ತೀವ್ರ ಬರದಿಂದ ಬೇಸತ್ತ ನಮೀಬಿಯಾ: ಜನರ ಹಸಿವು ನೀಗಿಸಲು ಆನೆಗಳ ಹತ್ಯೆಗೆ ಮುಂದಾದ ಸರ್ಕಾರ

By Anusha Kb  |  First Published Sep 1, 2024, 1:19 PM IST

 ಕಳೆದ 100 ವರ್ಷಗಳಲ್ಲೇ ಕಂಡು ಕೇಳರಿಯದ ಬರಗಾಲಕ್ಕೆ ಆಫ್ರಿಕಾದ ನಮೀಬಿಯಾ ತುತ್ತಾಗಿದೆ. ಇದರಿಂದ ಬೆಳೆ ಬೆಳೆಯಲಾಗದೇ ತಿನ್ನಲು ಆಹಾರವಿಲ್ಲದೇ ಜನ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಜನರ ಜೀವ ಉಳಿಸುವುದಕ್ಕಾಗಿ ಪ್ರಾಣಿಗಳ ಹತ್ಯೆಗೆ ನಮೀಬಿಯಾ ಮುಂದಾಗಿದೆ.


ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದ ಹಲವು ದೇಶಗಳಲ್ಲಿ ವ್ಯಾಪಕ ಬರದಿಂದಾಗಿ ತಿನ್ನಲು ಅನ್ನ ಆಹಾರವಿಲ್ಲದೇ ಜನ ಹಸಿವೆಯಿಂದ ಸಾಯುವ ಸ್ಥಿತಿ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ಹಸಿವು ನೀಗಿಸುವ ಸಲುವಾಗಿ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದ ದೇಶಗಳ ಸರ್ಕಾರವೂ ಆನೆ, ಘೇಂಡಾಮೃಗ ಸೇರಿದಂತೆ ಕಾಡುಪ್ರಾಣಿಗಳನ್ನು ಹತ್ಯೆ ಮಾಡಿ ಅವುಗಳ ಮಾಂಸದಿಂದ ಜನರ ಹೊಟ್ಟೆ ತುಂಬಿಸಲು ಮುಂದಾಗಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಕಳೆದ 100 ವರ್ಷಗಳಲ್ಲೇ ಕಂಡು ಕೇಳರಿಯದ ಬರಗಾಲಕ್ಕೆ ಆಫ್ರಿಕಾದ ನಮೀಬಿಯಾ ತುತ್ತಾಗಿದೆ. ಇದರಿಂದ ಬೆಳೆ ಬೆಳೆಯಲಾಗದೇ ತಿನ್ನಲು ಆಹಾರವಿಲ್ಲದೇ ಜನ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಜನರ ಜೀವ ಉಳಿಸುವುದಕ್ಕಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. 

ಶತಮಾನದಲ್ಲೇ ಕಂಡು ಕೇಳರಿಯದ ಭೀಕರ ಬರಗಾಲಕ್ಕೆ ತುತ್ತಾಗಿರುವ ದಕ್ಷಿಣ ಆಫ್ರಿಕಾದ ನಮೀಬಿಯಾ ದೇಶವೂ ಆನೆಗಳು, ಘೇಂಡಾಮೃಗಗಳು ಸೇರಿದಂತೆ ಅಂದಾಜು 100 ಪ್ರಾಣಿಗಳನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದೆ. ನಮೀಬಿಯಾದ ಪರಿಸರ ಸಚಿವಾಲಯ ಹಾಗೂ ಅರಣ್ಯ ಹಾಗೂ ಪ್ರವಾಸೋದ್ಯಮ ಸಚಿವಾಲಯವೂ ಈ ವಾರದ ಆರಂಭದಲ್ಲೇ ಈ ವಿಚಾರದ ಬಗ್ಗೆ ಘೋಷಣೆ ಮಾಡಿದೆ. ನೀರು ಆಹಾರವಿಲ್ಲದೇ ಕಂಗಾಲಾಗಿರುವ ಜನರ ಹೊಟ್ಟೆ ತುಂಬಿಸಲು ಒಟ್ಟು 723 ಪ್ರಾಣಿಗಳ ಹತ್ಯೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಈ ಪಟ್ಟಿಯಲ್ಲಿ 30 ಘೇಂಡಾಮೃಗಗಳು, 60 ಎಮ್ಮೆಗಳು, 50 ಜಿಂಕೆಗಳು (impalas) 100 ನೀಲಿ ಹೇಸರಗತ್ತೆ(blue Wilderbeast) 300 ಜೀಬ್ರಾಗಳು ಹಾಗೂ 83 ಆನೆಗಳು ಹಾಗೂ 100 ಕಾಡುಕೋಣಗಳು(elands) ಸೇರಿವೆ. 

