ಒಡೆಸ್ಸಾ ಮೃಗಾಲಯದ ಬೆಕ್ಕು-ಕುರಿಮರಿ ಜೋಡಿಗೆ 'ಕಪಲ್ ಆಫ್ ದಿ ಇಯರ್' ಪ್ರಶಸ್ತಿ

Published : Feb 19, 2025, 02:55 PM ISTUpdated : Feb 19, 2025, 03:36 PM IST
ಒಡೆಸ್ಸಾ ಮೃಗಾಲಯದ ಬೆಕ್ಕು-ಕುರಿಮರಿ ಜೋಡಿಗೆ 'ಕಪಲ್ ಆಫ್ ದಿ ಇಯರ್' ಪ್ರಶಸ್ತಿ

ಸಾರಾಂಶ

ಒಡೆಸ್ಸಾ ಮೃಗಾಲಯದ 'ಕಪಲ್ ಆಫ್ ದಿ ಇಯರ್' ಸ್ಪರ್ಧೆಯಲ್ಲಿ ಬೆಕ್ಕು ಮತ್ತು ಕುರಿಮರಿ ಜಯಗಳಿಸಿವೆ. ಮಸಾಜಿಕ್ ಎಂಬ ಬೆಕ್ಕು ಮತ್ತು ಬಾಗಲ್ ಎಂಬ ಕುರಿಮರಿ ಹಲವು ಪ್ರಾಣಿ ಜೋಡಿಗಳನ್ನು ಸೋಲಿಸಿ ಈ ಪ್ರಶಸ್ತಿ ಪಡೆದಿವೆ. ಈ ವಿಶಿಷ್ಟ ಜೋಡಿಯನ್ನು ನೋಡಲು ಮೃಗಾಲಯ ಸಂದರ್ಶಕರನ್ನು ಆಹ್ವಾನಿಸಿದೆ.

ಯುಕ್ರೇನ್‌ನ ಒಡೆಸ್ಸಾ ಮೃಗಾಲಯ ತಮ್ಮ 'ಕಪಲ್ ಆಫ್ ದಿ ಇಯರ್' ಸ್ಪರ್ಧೆಯ ವಿಜೇತರನ್ನು ಘೋಷಿಸಿದೆ. ಒಂದು ಬೆಕ್ಕು ಮತ್ತು ಕುರಿಮರಿ ಈ ವರ್ಷದ ಪ್ರಶಸ್ತಿಯನ್ನು ಗೆದ್ದಿವೆ. ಕೋತಿಗಳು, ಹುಲಿಗಳು, ಮುಳ್ಳುಹಂದಿಗಳು ಸೇರಿದಂತೆ ಹಲವು ಪ್ರಾಣಿ ಜೋಡಿಗಳನ್ನು ಸೋಲಿಸಿ ಮಸಾಜಿಕ್ ಎಂಬ ಬೆಕ್ಕು ಮತ್ತು ಬಾಗಲ್ ಎಂಬ ಕುರಿಮರಿ ಈ ಪ್ರಶಸ್ತಿ ಪಡೆದಿವೆ. 

 ಒಡೆಸ್ಸಾ ಮೃಗಾಲಯ ಈ ವಾರದ ಆರಂಭದಲ್ಲಿ ಫೈನಲಿಸ್ಟ್‌ಗಳನ್ನು ಪರಿಚಯಿಸುವ ಯೂಟ್ಯೂಬ್ ವಿಡಿಯೋವನ್ನು ಮೃಗಾಲಯ ಬಿಡುಗಡೆ ಮಾಡಿತ್ತು. ಸ್ಪರ್ಧೆಯ ವಿಜೇತರನ್ನು ಕುತೂಹಲದಿಂದ ಎದುರು ನೋಡುತ್ತಿದ್ದ ಪ್ರಾಣಿ ಪ್ರಿಯರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಫಲಿತಾಂಶ ತಿಳಿಸಲಾಗಿದೆ. ಅದರಲ್ಲಿ ಬೆಕ್ಕು ಮತ್ತು ಕುರಿಯ ಜೋಡಿ ಈ ವರ್ಷದ ಅತ್ಯುತ್ತಮ ಜೋಡಿ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ

