ವಧುವಾದ ತಾಯಿಯ ನೋಡಿ ಓಡಿ ಬಂದು ತಬ್ಬಿಕೊಂಡ ಪುಟ್ಟ ಬಾಲಕ

Published : May 02, 2022, 11:37 AM IST
ವಧುವಾದ ತಾಯಿಯ ನೋಡಿ ಓಡಿ ಬಂದು ತಬ್ಬಿಕೊಂಡ ಪುಟ್ಟ ಬಾಲಕ

ಸಾರಾಂಶ

ಪುಟ್ಟ ಬಾಲಕ ಹಾಗೂ ತಾಯಿಯ ವಿಡಿಯೋ ವೈರಲ್‌ ಅಮ್ಮನನ್ನು ನೋಡಿ ಓಡಿ ಬಂದ ಬಾಲಕ ಮದುವೆಗೆ ಸಿದ್ಧಗೊಂಡಿರುವ ಅಮ್ಮ

ಮದುವೆಗೆ ಸಿದ್ಧಗೊಂಡು ಮಧುವಣಗಿತ್ತಿಯಂತೆ ಸಿದ್ಧಳಾದ ತಾಯಿಯ ಕಂಡು ಪುಟ್ಟ ಬಾಲಕ ಓಡಿ ಬಂದು ಮಗುವನ್ನು ತಬ್ಬಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ತಾಯಿ ಮಧುಮಗಳು ಧರಿಸುವ ಶ್ವೇತವರ್ಣದ ಗೌನ್ ಧರಿಸಿ ಕೈಯಲ್ಲಿ ಹೂಗುಚ್ಛವನ್ನು ಹಿಡಿದು ಮದುವೆ ಮಂಟಪದತ್ತ ನಡೆದುಕೊಂಡು ಬರುತ್ತಿರುತ್ತಾಳೆ. ಈ ವೇಳೆ ತಾಯಿಯನ್ನು ಬಾಲಕ ನೋಡಿದ್ದು, ತಾಯಿಯತ್ತ ಪುಟ್ಟ ಕಂದ ಓಡಿ ಹೋಗುತ್ತಾನೆ. ಈ ವೇಳೆ ಕಣ್ಣೀರು ಹಾಕುವ ತಾಯಿ ಮಗುವನ್ನು ತಬ್ಬಿ ಹಿಡಿದುಕೊಂಡು ಒಂದು ಕೈಯಲ್ಲಿ ಬಾಲಕನನ್ನು ಮತ್ತೊಂದು ಕಡೆ ಆಕೆಯ ತಂದೆಯ ಕೈಯನ್ನು ಹಿಡಿದುಕೊಂಡು ಬರುತ್ತಾಳೆ.  

ಮದುವೆಯ ದಿನದಂದು ಹಜಾರದಲ್ಲಿ ನಡೆದುಕೊಂಡು ಹೋಗುತ್ತಿರುವ ತನ್ನ ತಾಯಿಯ ಬಳಿಗೆ ಪುಟ್ಟ ಬಾಲಕ ಓಡುತ್ತಿರುವುದನ್ನು ತೋರಿಸುವ ಹೃದಯವನ್ನು ಕರಗಿಸುವ ವಿಡಿಯೋ ಇದಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಗುಡ್ ನ್ಯೂಸ್ ಕರೆಸ್ಪಾಂಡೆಂಟ್ ಪುಟವು ಪೋಸ್ಟ್ ಮಾಡಿದೆ. ಹೇ ಮಾಮ್ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಮುದ್ದಾದ ಪುಟ್ಟ ಬಾಲಕ ತನ್ನ ತಾಯಿ ಹಜಾರದಲ್ಲಿ ನಡೆಯುವುದನ್ನು ನೋಡುತ್ತಾನೆ. ನಂತರ ಓಡಿ ಹೋಗಿ ಆಕೆಯನ್ನು ತಬ್ಬಿಕೊಳ್ಳುತ್ತಾನೆ. ವೀಡಿಯೊವನ್ನು 30 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

 

ಮಗುವನ್ನು ಬಿಟ್ಟು ಕೆಲ್ಸಕ್ಕೆ ಹೋಗ್ತಿದ್ದೀನಿ ಅನ್ನೋ ಬೇಜಾರಾ ? Mom Guilt ಹೋಗಲಾಡಿಸಲು ಹೀಗೆ ಮಾಡಿ

