'ಸಣ್ಣ ಜ್ವರ' ಬ್ರೆಜಿಲ್ ಅಧ್ಯಕ್ಷರ ಬೆನ್ನು ಬಿಡದ ಕೊರೋನಾ, ಮತ್ತೆ ಪಾಸಿಟಿವ್!

By Suvarna News  |  First Published Jul 16, 2020, 8:33 PM IST

ಬ್ರೆಜಿಲ್ ಅಧ್ಯಕ್ಷರ ಬೆನ್ನು ಬಿಡದ ಕೊರೋನಾ/ ಎರಡನೇ ಟೆಸ್ಟ್ ನಲ್ಲಿಯೂ ಪಾಸಿಟಿವ್/ ಕೊರೋನಾ ಸಣ್ಣ ಜ್ವರ ಎಂದಿದ್ದ ಜೈರ್/ ಆರೋಗ್ಯವಾಗಿದ್ದೇನೆ ಎಂದು ಸಂದೇಶ


ಬ್ರೆಜಿಲ್ (ಜು.16)  ಏ..ಹೇ..ಕೊರೋನಾ ಅದೊಂದು ಸಣ್ಣ ಜ್ವರ.. ಬಂದರೆ ಏನಾಗಲ್ಲ.. ನೋಡಿಕೊಳ್ಳುತ್ತೇನೆ ಬಿಡಿ.. ಎಂದು ಮಾರಕ ವೈರಸ್‌ಗೆ ಸವಾಲು ಹಾಕುತ್ತ ಧಿಮಾಕು ತೋರಿಸುತ್ತಿದ್ದ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸಾನರೋಗೆ ಕೊರೋನಾ ತಗುಲಿತ್ತು. ನಂತರ ಅವರು ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದರು. ಈಗ ಮತ್ತೊಮ್ಮೆ ಪರೀಕ್ಷೆ ಮಾಡಿಸಲಾಗಿದ್ದು ಕಾಯಿಲೆ ಅವರನ್ನು ಬಿಟ್ಟು ಹೋಗಿಲ್ಲ.

ದೇಹದ ಉಷ್ಟಾಂಶ ಸಿಕ್ಕಾಪಟ್ಟೆ ಏರಿಕೆ ಕಂಡಾಗ ಅಧ್ಯಕ್ಷರು ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದರು.  ಲಾಕ್ ಡೌನ್ ಮಾಡಲೇಬಾರದು. ಅರ್ಥ ವ್ಯವಸ್ಥೆಗೆ ದೊಡ್ಡ ಹೊಡೆತವಾಗುತ್ತದೆ ಎಂದು ಹೇಳುತ್ತಿದ್ದ ಅಧ್ಯಕ್ಷರು ಕೊನೆಗೆ ತಮ್ಮ ಮುಖಕ್ಕೆ ಮಾಸ್ಕ್ ಧರಿಸಿದ್ದರು. ಈಗ ಎರಡನೇ ಸುತ್ತಿನ ಟೆಸ್ಟ್ ನಲ್ಲಿಯೂ ಪಾಸಿಟಿವ್ ಬಂದಿದ್ದು ಆತಂಕ ಹೆಚ್ಚಾಗಿದೆ.

Tap to resize

Latest Videos

ಬ್ರೆಜಿಲ್ ಅಧ್ಯಕ್ಷರ ವಿಡಿಯೋ ಸಂವಾದದಲ್ಲಿ ನಗ್ನ ಉದ್ಯಮಿ

 ಕೆಮ್ಮು ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತು.  ಸೋಮವಾರ ಪರಿಸ್ಥಿತಿ ಕೈಮೀರುವಂತೆ ಕಂಡಿದ್ದರಿಂದ ಕೊರೋನಾ ಟೆಸ್ಟ್ ಮಾಡಿಸಿಕೊಂಡೆ ಈಗ ಏನ್ ತೊಂದ್ರೆ ಇಲ್ಲ ಎಂದು  65 ವರ್ಷದ ಅಧ್ಯಕ್ಷರು ಹೇಳಿದ್ದರು. ಆದರೆ ಕೊರೋನಾ ಅವರನ್ನು ಬಿಟ್ಟು ಹೋಗಿಲ್ಲ.

ಫೇಸ್ ಬುಕ್ ಲೈವ್  ಬಂದಿದ್ದ ಅಧ್ಯಕ್ಷರು, ಟೆಸ್ಟ್ ಮಾಡಿಸಿದ ನಂತರ ಮತ್ತೆ ಪಾಸಿಟಿವ್ ಬಂದಿದೆ, ಆದರೆ ನಾನು ಶಕ್ತಿಯುತವಾಗಿದ್ದೇನೆ, ಯಾರೂ ಚಿಂತೆ ಮಾಡುವ ಕೆಲಸ ಇಲ್ಲ ಎಂದಿದ್ದಾರೆ.

click me!