲಿ ನಾವು ಪ್ರಾರಂಭದಿಂದಲೂ ಇದ್ದಂತೆ ಈಗಲೂ ಉಕ್ರೇನ್‌ಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ. ನಾವು ಅವರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ನೀಡಲು ಏನು ಬೇಕಾದರೂ ಮಾಡುತ್ತೇವೆ," ಬೈಡೆನ್ ಹೇಳಿದರು.
ಪ್ರಾಥಮಿಕ ತನಿಖೆಯ ಮಾಹಿತಿಯ ಪ್ರಕಾರ, ಅಂದರೆ ಕ್ಷಿಪಣಿಯ ಪಥವನ್ನು ನೋಡಿದರೆ, ರಷ್ಯಾದಿಂದ ಉಡಾವಣೆ ಆದ ಹಾಗೆ ಕಾಣುವುದಿಲ್ಲ ಎಂದು ಬೈಡೆನ್ ಹೇಳಿದ್ದಾರೆ. 2 ಜನರನ್ನು ಕೊಂದ ಕ್ಷಿಪಣಿಯನ್ನು ಯಾವ ದೇಶ ಹಾರಿಸಿದೆ ಎನ್ನುವುದಕ್ಕೆ ಇನ್ನೂ ಯಾವುದೇ 'ಸ್ಪಷ್ಟ ಪುರಾವೆ' ಇಲ್ಲ ಎಂದು ಪೋಲೆಂಡ್ ಅಧ್ಯಕ್ಷ ಆಂಡ್ರೆಜ್ ಡುಡಾ ಹೇಳಿದ್ದಾರೆ. ಆದರೆ ಪೋಲೆಂಡ್‌ನ ವಿದೇಶಾಂಗ ಸಚಿವಾಲಯವು ರಷ್ಯಾ ನಿರ್ಮಿತ ರಾಕೆಟ್ ತನ್ನ ಭೂಪ್ರದೇಶಕ್ಕೆ ದಾಳಿ ಮಾಡಿದೆ ಎಂದು ದೃಢಪಡಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಹಾಗಿದ್ದರೂ "ರಷ್ಯನ್ ನಿರ್ಮಿತ" ಕ್ಷಿಪಣಿಯ ದಾಳಿಯ ನಂತರ ಪೊಲೆಂಡ್ ದೇಶವು ತನ್ನ ಸೇನೆಯನ್ನು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಹೇಳಿದೆ. ಪೋಲೆಂಡ್‌ನ ಪೂರ್ವದ ಹಳ್ಳಿಯಾದ ಪ್ರಜೆವೊಡೋವ್‌ನಲ್ಲಿ ಕ್ಷಿಪಣಿ ದಾಳಿಯಿಂದ ಇಬ್ಬರು ಸಾವು ಕಂಡಿದ್ದಾರೆ.
ಶುರುವಾಗುತ್ತಾ 3ನೇ ಮಹಾಯುದ್ಧ..? ಪೋಲೆಂಡ್ ಮೇಲೂ ರಷ್ಯಾ ಕ್ಷಿಪಣಿ ದಾಳಿ; ಇಬ್ಬರು ಬಲಿ
ಕೆಲ ಗಂಟೆಗಳ ನಂತರ, ಪೋಲೆಂಡ್‌ನ ವಿದೇಶಾಂಗ ಇಲಾಖೆಯ ಈ ಕುರಿತಾಗಿ ಹೇಳಿಕೆಯನ್ನು ಪ್ರಕಟಿಸಿದೆ. ಅದರಲ್ಲಿ, ಕ್ಷಿಪಣಿ ದಾಳಿಯ ವಿಚಾರವಾಗಿ ರಷ್ಯಾದ ರಾಯಭಾರಿಗೆ ಸಮನ್ಸ್ ನೀಡಲಾಗಿತ್ತು. ತಕ್ಷಣವೇ ಈ ಕುರಿತಾದ ವಿವರವಾದ ವರದಿ ನೀಡುವಂತೆ ಅವರಿಗೆ ಸೂಚಿಸಲಾಗಿತ್ತು ಎಂದಿದೆ.
G - 20 Summit: ಪ್ರಧಾನಿ ಮೋದಿಗೆ ಹಸ್ತಲಾಘವ ಮಾಡಲು ಹಿಂದೆ ಹಿಂದೆ ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್: ವಿಡಿಯೋ ನೋಡಿ..
ಈ ನಡುವೆ ಪೋಲೆಂಡ್‌ನ ಪ್ರಧಾನಮಂತ್ರಿ ದೇಶದ ನಾಗರಿಕರಿಗೆ ತಾಳ್ಮೆಯಿಂದ ಇರುವಂತೆ ಹೇಳಿದ್ದಾರೆ. ಇಬ್ಬರ ಸಾವಿಗೆ ಕಾರಣವಾದ ಕ್ಷಿಪಣಿ ದಾಳಿಯ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಕಿ, ಪೋಲೆಂಡ್ ಅಧ್ಯಕ್ಷ ಡುಡಾಗೆ ಸಂತಾಪ ಸಲ್ಲಿಸಿದ್ದಾರೆ.