ಎಲಾನ್ ಮಸ್ಕ್‌ ಪತ್ನಿ, ಗೆಳತಿಯರು ಮತ್ತು 13 ಮಕ್ಕಳ ರಹಸ್ಯ; ಉದ್ಯಮಿಯ ಖಾಸಗಿ ಜೀವನ ಫುಲ್ ಸಸ್ಪೆನ್ಸ್

Published : Feb 19, 2025, 12:27 PM ISTUpdated : Feb 20, 2025, 10:44 AM IST
ಎಲಾನ್ ಮಸ್ಕ್‌ ಪತ್ನಿ, ಗೆಳತಿಯರು ಮತ್ತು 13 ಮಕ್ಕಳ ರಹಸ್ಯ; ಉದ್ಯಮಿಯ ಖಾಸಗಿ ಜೀವನ ಫುಲ್ ಸಸ್ಪೆನ್ಸ್

ಸಾರಾಂಶ

Elon Musk And 13 Children: ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ 13 ಮಕ್ಕಳ ತಂದೆಯಾಗಿದ್ದಾರೆ. ಮೂವರು ಪತ್ನಿಯರು ಮತ್ತು ಒಬ್ಬ ಗೆಳತಿಯಿಂದ ಈ ಮಕ್ಕಳಿದ್ದಾರೆ.

ವಾಷಿಂಗ್ಟನ್: ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ 13 ಮಕ್ಕಳ ತಂದೆಯಾಗಿದ್ದಾರೆ. ಮೊದಲ ಪತ್ನಿ ಜಸ್ಟಿನ್ ವಿಲ್ಸನ್ ಅವರಿಗೆ 6 ಮಕ್ಕಳು, ಮಾಜಿ ಗೆಳತಿ ಗ್ರಿಮ್ಸ್ ಅವರಿಗೆ 3 ಮಕ್ಕಳು ಮತ್ತು  ನ್ಯೂರಾಲಿಂಕ್ ಕಾರ್ಯನಿರ್ವಾಹಕ ಶಿವೋನ್ ಜೆಲಿಸ್ ಅವರಿಗೆ 3 ಮಕ್ಕಳು ಮತ್ತು ಲೇಖಕಿ ಆಶ್ಲೇ ಸೇಂಟ್ ಕ್ಲೇರ್ ಅವರಿಗೆ 1 ಮಗ ಸೇರಿದಂತೆ ಒಟ್ಟು 13 ಮಕ್ಕಳನ್ನು ಎಲಾನ್ ಮಸ್ಕ್ ಹೊಂದಿದ್ದಾರೆ. 

ಜನವರಿ-2000ರಲ್ಲಿ ಕೆನಡಾದ ಲೇಖಕಿ ಜಸ್ಟಿನ್ ವಿಲ್ಸನ್ ಎಂಬವರನ್ನು ಎಲಾನ್ ಮಸ್ಕ್ ಮದುವೆಯಾಗಿದ್ದರು. 2002ರಲ್ಲಿ ಗಂಡು ಮಗುವನ್ನು ದಂಪತಿ ಬರಮಾಡಿಕೊಂಡಿದ್ದರು. ಆದ್ರೆ 10 ವಾರಗಳಲ್ಲಿ ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ಮೊದಲ ಮಗುವಿನ ಸಾವಿನ ಬಳಿಕ ಮಸ್ಕ್ ಮತ್ತು ಜಸ್ಟಿನ್ ಐವಿಎಫ್‌ ಮೂಲಕ ಏಪ್ರಿಲ್ 2004ರಲ್ಲಿ ಗ್ರಿಫಿನ್ ಮತ್ತು ವಿವೈನ್ ಎಂಬ ಅವಳಿ ಮಕ್ಕಳನ್ನು ಸ್ವಾಗತಿಸಿಕೊಂಡರು. 2006ರಲ್ಲಿ ಎಲಾನ್ ಮಸ್ಕ್ ಮತ್ತು ಜಸ್ಟಿನ್ ಮತ್ತೆ ಐವಿಎಫ್ ಮೂಲಕ ಕಾಯ್, ಸ್ಯಾಕ್ಸನ್ ಮತ್ತು ಡಮಿಯಾನ್ ಎಂಬ ತ್ರಿವಳಿ ಮಕ್ಕಳಿಗೆ ಪೋಷಕರಾದರು. 2008ರಲ್ಲಿ ಎಲಾನ್ ಮಸ್ಕ್ ಮತ್ತು ಜಸ್ಟಿನ್ ಡಿವೋರ್ಸ್ ಪಡೆದುಕೊಂಡು ದೂರವಾದರು. 