ವಿಡಿಯೋ ಯಾವ ದೇಶದ್ದು ಎಂಬ ಉಲ್ಲೇಖವಿಲ್ಲ. ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಆ ಮನೆಯ ಸಂತೋಷವೇ ಬೇರೆ ಅದರಲ್ಲೂ ಅಮ್ಮನಿಗೆ ಯಾವಾಗಲೂ ತನ್ನ ಪುಟ್ಟ ಕಂದನ ತುಂಟಾಟವನ್ನು ನೋಡುವುದೇ ಕೆಲಸ. ಅಲ್ಲದೇ ನನ್ನಂತೆ ನನ್ನ ಕಂದ ನನ್ನನ್ನು ಗುರುತಿಸುತ್ತಾನೆಯೇ ಇಲ್ಲವೋ  ಎಂದು ತಿಳಿದುಕೊಳ್ಳುವ ಕುತೂಹಲವೂ ತಾಯಿಗೆ ಸದಾ ಇರುವುದು. ಅದಕ್ಕೆ ತಕ್ಕಂತೆ ಹಾಲುಗಲ್ಲದ ಪುಟ್ಟ ಕಂದಮ್ಮಗಳು ತಮ್ಮ ಅಮ್ಮ ಯಾರು ಎಂಬುದನ್ನು ಪತ್ತೆ ಮಾಡಲು ಕೆಲವೊಮ್ಮ ಗೊಂದಲಕ್ಕೊಳಗಾಗುತ್ತವೆ. ಹಾಗೆಯೇ ಇಲ್ಲಿ ತನ್ನ ತಾಯಿಯಂತೆಯೇ ವೇಷ ಧರಿಸಿ ಕೂತ ಹೆಂಗೆಳೆಯರ ಮಧ್ಯೆ ನನ್ನ ಅಮ್ಮ ಯಾರೂ ಎಂದು ಹುಡುಕಲು ಪರದಾಡುತ್ತಿರುವ ಮಗುವಿನ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರಿಗೂ ಮುದ ನೀಡುತ್ತಿದೆ. 

Parenting Challenge: ರಾಶಿಯ ಅನುಸಾರ, ತಾಯಿಯಾಗಿ ನೀವು ಹೇಗಿರಲಿದ್ದೀರಿ?
 

ಈ ವಿಡಿಯೋದಲ್ಲಿ ಅಮ್ಮ ಮನೆಯ ಒಳಗಿದ್ದಾಳೆ ಎಂಬುದನ್ನು ಅರಿತ ಮಗುವೊಂದು ಅಮ್ಮ ಅಮ್ಮ ಎನ್ನುತ್ತಾ ಖುಷಿಯಿಂದ ಬಾಗಿಲು ದಾಟಿ ಹಾಲ್‌ನೊಳಗೆ ಬರುತ್ತದೆ. ಆದರೆ ಅಲ್ಲಿ ನೋಡಿದರೆ ಅಮ್ಮನಂತೆಯೇ ಹಳದಿ ಬಣ್ಣದ ಸೀರೆಯುಟ್ಟ ಐದು ಆರು ಹೆಂಗಳೆಯರು ಮುಖ ಕಾಣದಂತೆ ತಲೆ ಮೇಲೆ ಮುಸುಕು ಹಾಕಿಕೊಂಡು ಕೈಯಲ್ಲಿ ಬಾ ಬಾ ಎಂದು ಎಲ್ಲರೂ ಮಗುವನ್ನು ಕರೆಯಲು ಶುರು ಮಾಡುತ್ತಾರೆ. ಇದರಿಂದ ಗೊಂದಲಕ್ಕೊಳಗಾದ ಮಗು ಮೊದಲ ಸಲ ಜೊತೆಯಲ್ಲಿ ಕುಳಿತಿದ್ದ ಒಬ್ಬರು ಮಹಿಳೆಯ ಬಳಿ ಅಮ್ಮ ಎಂದು ಹೋಗುತ್ತಾನೆ. ಆದರೆ ಕ್ಷಣದಲ್ಲೇ ಇದು ನನ್ನ ಅಮ್ಮ ಅಲ್ಲ ಎಂಬುದು ಆ ಮಗುವಿಗೆ ತಿಳಿಯುತ್ತದೆ. ಕೂಡಲೇ ಆ ಮಹಿಳೆಯ ಕೈಯಿಂದ ಕೆಳಗಿಳಿಯುವ ಮಗು ಕೊನೆಗೂ ತನ್ನ ಅಮ್ಮನ ಗುರುತಿಸುವಲ್ಲಿ ಯಶಸ್ವಿಯಾಗುತ್ತಾನೆ.  ಈ ವಿಡಿಯೋ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗಿದ್ದು,  18 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