Asianet Suvarna News Asianet Suvarna News

ಅರೆ ಬೆಂದ ಹಂದಿ ಮಾಂಸ ತಿಂದರೆ ಏನಾಗುತ್ತೆ? ಎಕ್ಸ್‌ ರೇ ನೋಡಿ ವೈದ್ಯರೇ ಬೆಚ್ಚಿಬಿದ್ದಿದ್ದು ಯಾಕೆ?

ಅರೆ ಬೆಂದ ಹಂದಿ ಮಾಂಸ ತಿಂದ ವ್ಯಕ್ತಿಯೊಬ್ಬರ ಎಕ್ಸ್ ರೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಿಂದ ಉಂಟಾಗುವ ಅಪಾಯದ ಬಗ್ಗೆ ವೈದ್ಯರು ಎಚ್ಚರಿಸಿದ್ದಾರೆ. 'ಸಿಸ್ಟಿಕ್ ಸರ್ಕೋಸಿಸ್' ಎಂಬ ಪರಾವಲಂಬಿ ಸೋಂಕಿನಿಂದ ಈ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದುಬಂದಿದೆ.

Doctors shocked after seeing the ct scan of a person who ate half cooked pork meat mrq
Author
First Published Sep 1, 2024, 1:17 PM IST | Last Updated Sep 1, 2024, 1:17 PM IST

ನವದೆಹಲಿ: ಮನುಷ್ಯರ ದೇಹ ಮೂಳೆ ಮಾಂಸಖಂಡಗಳಿಂದ ರಚನೆಯಾಗಿದೆ. ಮೂಳೆಗಳಿಗೆ ಸಂಬಂಧಿಸಿದ ಆರೋಗ್ಯಕರ ಸಮಸ್ಯೆಗಳು ಕಂಡು ಬಂದ್ರೆ ಎಕ್ಸ್ ರೇ ಮೂಲಕ ಕಂಡು ಹಿಡಿಯಬಹುದಾಗಿದೆ. ಇದೀಗ ಎಕ್ಸ್ ರೇ ಫೋಟೋ ವೈರಲ್ ಆಗಿದ್ದು, ಅರ್ಧ ಬೆಂದ ಹಂದಿ ಮಾಂಸ (Half Boiled pork Meat) ತಿಂದ ವ್ಯಕ್ತಿಯ ಎಕ್ಸ್ ರೇ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಸಿಬಿಸಿಯಾಗಿ ಬೇಯಿಸಿದ ಹಂದಿ ಮಾಂಸ ತಿಂದರೆ ದೇಹದ ಮೇಲೆ ಯಾವ ಪರಿಣಾಮ ಬೀರುತ್ತೆ ಎಂಬುದರ  ಬಗ್ಗೆ ಈ ಫೋಟೋ ತಿಳಿಸುತ್ತದೆ. ಡಾಕ್ಟರ್ ಸ್ಯಾಮ್ ಗ್ಯಾಲಿ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡು, ನಾನು ನೋಡಿದ ಕ್ರೇಜಿಸ್ಟ್ CT ಸ್ಕ್ಯಾನ್‌ಗಳಲ್ಲಿ ಒಂದಾಗಿದೆ. ಇದನ್ನು ಯಾವ ರೋಗ ಎಂದು ಕರೆಯಬಹುದು ಎಂದು ಬರೆದುಕೊಂಡಿದ್ದಾರೆ.

ಕಾಲುಗಳ ಸ್ನಾಯುಗಳ ಸೋಂಕಿನಿಂದ ಬಳಲುತ್ತಿರುವ ಸಿಟಿ ಸ್ಕ್ಯಾನ್ ಇದಾಗಿದೆ. ಈ ರೋಗವು "ಸಿಸ್ಟಿಕ್ ಸರ್ಕೋಸಿಸ್" ಎಂಬ ಪರಾವಲಂಬಿಯಿಂದ ಉಂಟಾಗುತ್ತದೆ. ಇದು ಪರಾವಲಂಬಿ ಟೇನಿಯಾ ಸೋಲಿಯಂನ ಲಾರ್ವಾಗಳಿಂದ ಉಂಟಾಗುವ ಸೋಂಕು, ಇದನ್ನು ವೈದ್ಯಕೀಯ ಭಾಷೆಯಲ್ಲಿ "ಪೋರ್ಕ್ ಟೇಪ್ ವರ್ಮ್" ಎಂದೂ ಕರೆಯಲಾಗುತ್ತದೆ.

