IPCC ವರದಿಯ ಪ್ರಕಾರ 2030ರ ವೇಳೆಗೆ ಹವಾಮಾನ ಬದಲಾವಣೆಯಿಂದಾಗಿ ವಿಶ್ವದ ಹಲವು ನಗರಗಳು ಮುಳುಗಡೆಯಾಗುವ ಅಪಾಯವಿದೆ. ಈ ಪಟ್ಟಿಯಲ್ಲಿ ಭಾರತದ ನಗರದ ಹೆಸರು ಸಹ ಇದೆ.
ನವದೆಹಲಿ: ನೀವು ವಾಸಿಸುತ್ತಿರುವ ಮನೆ, ಊರು ಇದ್ದಕ್ಕಿದ್ದಂತೆ ಇಲ್ಲವಾಗುತ್ತೆ ಅಂದ್ರೆ ಏನು ಮಾಡ್ತೀರಿ? ಇಂತಹ ಕಥೆಯನ್ನು ಹೊಂದಿರುವ ಹಾಲಿವುಡ್‌ನಲ್ಲಿ ಹಲವು ಸಿನಿಮಾಗಳು ತೆರೆಕಂಡಿವೆ. ಇದೀಗ 2030ರ ವೇಳೆಗೆ ವಿಶ್ವದ 10 ನಗರಗಳು ಮುಳುಗಡೆಯಾಗಲಿವೆ. ಹೀಗಂತ ಹೇಳುತ್ತಿರೋದು ನಾವಲ್ಲ. IPCCಯ ವರದಿ ಪ್ರಕಾರ, 2030ರ ವೇಳೆಗೆ ಭೂಮಿಯಲ್ಲಿ ಮಹತ್ವ ಪೂರ್ಣವಾದ ಬದಲಾಣೆಯಾಗುವ ಸಾಧ್ಯತೆಗಳಿವೆ. ಈ ವರದಿಯನ್ನು ಪರಿಗಣಿಸಿ ಹವಾಮಾನ ಬದಲಾವಣೆಗೆ ಬಗ್ಗೆ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲವಾದ್ರೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಗರಗಳು ಜಲಸಮಾಧಿಯಾಗಲಿವೆ ಎಂದು ಐಪಿಸಿಸಿ ಆತಂಕ ವ್ಯಕ್ತಪಡಿಸಿದೆ.
ಹೆಚ್ಚುತ್ತಿರುವ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದಿಂದಾಗಿ, 2030 ರ ವೇಳೆಗೆ ವಿಶ್ವದ ಅನೇಕ ನಗರಗಳು ಮುಳುಗಬಹುದು ಎಂದು ಐಪಿಸಿಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಐಪಿಸಿಸಿ ಹೇಳಿರುವ ಆ 10 ನಗರಗಳು ಯಾವವು? ಇದರಲ್ಲಿ ಭಾರತದ ನಗರವಿದೆಯಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
undefined
1.ಆಮ್ಸ್ಟರ್ಡ್ಯಾಮ್, ನೆದರ್ಲ್ಯಾಂಡ್ಸ್
ಸಮುದ್ರದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ನೀರು ನಗರ ಪ್ರದೇಶಕ್ಕೆ ಬರುವ ಸಾಧ್ಯತೆಗಳಿವೆ. ನೆದರ್ಲ್ಯಾಂಡ್ಸ್ ಅತಿ ಹೆಚ್ಚು ಆಣೆಕಟ್ಟುಗಳನ್ನು ಹೊಂದಿದೆ. ಹವಾಮಾನ ಬದಲಾವಣೆಯಿಂದ ಪ್ರಳಯ ಉಂಟಾಗುವ ಸಾಧ್ಯತೆಗಳಿರುತ್ತವೆ.
2.ನ್ಯೂ ಓರ್ಲಿಯನ್ಸ್, USA
ನ್ಯೂ ಓರ್ಲಿಯನ್ಸ್ ನೀರಿಗೆ ವಿರುದ್ಧವಾದ ರಕ್ಷಣಾತ್ಮಕ ಲೆವಿ ವ್ಯವಸ್ಥೆಯನ್ನು ಹೊಂದಿದೆ. ಈ ನಗರವು ಸಮುದ್ರಮಟ್ಟದಿಂದ ಕಡಿಮೆ ಎತ್ತರದಲ್ಲಿದೆ. ಇದರಿಂದ ನಗರವು ಅಪಾಯದಲ್ಲಿದೆ.
3.ಹೋ ಚಿ ಮಿನ್ಹ್ ಸಿಟಿ, ವಿಯೆಟ್ನಾಂ
ಹೋ ಚಿ ಮಿನ್ಹ್ ಸಿಟಿಯ ಪೂರ್ವ ಪ್ರದೇಶ ಹೆಚ್ಚು ಅಪಾಯದಲ್ಲಿದೆ. ಹೋ ಚಿ ಮಿನ್ಹ್ ಸಿಟಿಯ ಜೊತೆಯಲ್ಲಿ ಮೆಕಾಂಗ್ ಡೆಲ್ಟಾ ನಗರಗಳು ಅಪಾಯದಲ್ಲಿವೆ. ಇಡೀ ನಗರ ಕಣ್ಮರೆಯಾಗದಿದ್ದರೆ ಭಾರೀ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.
4.ವೆನಿಸ್, ಇಟಲಿ
ವೆನಿಸ್ ನಗರವು ಈಗಾಗಲೇ ಪ್ರವಾಹವನ್ನು ಎದುರಿಸುತ್ತಿದೆ. ಸಮುದ್ರದ ಆತಂಕ ಎದುರಿಸುತ್ತಿದ್ದು, ಮುಳುಗಡೆಯ ಅಪಾಯದಲ್ಲಿದೆ. ಇದು ವಾರ್ಷಿಕವಾಗಿ 2 ಮಿಲಿಮೀಟರ್ ದರದಲ್ಲಿ ಬೆಳೆಯುತ್ತಿದೆ.
