
ಒಟ್ಟಾವಾ(ಡಿ.26): ಆಗಾಗ್ಗೆ ಪಶ್ಚಿಮದ ರಾಷ್ಟ್ರಗಳನ್ನು ಪರಸ್ಪರ ಎತ್ತಿಕಟ್ಟುವ ನಾಟಕವಾಡುತ್ತಿರುವ ಚೀನಾದ ವಿರುದ್ಧ ಪಶ್ಚಿಮ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕಾದ ಅಗತ್ಯವಿದೆ ಎಂದು ಕೆನಡಾದ (Canada) ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ (Justin Trudeau)ಇ ತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಚೀನಾದ (China) ಹೆಚ್ಚಿನ ಬಲವಂತದ ರಾಜತಾಂತ್ರಿಕತೆ ವಿರುದ್ಧ ಸಮಾನ ಮನಸ್ಕ ರಾಷ್ಟ್ರಗಳು ಒಟ್ಟಾಗಬೇಕು ಎಂದು ಕೆನಡಾದ ಟೆಲಿವಿಷನ್ ನೆಟ್ ವರ್ಕ್ ಗ್ಲೋಬಲ್ ಟೆಲಿವಿಷನ್ ಗೆ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಟ್ರುಡೊ ಹೇಳಿದ್ದಾರೆ.
ನಾವು ಒಟ್ಟಾಗಿ ಅತ್ಯುತ್ತಮವಾದ ಕೆಲಸ ಮಾಡಬೇಕಾದ ಅಗತ್ಯವಿದೆ ಮತ್ತು ದೃಢವಾಗಿ ನಿಲ್ಲಬೇಕಾಗಿದೆ. ಇದರಿಂದ ಚೀನಾ ನಾಟಕ ವಾಡಲು ಸಾಧ್ಯವಿಲ್ಲ ಮತ್ತು ನಮ್ಮಲ್ಲಿಯೇ ಪರಸ್ಪರ ಎತ್ತಿಕಟ್ಟಿ ವಿಭಜಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾವು ಸ್ಪರ್ಧೆ ನೀಡುವಂತಹರಾಗಿದ್ದು, ಮುಕ್ತ ಮಾರುಕಟ್ಟೆ ಹಾದಿಯಲ್ಲಿ ಚೀನಾ ಸಮಯಕ್ಕೆ ತಕ್ಕಂತೆ ನಮ್ಮಲ್ಲಿಯೇ ಪರಸ್ಪರ ಎತ್ತಿಕಟ್ಟುವ ನಾಟಕವಾಡುತ್ತಿದೆ. ನಾವುಗಳು ಅತ್ಯುತ್ತಮವಾಗಿ ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಮತ್ತು ಸದೃಢವಾಗಿ ನಿಲ್ಲಬೇಕಾಗಿದೆ. ಇದರಿಂದ ಚೀನಾ ನಮ್ಮನ್ನು ವಿಭಜಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
KAMALA HARRIS UNTOLD STORY: ಕಮಲಾ ಹ್ಯಾರಿಸ್ ಅಸಾಧಾರಣ ಸಾಧನೆ ಚಿತ್ರಣ!
ಕಳೆದ ಕೆಲವು ವರ್ಷಗಳಿಂದ, ಚೀನಾದೊಂದಿಗಿನ ಕೆನಡಾದ ಸಂಬಂಧಗಳು ಹದಗೆಟ್ಟಿದೆ. 2018 ರಲ್ಲಿ ವ್ಯಾಂಕೋವರ್‌ನಲ್ಲಿ ಚೀನಾದ ಪ್ರಜೆಯಾದ ಹುವಾವೇ ಮುಖ್ಯ ಹಣಕಾಸು ಅಧಿಕಾರಿ ಮೆಂಗ್ ವಾನ್‌ಝೌ ಅವರನ್ನು ಬಂಧಿಸಿದ ನಂತರ ಈ ಅಪಶ್ರುತಿ ಪ್ರಾರಂಭವಾಯಿತು. ಘಟನೆಯ ನಂತರ, ಚೀನಾ ಇಬ್ಬರು ಕೆನಡಿಯನ್ನರನ್ನು ಬಂಧಿಸಿತು. ಈ ಕ್ರಮವು ಮೆಂಗ್ ಬಂಧನಕ್ಕೆ ಪ್ರತೀಕಾರವಾಗಿ ಕಂಡಿತು. ಮೆಂಗ್ ಅಂತಿಮವಾಗಿ US ಪ್ರಾಸಿಕ್ಯೂಟರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದರು. ನಂತರ ಇಬ್ಬರು ಕೆನಡಾದ ಪ್ರಜೆಗಳನ್ನು ಚೀನಾ ಬಿಟ್ಟಿತು.
Singer Bitten By Snake: ಎದೆಮೇಲೆ ಕರಿಹಾವು ಮಲಗಿಸಿ ಶೂಟಿಂಗ್, ಗಾಯಕಿಯ ಮುಖಕ್ಕೆ ಕಚ್ಚಿತು
ಈ ತಿಂಗಳ ಆರಂಭದಲ್ಲಿ 2022ರ ಬೀಜಿಂಗ್ ಒಲಿಂಪಿಕ್ಸ್ (Beijing Olympic) ಮತ್ತು ಪ್ಯಾರಾಲಿಂಪಿಕ್ಸ್ (Paralympic) ಗೇಮ್ಸ್ ಗಾಗಿ ರಾಜತಾಂತ್ರಿಕತೆಯನ್ನು ಬಹಿಷ್ಕರಿಸಿ ಕೆನಡಾ ಪ್ರಧಾನಿ ಘೋಷಿಸಿದ್ದರು. ಚೀನಾದಲ್ಲಿ ಮಾನವ ಹಕ್ಕು ಉಲ್ಲಂಘನೆ ವರದಿಯಿಂದ ಕೆನಡಾ ಅಸಮಾಧಾನಗೊಂಡಿದ್ದು, ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಗೇಮ್ಸ್ ಗಾಗಿ ರಾಜತಾಂತ್ರಿಕ ಪ್ರತಿನಿಧಿಗಳನ್ನು ಬೀಚಿಂಗ್ ಗೆ ಕಳುಹಿಸುವುದಿಲ್ಲ , ಈ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಲು ಬೆಂಬಲವನ್ನು ಮುಂದುವರೆಸುವುದಾಗಿ ಟ್ರುಡೋ ಹೇಳಿದ್ದರು.
