
ಲಂಡನ್(ಫೆ.26): ಮಗಳನ್ನು ನೋಡಲು ಭಾರತಕ್ಕೆ ಬಂದ ಇಂಗ್ಲೆಂಡ್ ಮಹಿಳೆಗೆ ಸಿಕ್ಕಿದ್ದು ತನ್ನಮ್ಮನಿಗೆ ಸಂಬಂಧಿಸಿದ ಒಂದು ಕಾಗದ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಸಂದರ್ಭದಲ್ಲಿ ಹುಟ್ಟಿದ್ದ ಅಮ್ಮನ ಬರ್ತ್ ಸರ್ಟಿಫಿಕೇಟ್ ನೋಡಿದ ಇಂಗ್ಲೆಂಡ್ ಮಹಿಳೆ ಕಣ್ಣೀರಾಗಿದ್ದಾಳೆ.
ಇಂಗ್ಲೆಂಡ್‌ನ ಝೇಲಿಯನ್ ದೆಹಲಿಯಲ್ಲಿ ಓದುತ್ತಿರುವ ತನ್ನ ಮಗಳನ್ನು ನೋಡಲು ಪತಿಯೊಂದಿಗೆ ಭಾರತಕ್ಕೆ ಬಂದಿದ್ರು. ಸ್ವಲ್ಪ ಹೊತ್ತು ಮಗಳೊಂದಿಗೆ ಕಳೆದು ನಂತರ ಶಿಮ್ಲಾಗೆ ಹೋಗಿದ್ದರು. ಅಲ್ಲಿ ತನ್ನ ತಾಯಿ ಹುಟ್ಟಿದ್ದ ಸ್ಥಳಕ್ಕೆ ಬಂದು ಅಮ್ಮನ ಕುರಿತಾಗಿ ಹುಡುಕಿದ ಝೇಲಿಯನ್‌ಗೆ ಒಂದು ಭಾವನಾತ್ಮಕ ಗಿಫ್ಟ್ ಸಿಕ್ಕಿದೆ.
ಗಿನ್ನೆಸ್ ದಾಖಲೆ ವೀರ, 112 ವರ್ಷದ ವಿಶ್ವದ ಹಿರಿಯ ವ್ಯಕ್ತಿ ನಿಧನ
ತನ್ನ ತಾಯಿ ಶಿಮ್ಲಾದಲ್ಲಿ ಹುಟ್ಟಿದ್ದರು ಎಂಬುದನ್ನು ತಿಳಿದಿದ್ದ ಝೇಲಿಯನ್ ತನ್ನಮ್ಮನ ಬಗ್ಗೆ ಹುಡುಕುತ್ತಾ ಶಿಮ್ಲಾದ ಪಾಲಿಕೆ ಕಚೇರಿಗೆ ಬಂದಿದ್ದರು. ಆಕೆಗೆ ಆಶ್ಚರ್ಯ ಎಂಬಂತೆ 106 ವರ್ಷ ಹಳೆಯ ತನ್ನ ತಾಯಿಯ ಬರ್ತ್ ಸರ್ಟಿಫಿಕೇಟ್ ಆಕೆಗೆ ದೊರೆತಿದೆ. ಅದೂ ಕೈಯಲ್ಲಿ ಬರೆಯಲಾಗಿರುವ ಸರ್ಟಿಫಿಕೇಟ್.
ದಾಖಲೆ ಪ್ರಕಾರ ಝೇಲಿಯನ್ 1914ರ ಸೆಪ್ಟೆಂಬರ್ 22ರಂದು ಶಿಮ್ಲಾದಲ್ಲಿ ಹುಟ್ಟಿದ್ದರು. ಝೇಲಿಯನ್ ಅಜ್ಜ ಶಿಮ್ಲಾದಲ್ಲಿ ಕ್ಯಾಪ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಝೇಲಿಯನ್‌ಗೆ ತನ್ನ ತಾಯಿ ವಾಸವಾಗಿದ್ದ ಮನೆ ಸಿಗದಿದ್ದರೂ, ಆಕೆಯ ಬರ್ತ್ ಸರ್ಟಿಫಿಕೇಟ್ ಸಿಕ್ಕಿದೆ. ಆಶ್ಚರ್ಯ ಎಂದರೆ ಶಿಮ್ಲಾದ ಮಹಾನಗರ ಪಾಲಿಕೆಯಲ್ಲಿ 1870ರಿಂದಲೂ ಜನನ-ಮರಣ ದಾಖಲೆಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