ಡಿವೋರ್ಸ್ ಬಳಿಕ ಒಂಟಿಯಾದ ಎಲಾನ್ ಮಸ್ಕ್ 2018ರಲ್ಲಿ ಗಾಯಕಿ ಗ್ರಿಮ್ಸ್ ಅವರೊಂದಿಗೆ ಡೇಟಿಂಗ್ ಮಾಡಲು ಆರಂಭಿಸಿದರು. ಮದುವೆಗೂ ಮೊದಲೇ ಗ್ರಿಮ್ಸ್ ಅವರೊಂದಿಗೆ 2020ರಲ್ಲಿ , X AE A-XII ಹೆಸರಿನ ಮಗುವನ್ನು ಪಡೆದರು. ಕ್ಯಾಲಿಪೋರ್ನಿಯಾ ನಿಯಮಗಳ ಪ್ರಕಾರ, "Æ" or "12" ಬಳಕೆ ಇಲ್ಲದ ಕಾರಣ  ಹೆಸರನ್ನು ಬದಲಾಯಿಸಲಾಯ್ತು. ವೈಯಕ್ತಿಕ ಕಾರಣಗಳಿಂದಾಗಿ ಮಸ್ಕ್ ಮತ್ತು ಗ್ರಿಮ್ಸ್ ಬೇರ್ಪಟ್ಟರು. ಅಂದಿನಿಂದ ಇಬ್ಬರ ಸಂಬಂಧ ಸಾಕಷ್ಟು ಚರ್ಚೆಯಲ್ಲಿದೆ. ಡಿಸೆಂಬರ್ 2021ರಲ್ಲಿ ಬಾಡಿಗೆ ತಾಯಿ ಮೂಲಕ ಎಲಾನ್ ಮಸ್ಕ್ ಮತ್ತು ಗ್ರಿಮ್ಸ್ ಹೆಣ್ಣು ಮಗು ಪಡೆದುಕೊಂಡರು. ನಂತರ ಗ್ರಿಮ್ಸ್ ಮತ್ತು ಎಲಾನ್ ಮಸ್ಕ್ ಮತ್ತೊಂದು ಮಗುವನ್ನು ಬರಮಾಡಿಕೊಂಡರು. 

ಇದನ್ನೂ ಓದಿ: ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಜೀವನದ ಇಂಟರ್‌ಸ್ಟಿಂಗ್ ವಿಷಯಗಳು

ನವೆಂಬರ್ 2021ರಲ್ಲಿ ನ್ಯೂರಾಲಿಂಕ್ ಕಾರ್ಯನಿರ್ವಾಹಕ ಶಿವೋನ್ ಜೆಲಿಸ್ ಅವರಿಂದ ಅವಳಿ ಮಕ್ಕಳ ತಂದೆಯಾದರು. ಅವಳಿ ಮಕ್ಕಳ ಹೆಸರು ಬದಲಾವಣೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.  ಮೇ 2022 ರಲ್ಲಿ ಟೆಕ್ಸಾಸ್ ನ್ಯಾಯಾಧೀಶರು ಬದಲಾವಣೆಗೆ ಅನುಮೋದಿಸಿದ ನಂತರ ಸ್ಟ್ರೈಡರ್ ಮತ್ತು ಅಜುರೆ ಎಂಬ ಹೆಸರುಗಳನ್ನು ಸೆಪ್ಟೆಂಬರ್ 2023 ರಲ್ಲಿ ಬಹಿರಂಗಪಡಿಸಲಾಯಿತು. 2024ರಲ್ಲಿ 12ನೇ ಮಗು ಬರಮಾಡಿಕೊಂಡಿರುವ ವಿಷಯವನ್ನು ಎಲಾನ್ ಮಸ್ಕ್ ಹಂಚಿಕೊಂಡಿದ್ದರು. ಆದ್ರೆ ಮಗುವಿನ ಹೆಸರು ಮತ್ತು ಗಂಡೋ ಅಥವಾ ಹೆಣ್ನೋ ಎಂಬುದನ್ನು ಬಹಿರಂಗಪಡಿಸಿರಲಿಲ್ಲ. 

ಫೆಬ್ರವರಿ 2025ರಲ್ಲಿ ಬರಹಗಾರ್ತಿ ಆಶ್ಲೇ ಸೇಂಟ್ ಕ್ಲೇರ್ ಅವರು  ಎಲಾನ್ ಮಸ್ಕ್ ಅವರ ಮಗುವಿಗೆ ಜನ್ಮ ನೀಡಿರೋದಾಗಿ  ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.  ಆಶ್ಲೇ ಸೇಂಟ್ ಕ್ಲೇರ್,'ಐದು ತಿಂಗಳ ಹಿಂದೆ, ನಾನು ಈ ಜಗತ್ತಿಗೆ ಹೊಸ ಮಗುವಿಗೆ ಜನ್ಮ ನೀಡಿದೆ ಮತ್ತು ಎಲೋನ್ ಮಸ್ಕ್ ಈ ಮಗುವಿನ ತಂದೆ'ಯಾಗಿದ್ದಾರೆ ಎಂದು ಬರೆದುಕೊಂಡು ಈ ವಿಷಯವನ್ನು ರಿವೀಲ್ ಮಾಡಿದ್ದರು. ನಮ್ಮ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಗಾಗಿ ನಾನು ಇಲ್ಲಿಯವರೆಗೆ ಇದನ್ನು ಸಾರ್ವಜನಿಕಗೊಳಿಸಿರಲಿಲ್ಲ ಎಂಬ ವಿಷಯವನ್ನುತಿಳಿಸಿದ್ದರು.

ಇದನ್ನೂ ಓದಿ: ತನ್ನ 11 ಮಕ್ಕಳು, ಪತ್ನಿಯರ ಒಂದೇ ಸೂರಿನಡಿ ತರಲು 294 ಕೋಟಿ ರೂ ಮನೆ ಖರೀದಿಸಿದ ಮಸ್ಕ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ ನೆರೆಹೊರೆಯಲ್ಲಿ ಯುದ್ಧದ ಭೀತಿ, ರಷ್ಯಾ-ಚೀನಾ ಪರ; ಯುಎಸ್‌ನಿಂದ B-52 ಬಾಂಬರ್‌ ಹಾರಾಟ!
ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