China Population: ಚೀನಾದಲ್ಲಿ ಮಕ್ಕಳ ಹೊಂದುವ ದಂಪತಿಗೆ ಸಾಲದ ಆಫರ್!
ಮಾತ್ರವಲ್ಲ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಕೆಲ ರಾಷ್ಟ್ರಗಳು ಬೀಜಿಂಗ್ ಕೂಟಕ್ಕೆ ರಾಜತಾಂತ್ರಿಕ ಅಧಿಕಾರಿಗಳನ್ನು ಕಳಿಸುವುದಿಲ್ಲ ಎಂದು ಈ ಬಗ್ಗೆ ತನ್ನ ನಿಲುವನ್ನು ಹೇಳಿಕೊಂಡಿದೆ. ಮಾತ್ರವಲ್ಲ ಚೀನಾ ವಾಯುವ್ಯ ಭಾಗದ ಕ್ಸಿನ್‌ಝಿಯಾಂಗ್ ಪ್ರಾಂತ್ಯದಲ್ಲಿ ಉಯಿಘರ್ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮಾನವ ಹಕ್ಕು ಸಂಘಟನೆಗಳು ಚಳಿಗಾಲದ ಒಲಿಂಪಿಕ್ಸ್‌ಗೆ ಪೂರ್ಣ ಪ್ರಮಾಣದಲ್ಲಿ ಬಹಿಷ್ಕಾರ ಹಾಕುವಂತೆ ಕರೆ ನೀಡಿವೆ.
Imran Khan Indian Puppet: ನಾನು ಇಮ್ರಾನ್ ಖಾನ್ ಆತ್ಮಹತ್ಯೆ ನೋಡಲು ಕಾಯುತ್ತಿದ್ದೇನೆ ಎಂದ ನವಾಜ್ ಷರೀಫ್
ಚೀನಾದಲ್ಲಿ ಮಕ್ಕಳ ಹೊಂದುವ ದಂಪತಿಗೆ ಸಾಲದ ಆಫರ್! : ಚೀನಾದ ಜಿಲಿನ್ ಪ್ರಾಂತ್ಯದಲ್ಲಿ ಜನಸಂಖ್ಯೆ ಇತರ ಎಲ್ಲಾ ಪ್ರಾಂತ್ಯಗಳಿಗಿಂತ ವೇಗವಾಗಿ ಕುಸಿಯುತ್ತಿದೆ. ಹೀಗಾಗಿ ಇಲ್ಲಿ ಜನಸಂಖ್ಯೆಯನ್ನು ಹೆಚ್ಚಳ ಮಾಡಲು ದಂಪತಿಗೆ ಸುಮಾರು 23.5 ಲಕ್ಷ ರು. ಸಾಲ ಸೌಲಭ್ಯ ನೀಡಲು ಆಸಕ್ತಿ ತೋರಿದೆ. ಸರ್ಕಾರ ಈ ಯೋಜನೆಯನ್ನು ಯಾವ ರೀತಿ ಜಾರಿಗೆ ತರುತ್ತದೆ ಎಂಬುದರ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡಿಲ್ಲ. ಆದರೆ ದಂಪತಿ ಹೊಂದುವ ಮಕ್ಕಳ ಆಧಾರದ ಮೇಲೆ ವಿವಿಧ ಬಡ್ಡಿದರಗಳಲ್ಲಿ ಬ್ಯಾಂಕುಗಳಿಂದ ಸಾಲ ಒದಗಿಸಬಹುದು ಎಂದು ಹೇಳಲಾಗಿದೆ. ಜನಸಂಖ್ಯೆ ಹೆಚ್ಚಳವನ್ನು ಪ್ರೋತ್ಸಾಹಿಸಲು ಈಗಾಗಲೇ ಜನಸಂಖ್ಯೆಗೆ ಸಂಬಂಧಿಸಿದ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ತಾಯ್ತನದ ರಜೆಯ ಅವಧಿಯನ್ನು ಹೆಚ್ಚಳ ಮಾಡಲಾಗಿದೆ. ಈ ಕೊಡುಗೆ ಕೇವಲ ಜಿಲಿನ್ ಪ್ರಾಂತ್ಯದವರಿಗೆ ಮಾತ್ರ ಅನ್ವಯವಾಗುವುದಿಲ್ಲ. ಹೊರಗಿನಿಂದ ಬಂದು ಜಿಲಿನ್‌ನಲ್ಲಿ ನೆಲೆಸಸುವ, ಜನಿಸುವ ಮಕ್ಕಳನ್ನು ಜಿಲಿನ್ ಪ್ರಾಂತ್ಯದಲ್ಲೇ ನೋಂದಣಿ ಮಾಡಿಸುವವರಿಗೂ ಈ ಸೌಲಭ್ಯ ಅನ್ವಯವಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