5.ಬ್ಯಾಂಕಾಕ್, ಥೈಲ್ಯಾಂಡ್
ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ಅತ್ಯಂತ ವೇಗವಾಗಿ ಮುಳುಗುತ್ತಿರುವ ನಗರವಾಗಿದೆ. ಪ್ರತಿವರ್ಷ 2-3 ಸೆಂಮೀ ಮಳೆ ಏರಿಕೆಯಾಗುತ್ತಿದೆ. 2030ರ ವೇಳೆಗೆ ತೀವ್ರ ಪ್ರವಾಹದಲ್ಲಿ ಸಿಲುಕುವ ಈ ನಗರದ ಹಲವು ಪ್ರದೇಶಗಳು ಮುಳುಗಡೆಯಾಗಲಿವೆ. ಬ್ಯಾಂಕಾಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸವರ್ಣಭೂಮಿ ಏರ್‌ಪೋರ್ಟ್‌ಗಳು ಮುಳುಗಡೆಯಾಗಲಿವೆ.
6.ಮಾಲೆ, ಮಾಲ್ಡೀವ್ಸ್
ಇದೊಂದು ದ್ವೀಪವಾಗಿದ್ದು, ಸುತ್ತಲೂ ಸಮುದ್ರವಿದೆ. ಇಲ್ಲಿ ತೇಲುವ ನಗರವೊಂದನ್ನು ನಿರ್ಮಿಸಲಾಗುತ್ತಿದೆ. ವಿಮಾನ ನಿಲ್ದಾಣ ಸೇರಿದಂತೆ ಮಾಲ್ಡೀವ್ಸ್‌ನ ರಾಜಧಾನಿಯ ಸಹ ಸಮುದ್ರದ ಅಪಾಯದಲ್ಲಿದೆ.
ವಿಲ ವಿಲ ಒದ್ದಾಡುತ್ತಿರೋ ಮೀನುಗಳಿಗೆ ಉಪ್ಪು, ಹುಳಿ ಖಾರ ಹಾಕೊಂಡು ಗಬಗಬನೇ ಹೇಗೆ ತಿಂತಾರೆ ನೋಡಿ
7.ಬಸ್ರಾ, ಇರಾಕ್
ಶಟ್ ಅಲ್-ಅರಬ್ ನದಿ ಉದ್ದಕ್ಕೂ ಇರುವ ಇರಾಕ್‌ನ ಮುಖ್ಯ ಬಂದರು ನಗರವೇ ಬಸ್ರಾ. ಈ ನಗರದ ಸುತ್ತಲೂ ಕಾಲುವೆ, ತೊರೆಗಳು ಮತ್ತು ಜೌಗು ಪ್ರದೇಶದ ಹೊಂದಿರುವ ಕಾರಣ ಬಸ್ರಾ ಅಪಾಯದ ಸ್ಥಿತಿಯಲ್ಲಿದೆ.
8.ಸವನ್ನಾ, USA
ಈ ಪ್ರದೇಶವನ್ನು ಚಂಡಮಾರುತ ಪೀಡಿತ ಪ್ರದೇಶ ಎಂದು ಕರೆಯಲಾಗುತ್ತದೆ. ಉತ್ತರಕ್ಕೆ ಸವನ್ನಾ ನದಿ ಮತ್ತು ದಕ್ಷಿಣಕ್ಕೆ ಓಗೀಚೀ ನದಿಯನ್ನು ಈ ನಗರ ಹೊಂದಿದೆ.
9.ಭಾರತದ ಕೋಲ್ಕತ್ತಾ
ಇಲ್ಲಿ ಸದ್ಯ ಅಭಿವೃದ್ಧಿ ಕೆಲಸಗಳಿಂದ ಸುತ್ತಲಿನ ಫಲವತ್ತಾದ ಭೂಮಿಗೆ ಭಾರಿ ಹಾನಿಯಾಗುತ್ತಿದೆ. ಇದು ಹವಾಮಾನದ ಮೇಲೆ ಪರಿಣಾಮ ಬೀರುತ್ತಿದೆ. ಸಮುದ್ರ ಸಮೀಪದಲ್ಲಿಯೇ ಕೋಲ್ಕತ್ತಾ ಇರೋ ಕಾರಣ ಪದೇ ಪದೇ ಚಂಡಮಾರುತಕ್ಕೆ ಸಿಲುಕುತ್ತಿರುತ್ತದೆ.
10.ನಗೋಯಾ, ಜಪಾನ್
ಪುಟ್ಟ ದೇಶ ಜಪಾನ್ ಸುತ್ತಕಲೂ ಸಮುದ್ರವನ್ನೇ ಹೊಂದಿದೆ. ಪದೇ ಪದೇ ಭೂಕುಂಪ ಮತ್ತು ಪ್ರವಾಹಕ್ಕೆ ಸಿಲುಕುವ ನಗೋಯಾ ಅಪಾಯದ ಸ್ಥಿತಿಯಲ್ಲಿರುವ ನಗರವಾಗಿದೆ.
ಅರೆ ಬೆಂದ ಹಂದಿ ಮಾಂಸ ತಿಂದರೆ ಏನಾಗುತ್ತೆ? ಎಕ್ಸ್ ರೇ ನೋಡಿ ವೈದ್ಯರೇ ಬೆಚ್ಚಿಬಿದ್ದಿದ್ದು ಯಾಕೆ?