Latest Videos

ಒಂದೇ ರಾತ್ರಿ 11 ರೈತರ ಪಂಪಸೆಟ್ ಕೇಬಲ್ ಕಳ್ಳತನ ಮಾಡಿದ ಖದೀಮರು; ಬರದ ಪರಿಸ್ಥಿತಿಗೆ ರೈತರು ಕಣ್ಣೀರು

ಕಾಡುಪ್ರಾಣಿಗಳ ಹತ್ಯೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆದು ಈ ಘೋಷಣೆ ಮಾಡುತ್ತಿರುವುದಾಗಿ ಸಚಿವಾಲಯವೂ ಹೇಳಿದೆ.  ಹೀಗೆ ಹತ್ಯೆ ಮಾಡುವ ಪ್ರಾಣಿಗಳನ್ನು ರಾಷ್ಟ್ರೀಯ ಉದ್ಯಾನವನಗಳಿಂದ ಹಾಗೂ ಪ್ರಾಣಿಗಳ ಸಂಖ್ಯೆಗಳು ಹೆಚ್ಚು ಕಡಿಮೆ ಆಗದಂತೆ ಹೇರಳವಾಗಿ ಪ್ರಾಣಿಗಳನ್ನು ಹೊಂದಿರುವ  ಪ್ರದೇಶದಿಂದ ಹಿಡಿದು ತಂದು ಹತ್ಯೆ ಮಾಡಲಾಗುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನಮೀಬಿಯಾದ ನಾಗರಿಕರ ಅನುಕೂಲಕ್ಕಾಗಿ ಬಳಸಲಾಗುತ್ತದೆ, ಇದು ನಮ್ಮ ಸಂವಿಧಾನಿಕ ಆದೇಶಕ್ಕೆ ಅನುಗುಣವಾಗಿದೆ ಹಾಗೂ ಈ ಪ್ರಕ್ರಿಯೆಯೂ ತುಂಬಾ ಅಗತ್ಯವಾಗಿದೆ ಎಂದು ನಮೀಬಿಯಾದ ಸಚಿವಾಲಯವೂ ಹೇಳಿಕೆಯಲ್ಲಿ ತಿಳಿಸಿದೆ.

ನಮೀಬಿಯಾದ ಈ ತೀವ್ರವಾದ ಬರಗಾಲವೂ ಜಾಗತಿಕವಾಗಿ ಗಮನ ಸೆಳೆದಿದ್ದು, ಈ ಬಗ್ಗೆ ಮಾತನಾಡಿದ ವಿಶ್ವಸಂಸ್ಥೆಯ ಪ್ರಧಾನಿ ಕಾರ್ಯದರ್ಶಿ ಅಂಟೋನಿಯೊ ಗುಟೆರ್ರೆಸ್, ನಮೀಬಿಯಾದ ಬರದ ಪರಿಸ್ಥಿತಿಯೂ ಮಾನವೀಯ  ಬಿಕ್ಕಟ್ಟಾಗಿದ್ದು, ನಾವು ಅದರ ಬಗ್ಗೆ ಹೆಚ್ಚು ಮಾತನಾಡಿಲ್ಲ, ದೇಶದಲ್ಲಿ ಆಹಾರ ಸಂಗ್ರಹವು ಸುಮಾರು 84 ಪ್ರತಿಶತದಷ್ಟು ಖಾಲಿಯಾಗಿದೆ. ದೇಶದ ಅರ್ಧದಷ್ಟು ಜನಸಂಖ್ಯೆ ಬರದ ಕಾರಣದಿಂದ ತೀವ್ರ ಹಸಿವಿನಿಂದ ಬಳಲಲಿವೆ. ದಕ್ಷಿಣ ಆಫ್ರಿಕಾದಲ್ಲಿ 2023ರಿಂದಲೂ ತೀವ್ರ ಬರವಿದೆ.  ಏರಿಕೆಯಾಗುತ್ತಿರುವ ತೀವ್ರ ತಾಪಮಾನದಿಂದಾಗಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ, ಇಲ್ಲಿ ಫೆಬ್ರವರಿ ತಿಂಗಳಲ್ಲಿ ಮಳೆಗಾಲವಿದ್ದು, ಈ ಬಾರಿ ವಾರ್ಷಿಕವಾಗಿ ಬರುವ ಮಳೆಯ ಶೇ.20ರಷ್ಟು ಮಾತ್ರ ಮಳೆಯಾಗಿದೆ.

click me!