
ಕ್ಯಾಲಿಫೋರ್ನಿಯಾ(ಜೂ.25): ಕೊರೋನಾ ಬಂದ ಮೇಲೆ ಜನ ಸಲೂನ್ ಮರೆತಿದ್ದರು. ತಾವೇ ಹೇರ್ ಕಟ್ಟಿಂಗ್, ಕಲರಿಂಗ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಆದರೆ ಇಲ್ಲೊಂದು ಸಲೂನ್ ಇದೆ. ಇಲ್ಲಿ ಗಂಟೆಗೆ ಚಾರ್ಜ್ ಮಾಡಲಾಗುತ್ತದೆ. ಹೀಗೆ ಯುವತಿಯೊಬ್ಬಳು ತನ್ನ ಹೇರ್ ಕಟ್ ಹಾಗೂ ಕಲರಿಂಗ್ ಮಾಡಲು ಬರೋಬ್ಬರಿ 1.44 ಲಕ್ಷ ರೂಪಾಯಿ ನೀಡಿದ್ದಾಳೆ.
ಕೂದಲು ಕತ್ತರಿಸಲು ಯಾವ ದಿನ ಸೂಕ್ತ ? ಶಾಸ್ತ್ರಗಳು ಏನು ಹೇಳುತ್ತವೆ?.
ಈ ದುಬಾರಿ ಹೇರ್ ಕಟ್ ಸಲೂನ್ ಇರುವುದು ಕ್ಯಾಲಿಫೋರ್ನಿಯಾದಲ್ಲಿ. ಮಹಿಳೆಯರ ಬ್ಯೂಟಿ ಸಲೂನ್ ನಡೆಸುತ್ತಿರುವ ಜಾಸ್ಮಿನ್ ಪೊಲಿಕಾರ್ಪೋ ಪ್ರತಿ ಗಂಟೆಗೆ 11,100 ರೂಪಾಯಿ ಚಾರ್ಜ್ ಮಾಡುತ್ತಾಳೆ. ನಿಮ್ಮ ಹೇರ್ ಕಟ್ಟಿಂಗ್, ಸ್ಟ್ರೈಟನಿಂಗ್, ಕಲರಿಂಗ್ ಸೇರಿದಂತೆ ಯಾವುದೇ ಬ್ಯೂಟಿ ವಿಚಾರಗಳಿದ್ದರೆ ಮಾಡಿಕೊಳ್ಳಬಹುದು. ಆದರೆ ಜಾಸ್ಮಿನ್ ಕನಿಷ್ಠ 5 ಗಂಟೆಯೊಳಗೆ ಯಾವುದೇ ಕಟ್ಟಿಂಗ್, ಕಲರಿಂಗ್ ಮಾಡಿದ ಊದಾಹರಣೆಗಳಿಲ್ಲ.
ಇತ್ತೀಚೆಗೆ ಜಾಸ್ಮಿನ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯುವತಿಯೋರ್ವಳು ತನ್ನು ಹೇರ್ ಕಟ್ ಹಾಗೂ ಕಲರಿಂಗ್ ಮಾಡಲು ಜಾಸ್ಮಿನ್ ಬಳಿ ತೆರಳಿದ್ದಾಳೆ. ಆಕೆಯ ಒಂದೊಂದೆ ಕೂದಲು ಕಟ್ ಮಾಡಿ ಬಳಿಕ ಕಲರಿಂಗ್ ಮಾಡಲು ಜಾಸ್ಮಿನ್‌ಗೆ 13 ಗಂಟೆಗಳು ಬೇಕಾಗಿದೆ.
ಕೂದಲ ಸೌಂದರ್ಯ ಹೆಚ್ಚುತ್ತೆ ಮುಖದ ಕಾಂತಿಯನ್ನು, ಏನು ಮಾಡಬೇಕು?._
ಗಂಟೆಗೆ ಚಾರ್ಜ್ ಮಾಡುವದರಿಂದ ಬಿಲ್ 1.44 ಲಕ್ಷ ರೂಪಾಯಿ ಆಗಿದೆ. ಹೇರ್ ಕಟ್ ಹಾಗೂ ಕಲರಿಂಗ್ ಮಾಡಿದ ಯುವತಿ ಖುಷಿ ಖುಷಿಯಿಂದ ಈ ವಿಚಾರವನ್ನು ಹೇಳಿಕೊಂಡಿದ್ದಾಳೆ. ಜಾಸ್ಮಿನ್ ಹೇರ್ ಕಟ್ಟಿಂಗ್, ಹೇರ್ ಕೇರಿಂಗ್ ಕ್ಯಾಲಿಫೋರ್ನಿಯಾದಲ್ಲಿ ಅತ್ಯಂತ ಜನಪ್ರಿಯಾಗಿದೆ. ಹೀಗಾಗಿ ಮಾಡೆಲ್ ಸೇರಿದಂತೆ ಹಲವರು ಈಕೆಯ ಸಲೂನ್‌ನಲ್ಲೇ ಹೇರ್ ಕಟ್ಟಿಂಗ್ ಮಾಡಲು ಕಾಯುತ್ತಾರೆ.
ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿರುವ ಈ ವಿಡಿಯೋಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕೊರೋನಾ ಕಾರಣ ಸಲೂನ್ ಬಂದ್ ಆಗಿರಬೇಕು, ಹೀಗಾಗಿ ಕಳೆದ ಒಂದು ವರ್ಷದ ಸಲೂನ್ ಬಾಡಿಗೆ, ಕರೆಂಟ್ ಬಿಲ್ ಎಲ್ಲಾ ಸೇರಿಸಿ ಹಾಕಿದ್ದಾರೆ ಎಂದು ಪ್ರತಿಕ್ರಿಸಿದ್ದಾರೆ. ಇನ್ನು ಕೆಲವರು ಐಫೋನ್‌ಗಿಂತ ದುಬಾರಿಯಾಯ್ತು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