3 ಬಾರಿ ಮುಂದೂಡಿಕೆ, ಕೊನೆಗೂ ನಡೆಯಿತು ಡೆನ್ಮಾರ್ಕ್ ಪ್ರಧಾನಿ ಮದುವೆ!

By Suvarna NewsFirst Published Jul 16, 2020, 7:33 PM IST
Highlights

ಒಂದಲ್ಲ, ಎರಡಲ್ಲ, 3 ಹಾರಿ ಡೆನ್ಮಾರ್ಕ್ ದೇಶದ ಪ್ರಧಾನಿ ಮದುವೆ ಮುಂದೂಡಿಕೆಯಾಗಿತ್ತು. ಪ್ರತಿ ಬಾರಿ ಮದುವೆ ಆಯೋಜನೆ ಮಾಡಿದಾಗ ಒಂದೊಂದು ವಿಘ್ನ ಎದುರಾಗುತ್ತಿತ್ತು. ಕೊನೆಗೂ ಡೆನ್ಮಾರ್ಕ್ ಪ್ರಧಾನಿ ಮದುವೆಯಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಡೆನ್ಮಾರ್ಕ್(ಜು.16): ಕೊರೋನಾ ವೈರಸ್ ಕಾರಣ ಹಲವರ ಮದುವೆ ಕಾರ್ಯಕ್ರಮಗಳು ರದ್ದಾಗಿದೆ. ಹಲವರು ಮದುವೆ ಮುಂದೂಡಿಕೆಯಾಗಿ ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿಲ್ಲ. ಇತ್ತ  ಡೆನ್ಮಾರ್ಕ್ ಪ್ರಧಾನಿ ಮದುವೆ ಹಲವು ಕಾರಣಗಳಿಂದ 3 ಬಾರಿ ಮುಂದೂಡಿಕೆಯಾಗಿತ್ತು. ಆದರೆ 4ನೇ ಬಾರಿ ಆಯೋಜನೆ ಯಶಸ್ವಿಯಾಗಿದೆ. 42ರ ಹರೆಯದ ಡೆನ್ಮಾರ್ಕ್ ಪ್ರಧಾನಿ ಮೆಟೆ ಫ್ರೆಡೆರಿಕ್ಸೆನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತುಮಕೂರು ಸ್ಮಾರ್ಟ್‌ ಸಿಟಿ ಅಭಿವೃದ್ಧಿಗೆ ಡೆನ್ಮಾರ್ಕ್ ನೆರವು

ಡೆನ್ಮಾರ್ಕ್ ದೇಶದ ಕಿರಿಯ ಹಾಗೂ ಮಹಿಳಾ ಪ್ರಧಾನಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರುವ ಫ್ರೆಡೆರಿಕ್ಸೆನ್, 55ರ ಹರೆಯದ ಸಿನಿಮಾ ನಿರ್ದೇಶಕ ಹಾಗೂ ಫೋಟೋಗ್ರಾಫರ್  ಟೆಂಗ್‌ಬರ್ಗ್ ಅವರನ್ನು ವರಿಸಿದ್ದಾರೆ.  ಫ್ರೆಡೆರಿಕ್ಸೆನ್ ಮದುವೆಗೆ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆ ಫೋಟೋಗಳನ್ನು ಪ್ರಧಾನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

JA❤️

A post shared by Mette Frederiksen (@mette) on Jul 15, 2020 at 7:54am PDT

ಕಳೆದ ವರ್ಷ ಫ್ರೆಡೆರಿಕ್ಸೆನ್ ಅವರ ಮದುವೆ ಆಯೋಜಿಸಲಾಗಿತ್ತು. ಆದರೆ ಜೂನ್ 5 ರಂದು ರಾಷ್ಟ್ರದ ಚುನಾವಣೆ ನಡೆದ ಕಾರಣ ಮದುವೆ ಮುಂದೂಡಿಕೆ ಮಾಡಲಾಗಿತ್ತು. 2ನೇ ಬಾರಿಗೆ ಮದುವೆ ಆಯೋಜನೆ ದಿನಾಂಕ ಪ್ರಕಟಿಸಿದಾಗ ಯುರೋಪಿಯನ್ ಯುನಿಯನ್ ಸಮ್ಮಿತ್ ಕಾರ್ಯಗಾರದ ಕಾರಣ ಮತ್ತೆ ಮದುವೆ ಮುಂದೂಡಿಕೆಯಾಗಿತ್ತು.

ಜೂನ್ 27, 2019ರಲ್ಲಿ ಫ್ರೆಡೆರಿಕ್ಸೆನ್ ಡೆನ್ಮಾರ್ಕ್ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. 

click me!