ಒಡೆಸ್ಸಾ ಮೃಗಾಲಯದ ಸಾಮಾಜಿಕ ಜಾಲತಾಣದ ಪೋಸ್ಟ್ ಹೀಗದೆ ನೋಡಿ.. 'ಕಪಲ್ ಆಫ್ ದಿ ಇಯರ್ - 2025' ಸ್ಪರ್ಧೆ ಮುಕ್ತಾಯಗೊಂಡಿದೆ. ಈ ವರ್ಷದ ವಿಜೇತರು ಬಾಗಲ್ ಎಂಬ ಕುರಿಮರಿ ಮತ್ತು ಮಸಾಜಿಕ್ ಎಂಬ ಬೆಕ್ಕಿನಮರಿ. ಈ ಎರಡು ವಿಭಿನ್ನ ಪ್ರಾಣಿಗಳ ನಡುವಿನ ಇಂತಹ ಸ್ನೇಹ ಒಡೆಸ್ಸಾ ಮೃಗಾಲಯದಲ್ಲಿ ಮಾತ್ರ ಸಾಧ್ಯ. ವಿಜೇತರನ್ನು ನೋಡಲು ಮತ್ತು ಅಭಿನಂದಿಸಲು ನಾವು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇವೆ' ಎಂದು ಬರೆದುಕೊಂಡಿದೆ.

ಇದನ್ನೂ ಓದಿ: ಹುಲಿ ಮೂತ್ರ ಮಾರಾಟ ಮಾಡಿದ ಮೃಗಾಲಯ: ಸಂಧಿವಾತಕ್ಕೆ ರಾಮಬಾಣವೆಂದು ಜನರಿಗೆ ವಂಚನೆ?

ಈ ಮೃಗಾಲಯದಲ್ಲಿ 'ಮಸಾಜ್ ಥೆರಪಿಸ್ಟ್' ಎಂಬ ಹೆಸರಿನಿಂದ ಮಸಾಜಿಕ್ ಬೆಕ್ಕು ಮೃಗಾಲಯದಲ್ಲಿ ಪ್ರಸಿದ್ಧವಾಗಿದೆ. ಏಕೆಂದರೆ ಈ ಬೆಕ್ಕು ಯಾವಾಗಲೂ ಬಾಗಲ್‌ ಕುರಿಯ ಬೆನ್ನ ಮೇಲೆ ಕೂತಿರುತ್ತದೆ. ಇದು ಮೃಗಾಲಯದ ಸಿಬ್ಬಂದಿ ಮತ್ತು ಸಂದರ್ಶಕರಿಗೆ ಚಿರಪರಿಚಿತ ದೃಶ್ಯವಾಗಿದೆ. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ವ್ಯಾಲೆಂಟೈನ್ಸ್ ಡೇ ಕಾತರ್ಯಕ್ರಮ ನಡೆದ ಸಮಾರಂಭದಲ್ಲಿ ಇವರಿಬ್ಬರಿಗೂ ಅಧಿಕೃತವಾಗಿ 'ಕಪಲ್ ಆಫ್ ದಿ ಇಯರ್' ಪ್ರಶಸ್ತಿ ನೀಡಲಾಯಿತು. ಒಡೆಸ್ಸಾ ಮೃಗಾಲಯದಲ್ಲಿ ಈ ಸ್ಪರ್ಧೆ ಪ್ರತಿ ವರ್ಷ ನಡೆಯುತ್ತದೆ. ಕಳೆದ ವರ್ಷದ ವಿಜೇತರು ಒಂದು ಜೋಡಿ ಆಡುಗಳಾಗಿದ್ದವು ಎಂದು ಮೃಗಾಲಯ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ
ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