ಅರೆ ಬಂದ ಹಂದಿ ಮಾಂಸ ತಿನ್ನುವದರಿಂದ ಸಿಸ್ಟ್ ಟಿ.ಸೋಲಿಯಮ್ ಸೋಂಕು ತಗಲುತ್ತದೆ.  ಸಿಸ್ಟ್ ಟಿ.ಸೋಲಿಯಮ್‌ನಲ್ಲಿರುವ ಲಾರ್ವಾಗಳು ಮಾನವ ದೇಹದಲ್ಲಿ ಮೊಟ್ಟೆಯೊಡೆದು ಕರುಳಿನ ಗೋಡೆಗೆ ಪ್ರವೇಶಿಸಿ ಅದನ್ನು ನಾಶ ಮಾಡುವ ಕೆಲಸ ಮಾಡುತ್ತದೆ. ನಂತರ ಲಾರ್ವಾಗಳು ದೇಹದ ಎಲ್ಲಾ ಭಾಗವನ್ನು ತಲುಪಿ ಅನಾರೋಗ್ಯವನ್ನುಂಟು ಮಾಡುತ್ತವೆ. ಇದರಿಂದ ಸ್ನಾಯುಗಳು ಮತ್ತು ಮೆದುಳಿನಲ್ಲಿ ಗಟ್ಟಿಯಾದ ಕ್ಯಾಲ್ಸಿಫೈಡ್ ಚೀಲ ಅಥವಾ ಗಡ್ಡೆ ರೀತಿ ನಿರ್ಮಾಣವಾಗುತ್ತದೆ. ಇದು ಚರ್ಮದ ಅಡಿಯಲ್ಲಿ ಉಂಡೆಯ ರೀತಿಯಲ್ಲಿ ರಚನೆಯಾದಂತೆ ಆಗುತ್ತದೆ. ನಂತರ ಈ ಗಡ್ಡೆಯು ಮಾನವ ದೇಹದಲ್ಲಿ ಸಣ್ಣ ಬಿಳಿ ಚುಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಿಳಿ ಚುಕ್ಕೆಗಳನ್ನು ಸಿಟಿ ಸ್ಕ್ಯಾನ್ ಚಿತ್ರದಲ್ಲಿ ನೋಡಬಹುದು. ಈ ಲಾರ್ವಾಗಳು ದೇಹದ ಎಲ್ಲಾ ಭಾಗಗಳನ್ನು ನಾಶಗೊಳಿಸುತ್ತಾ ಸಾಗುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮೇಲೆಯೂ ಇದು ಪರಿಣಾಮ ಬೀರುತ್ತದೆ. 

ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆ: ಹೆಚ್ಚಾಗ್ತಿದೆ ಕಾಂಡೋಮ್ ಇಲ್ಲದೇ ಲೈಂಗಿಕ ಸಂಬಂಧ ಬೆಳೆಸೋ ಟ್ರೆಂಡ್!

ಡಾಕ್ಟರ್ ಗ್ಯಾಲಿ ಪ್ರಕಾರ, ಲಾರ್ವಾಗಳು ಮೆದುಳಿಗೆ ತಲುಪಿ ಅಲ್ಲಿಯ ಅಂಗಾಂಶಗಳಲ್ಲಿ ಚೀಲ ಅಥವಾ ಗಡ್ಡೆ ನಿರ್ಮಿಸಿದರೆ ಜನರು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ವಿಶೇಷ ರೂಪವನ್ನು ನ್ಯೂರೋಸಿಸ್ಟಿಸರ್ಕೋಸಿಸ್ ಎಂದು ಕರೆಯಲಾಗುತ್ತದೆ. ತಲೆನೋವು, ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ದೇಹ ಹಂತ ಹಂತವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಮುಂದೆ ಗಂಭೀರ ನರಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಟೇನಿಯಾ ಸೋಲಿಯಂ ಎಂಬ ಟೇಪ್ ವರ್ಮ್ ತನ್ನ ಮೊಟ್ಟೆಗಳನ್ನು ತಿನ್ನುವ ಮೂಲಕ ಮಾನವ ದೇಹವನ್ನು ಪ್ರವೇಶಿಸುತ್ತದೆ. ಈ  ಮೊಟ್ಟೆಗಳು 5 ರಿಂದ 12 ವಾರಗಳಲ್ಲಿ ಮಾನವನ ಕರುಳಿನಲ್ಲಿ ವಯಸ್ಕ ಟೇಪ್ ವರ್ಮ್‌ಗಳಾಗಿ ಬೆಳೆಯುತ್ತವೆ. ಆದ್ರೆ ಇದು ನೇರವಾಗಿ ಸ್ಟಿಸರ್ಕೋಸಿಸ್‌ಗೆ ಕಾರಣವಾಗಲ್ಲ ಎಂದು ಹೇಳುತ್ತಾರೆ.

ಸ್ಯಾಮ್ ಘ್ಯಾಲಿ ಮಾಡಿರುವ ಈ ಪೋಸ್ಟ್ ಇದುವರೆಗೂ 6.7 ಮಿಲಿಯನ್‌ಗೂ ಹೆಚ್ಚು ವ್ಯೂವ್ ಪಡೆದುಕೊಂಡಿದೆ. 1 ಸಾವಿರಕ್ಕೂ ಅಧಿಕ ಬಾರಿ ರೀ ಟ್ವೀಟ್ನ ಜೊತೆ ಸಾವಿರಾರು ಕಮೆಂಟ್‌ಗಳು ಬಂದಿವೆ. ಈ ಪೋಸ್ಟ್‌ಗೆ ಕಮೆಂಟ್ ಮಾಡುವ ಮೂಲಕ ಅರೆ ಬೆಂದ ಮಾಂಸ ಸೇವನೆಯ ಕುರಿತು ಚರ್ಚೆ ನಡೆಸಿದ್ದಾರೆ. ಕೆಲವರು ಅರ್ಧಬೆಂದ ತರಕಾರಿ ಸೇವನೆ ಒಳ್ಳೆಯದು. ಅದೇ ರೀತಿ ಅರೆ ಬೆಂದ ಮಾಂಸ ಅಥವಾ ಮೊಟ್ಟೆಯ ಕುರಿತು ನೆಟ್ಟಿಗರು ಪ್ರಶ್ನೆಗಳನ್ನು ಕೇಳಿದ್ದಾರೆ. 

ಮಹಿಳೆಯ ಕಿವಿಯಿಂದ ಹೊರಬಂದ ಜೇಡ! ವೈರಲ್ ವಿಡಿಯೋ ನೋಡಿ

Latest Videos
Follow Us:
Download App:
  • android
  • ios